ಆ್ಯಕ್ಟ್‌ 1978 ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ನಟ ಸಂಚಾರಿ ವಿಜಯ್ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ವಿಜಯ್ ಇಷ್ಟೊಂದು ಫಿಟ್ ಆಗಿರಲು ಕಾರಣವೇನು ಎಂದು ಕೇಳುತ್ತಿದ್ದವರಿಗೆ ಈ ಫೋಟೋ ಮೂಲಕವೇ ಉತ್ತರ ಸಿಕ್ಕರೂ ಸಿಗಬಹುದು....

ಕಂಗನಾ ರಣಾವತ್ ಭೇಟಿ ಮಾಡಿದ ಸಂಚಾರಿ ವಿಜಯ್; 'ಎಷ್ಟು ಬೇಕಾದ್ರೂ ಫೋಟೋ ಹಿಡಿಯಿರಿ'! 

ಸಂಚಾರಿ ವಿಜಯ್ ಬ್ಯಾಡ್ಮಿಂಟನ್‌ ಆಟ ಆಡುವಾಗ ಸರ್ಪ್ರೈಸ್‌ ಆಗಿ ಕಿಚ್ಚ ಸುದೀಪ್‌ ಭೇಟಿ ನೀಡಿದ್ದಾರೆ. ಈ ಸುಂದರ ಸಂಜೆ ಬಗ್ಗೆ ವಿಜಯ್ ಬರೆದುಕೊಂಡಿದ್ದಾರೆ. 

'ನಿನ್ನೆ ಸಂಜೆ ಎಂದಿನಂತೆ ನಾನು, ನನ್ನ ಗೆಳೆಯರು ಫೆಟ್ಟಲ್ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಬ್ಯಾಡ್ಮಿಂಟನ್ ಆಡುತ್ತಾ ಇದ್ದೆವು. ಹೊರಗೆ ಇಳಿ ಸಂಜೆಯಾಗಿ ಮಂದ ಬೆಳಕು ಚೆಲ್ಲಿತ್ತು. ಇದ್ದಕ್ಕಿದ್ದ ಹಾಗೆ ಬ್ಯಾಡ್ಮಿಂಟನ್ ಕೋರ್ಟಿನ ಬಾಗಿಲು ತೆರೆದು 6 ಅಡಿಯ ಆಕೃತಿಯೊಂದು ಅಸ್ಪಷ್ಟವಾಗಿ ಕಾಣಿಸಿತು. ನನಗೆ ಈ ಆಕೃತಿಯನ್ನು ಎಲ್ಲೋ ನೋಡಿದ ಹಾಗೆ ಕಾಣುತ್ತಿದೆಯಲ್ಲಾ, ಎಂದು ದಿಟ್ಟಿಸಿ ಹತ್ತಿರ ಹೋಗಿ ನೋಡಿದರೆ ಬೆಳಕಲ್ಲಿ ಕಂಡಿದ್ದು ನಮ್ಮ ಕಿಚ್ಚ ಸುದೀಪ್ ಸರ್. ನಮಗೋ ಆಶ್ಚರ್ಯವೋ ಆಶ್ಚರ್ಯ. ಸಾಮಾನ್ಯವಾಗಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳದ ಅವರು ಹೀಗೆ ದಿಢೀರನೆ ಕಾಣಿಸಿಕೊಂಡಿದ್ದು, ಒಂದು ಕ್ಷಣ ಮೂಕವಿಸ್ಮಿತರಾದೆವು. ಎಲ್ಲರೊಡನೆ ಒಂದಾಗಿ ಆತ್ಮೀಯವಾಗಿ ನಮ್ಮೆಲ್ಲರ ಯೋಗಕ್ಷೇಮವನ್ನು ವಿಚಾರಿಸುತ್ತಾ ಮಾತನಾಡಿಸುತ್ತಾ ಒಳ ಬರುವಾಗ ಇವರೇನಾ ತೆರೆಯ ಮೇಲೆ ಅಬ್ಬರಿಸೋ ಕಿಚ್ಚ ಸರ್ ಅನ್ನಿಸಿದ್ದು ಸುಳ್ಳಲ್ಲ. 

ಪುಕ್ಸಟ್ಟೆ ಲೈಫಿಗಾಗಿ ಮುಸಲ್ಮಾನನಾದ ಸಂಚಾರಿ ವಿಜಯ್ ! 

ಆನಂತರ ಸುಮಾರು ಒಂದು ಗಂಟೆ ಕಾಲ ನಮ್ಮೊಡನೆ ಆಟವಾಡಿ ಒಂದಷ್ಟು ದೈಹಿಕ ಕಸರತ್ತಿನ ಬಗ್ಗೆ ಮಾತನಾಡಿದ್ದು, ಅದೇ ಎನರ್ಜಿ ಅಷ್ಟೇ ತೂಕದ ಮಾತುಗಳು. ಯಾವ ಹಮ್ಮು ಬಿಮ್ಮು ಇಲ್ಲದೇ ಎಲ್ಲರ ಜೊತೆಗೂಡಿ ಅವರ ಅಮೂಲ್ಯ ಸಮಯವನ್ನು ಕಳೆದದ್ದು ಒಂದು ಸುಂದರ ಸಂಜೆಗೆ ಸಾಕ್ಷಿಯಾಯಿತು. ಮತ್ತೆ ಯಾವ ಸಿನೆಮಾ ಮಾಡ್ತಾ ಇದ್ದೀರಿ? ಆ್ಯಕ್ಟ್ 1978 ಸಿನಿಮಾವನ್ನು ಮನೆಯಲ್ಲಿಯೇ ನೋಡಿದೆ. ತುಂಬಾ ಚೆನ್ನಾಗಿದೆ ಎಂದು ತಂಡದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು. ಎಲ್ಲವೂ ಸಂಪೂರ್ಣ ಎನಿಸಿತು. ಹೀಗೆ ಕಳೆಯಿತು ಒಂದು ಸುಂದರ ಸಂಜೆ.' ಎಂದು ಬರೆದು ಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಅಪ್ಲೋಡ್ ಮಾಡಿದ ವಿಜಯ್ 'ಅಪರೂಪದ ಸಂಜೆ.  ಸುದೀಪ್ ಸರ್ ಜೊತೆ ಬ್ಯಾಡ್ಮಿಂಟನ್‌ ಆಟವಾಡುವ ಅವಕಾಶ. ನಮ್ಮನ್ನು ಇನ್ನಷ್ಟು ಮೋಟಿವೇಟ್‌ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್' ಎಂದು ಹೇಳಿದ್ದಾರೆ.