ರಂಗಭೂಮಿ ಹಿನ್ನಲೆಯಿಂದ ಬಂದಂತಹ ಕಲಾವಿದ ತನ್ನ ಅದ್ಭುತ ಅಭಿನಯದ ಮೂಲಕ ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯಪ್ರಶಸ್ತಿ ಪಡೆದು ಕನ್ನಡ ಚಿತ್ರರಂಗಕ್ಕೆ ಹೆಮ್ಮ ತಂದುಕೊಟ್ಟಂತ ನಟ ಸಂಚಾರಿ ವಿಜಯ್ ಖಾಸಗಿ ಲೈವ್‌ ಚಾಟ್‌ ಸಂದರ್ಶನದಲ್ಲಿ ಬಾಲಿವುಡ್‌ ನಟಿ ಕಂಗನಾ ಬಗ್ಗೆ ಮಾತನಾಡಿದ್ದಾರೆ.

ಪುಕ್ಸಟ್ಟೆ ಲೈಫಿಗಾಗಿ ಮುಸಲ್ಮಾನನಾದ ಸಂಚಾರಿ ವಿಜಯ್ !

2015ರಲ್ಲಿ  'ನಾನು ಅವನಲ್ಲ ಅವಳು' ಚಿತ್ರಕ್ಕೆ ಅತ್ಯುತ್ತಮ ನಟ  ರಾಷ್ಟ್ರಪ್ರಶಸ್ತಿಯನ್ನು ಪಡೆದರೆ, 'ಕ್ವೀನ್' ಚಿತ್ರಕ್ಕೆ ನಟಿ ಕಂಗನಾ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುರು. ಪ್ರಶಸ್ತಿ ಸಮಾರಂಭದಲ್ಲಿ ವಿಜಯ್ ಹಿಂದಿನ ಸಾಲಿನಲ್ಲಿ ಕುಳಿತಿದ್ದರು, ಕಾರ್ಯಕ್ರಮಕ್ಕೆ ಆಗಮಿಸಿದ ಕಂಗನಾ ಮೊದಲ ಸಾಲಿನಲ್ಲಿ ಅಮಿತಾಬ್ ಬಚ್ಚನ್ ಪಕ್ಕದಲ್ಲಿ ಕುಳಿತು ಹಿಂದೆ ಮುಂದೆ ನೋಡುತ್ತಾ ಯಾರನ್ನೋ ಹುಡುಕುತ್ತಿದ್ದರು. ಅಲ್ಲಿದ ಮ್ಯಾನೇಜರ್‌ ಒಬ್ಬರನ್ನು ಕರೆದು ಅತ್ಯುತ್ತಮ ನಟ ಪ್ರಶಸ್ತಿ ಯಾರಿಗೆ ಬಂದಿದೆ ಎಂದು ತಿಳಿದುಕೊಂಡು ಹಿಂದೆ ತಿರುಗಿ ವಿಜಯ್ ಅವರನ್ನು ಮುಂದೆ ಬಂದು ಕುಳಿತುಕೊಳ್ಳುವಂತೆ ಹೇಳಿದರಂತೆ.

ಸಿನಿಮಾ ಬಗ್ಗೆ ಮಾಹಿತಿ: 

ವಿಜಯ್‌ರನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡ ಕಂಗನಾ ತಮ್ಮ ಸಿನಿಮಾ ಬಗ್ಗೆ ತಿಳಿದುಕೊಂಡರಂತೆ. ಹಿಂದೆ ಕುಳಿತಿದ ವಿಜಯ್ ಅಣ್ಣ ಪೋಟೋ ಸೆರೆ ಹಿಡಿಯಲು ಕಷ್ಟ ಪಡುತ್ತಿದ್ದದನ್ನು ಕಂಡು ಕಂಗನಾ ವಿಜಯ್ ಬಳಿ ಕುಳಿತು ಕ್ಯಾಮೆರಾಗಿ ಮುಖಮಾಡಿ ಎಷ್ಟು ಬೇಕಾದರೂ ಫೋಟೋ ಹಿಡಿಯಿರಿ ಅಂದರಂತೆ.  ಅಂದೇ ಕಂಗನಾ ಪರಿಚಯವಾದ ವಿಜಯ್ ಆಕೆಯ ಗುಣವನ್ನು ಮೆಚ್ಚಿಕೊಂಡರು. ಒಬ್ಬ ಕಲಾವಿದನನ್ನು ಮತ್ತೊಬ್ಬ ಕಲಾವಿದ ಗುರುತಿಸಿ ಮಾತನಾಡಿಸಿ ಹೊಗಳುವುದು ಒಳ್ಳೆಯ ಗುಣ ಎಂದಿದ್ದಾರೆ.

ಆದಿತ್ಯ ಪಂಚೋಲಿಗೆ ರೇಪ್ ಪ್ರಕರಣದ ಬೆದರಿಕೆ ಹಾಕಿದ್ರಂತೆ ಕಂಗನಾ ಲಾಯರ್‌

ದಕ್ಷಿಣ ಭಾರತದಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚಿನ ಸದ್ದು ಮಾಡುತ್ತಿದ್ದರೆ ಉತ್ತರ ಭಾರತದಲ್ಲಿ ಕಂಗನಾ ವಿಚಾರ ಸುದ್ದಿಯಾಗುತ್ತಿದೆ. ಒಟ್ಟಿನಲ್ಲಿ ಕಂಗನಾರನ್ನು ಮೆಚ್ಚಿಕೊಳ್ಳುವವರು ಕೆಲವರು ಅಳಿದು ಗುಂಪುಗಾರಿಕೆ ಮಾಡುವವರು ಕೆಲವರು.