ನಟ ಸಂಚಾರಿ ವಿಜಯ್ ನಟಿಸಿದ ಕೊನೆ ಚಿತ್ರ 'ಪುಕ್ಸಟ್ಟೆ ಲೈಫ್‌' ರಿಲೀಸ್ ಅಗುತ್ತಿದೆ. ಬೀಗ ರಿಪೇರಿ ಮಾಡುವವನ ಪಾತ್ರದಲ್ಲಿ ಸಂಚಾರಿ

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ನಟಿಸಿರುವ 'ಪುಕ್ಸಟ್ಟೆ ಲೈಫ್‌' ಸಿನಿಮಾ ಸೆಪ್ಟೆಂಬರ್‌ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಸಂಚಾರಿ ವಿಜಯ್‌ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಅರವಿಂದ್‌ ಕುಪ್ಳಿಕರ್‌ ನಿರ್ದೇಶನದ ಮೊದಲ ಸಿನಿಮಾ ಇದು.

ಈ ಚಿತ್ರದಲ್ಲಿ ವಿಜಯ್‌ ಬೀಗ ರಿಪೇರಿ ಮಾಡುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಹಣದ ಹಿಂದೆ ಬಿದ್ದರೆ ಏನೆಲ್ಲ ಆಗುತ್ತದೆ ಎಂಬುದು ಚಿತ್ರದ ಕತೆ. ಮಾತಂಗಿ ಪ್ರಸನ್ನ ಚಿತ್ರದ ನಾಯಕಿ. ಉಳಿದಂತೆ ರಂಗಾಯಣ ರಘು, ಅಚ್ಯುತ್‌ ಕುಮಾರ್‌ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ವಾಸು ದೀಕ್ಷಿತ್‌ ಸಂಗೀತ, ಗುರುಮೂರ್ತಿ ಕ್ಯಾಮೆರಾ ಚಿತ್ರಕ್ಕಿದೆ. ನಾಗರಾಜ್‌ ಸೋಮಯಾಜಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ನಾನು ಅವನಲ್ಲ ಅವಳು ಚಿತ್ರಕ್ಕೆ ಭಾರಿ ಟಿಆರ್‌ಪಿ!

ಸಂಚಾರಿ ವಿಜಯ್ ನಮ್ಮೊಂದಿಗೆ ಇನ್ನಿಲ್ಲವಾದರೂ ಅವರು ಅಭಿನಯಿಸಿರುವ ಸಿನಿಮಾಗಳ ಮೂಲಕ ನಮ್ಮೆಲ್ಲರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಕೆಲವು ದಿನಗಳ ಹಿಂದೆ ಟಿವಿಯಲ್ಲಿ 'ನಾನು ಅವನಲ್ಲ ಅವಳು' ಸಿನಿಮಾ ಪ್ರಸಾರ ಮಾಡಲಾಗಿತ್ತು, ಹೆಚ್ಚಿನ ವೀಕ್ಷಣೆ ಪಡೆದುಕೊಂಡು ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವಿಜಯ್ ಅವರ ನೆನಪಲ್ಲಿ ಅವರ ಹುಟ್ಟುಹಬ್ಬದ ದಿನ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಮಗಳಿಗೆ 'ಗಿಯ' ಎಂದು ನಾಮಕರಣ ಮಾಡಿದ್ದಾರೆ.