Samyuktha Hegde: ಕ್ರೀಮ್ ಸಿನಿಮಾದ ಚಿತ್ರೀಕರಣದ ವೇಳೆ ನಾಯಕಿ ಸಂಯುಕ್ತ ಹೆಗ್ಡೆಗೆ ಪೆಟ್ಟು ಬಿದ್ದಿದೆ
ಬೆಂಗಳೂರು (ಜು. 27): ಕ್ರೀಮ್ ಸಿನಿಮಾದ ಚಿತ್ರೀಕರಣದ ವೇಳೆ ನಾಯಕಿ ಸಂಯುಕ್ತ ಹೆಗ್ಡೆಗೆ (Samyuktha Hegde) ಪೆಟ್ಟು ಬಿದ್ದಿದೆ. ಸಿನಿಮಾದ ಫೈಟಿಂಗ್ ಸೀಕ್ವೆನ್ಸ್ ನ (Fighting Scene) ಚಿತ್ರೀಕರಣ ಸಂಧರ್ಭದಲ್ಲಿ ಈ ಅವಘಡ ನಡೆದಿದ್ದು, ಆಕ್ಷನ್ ಮಾಡುವಾಗ ಸಂಯುಕ್ತಾ ಬಲ ಭಾಗದ ಕಾಲಿಗೆ ಪೆಟ್ಟಾಗಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಸಂಯುಕ್ತಾ ಹೆಗ್ಡೆಗೆ ಸಧ್ಯ ಬೆಂಗಳೂರಿನ ಕಣ್ವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಭಿಷೇಕ್ ಬಸಂತ್ ನಿರ್ದೇಶನದ, ನಿರ್ಮಾಪಕ ಡಿ ಕೆ. ದೇವೇಂದ್ರ ನಿರ್ಮಾಣದ ಕ್ರೀಮ್ ಸಿನಿಮಾ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಡ್ಯೂಪ್ ಬಳಸಿ ಶ್ಯೂಟಿಂಗ್ ಮಾಡೋಣ ಎಂದು ಹೇಳಿದರೂ ನಟಿ ಸಂಯುಕ್ತ ಒಪ್ಪಿರಲಿಲ್ಲ ಎನ್ನಲಾಗಿದೆ. ಘಟನೆ ಸಂಬಂದ ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
