ಸ್ಯಾಂಡಲ್‌ವುಡ್‌ನ ಹಿರಿಯ ನಟ ಚರಣ್‌ರಾಜ್ ಕೊರೋನಾ ವಾರಿಯರ್ಸ್‌ಗೆ ಆಹಾರದ ಕಿಟ್ ವಿತರಿಸಿದ್ದಾರೆ. ಲಾಕ್‌ಡೌನ್ ದಿನಗಳಲ್ಲಿ ಜನರ ರಕ್ಷಣೆಗೆ ನಿಂತಿರುವ ಪೊಲೀಸರಿಗೆ ಆಹಾರ ಪೂರೈಸುವ ಕೈಂಕರ್ಯದಲ್ಲಿ ತೊಡಗಿದ್ದಾರೆ.

ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಿಗೆ ತೆರಳಿ ಆಹಾರ, ಜ್ಯೂಸ್ ನೀಡಿದ್ದಾರೆ. ತಮ್ಮ ಹಿತ ಕಾಯುವ ಪೊಲೀಸರಿಗೆ ಸಹಕಾರ ನೀಡಬೇಕಾದ್ದು ಜನತೆಯ ಕರ್ತವ್ಯ ಎಂದೂ ಚರಣ್‌ರಾಜ್ ಹೇಳಿದ್ದಾರೆ.

ಹೊಸ ಸಿನಿಮಾದಲ್ಲಿ ತಯಾರಿಯಲ್ಲಿದ್ದಾರೆ ನಟ ರಾಜ್‌ವರ್ಧನ್...

ಸ್ಯಾಂಡಲ್‌ವುಡ್ನ ಬಹಳಷ್ಟು ನಟ, ನಟಿಯರು ಕೊರೋನಾ ಕಷ್ಟಕಾಲದ ಸಂದರ್ಭ ಬಡ ಜನರಿಗೆ ನೆರವಾಗುತ್ತಿದ್ದಾರೆ. ಕಿಚ್ಚ ಸುದೀಪ್, ಉಪೇಂದ್ರ, ನೀನಾಸಂ ಸತೀಶ್ ಸೇರಿದಂತೆ ಬಹಳಷ್ಟು ನಟರು ಜನರ ನೆರವಿಗೆ ಧಾವಿಸಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ಜೋರಾಗಿದ್ದು, ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಈ ನಡುವಲ್ಲಿ ಕೆಲವೆಡೆ ಆಕ್ಸಿಜನ್ ಕೊರತೆಯೂ ಎದುರಾಗಿತ್ತು.