MHfilms.in ಡಿಜಿಟಲ್‌ ಪ್ಲಾಟ್‌ಫಾರಂನಲ್ಲಿ ಈ ಚಿತ್ರ ಪ್ರದರ್ಶನ ಆಗಲಿದೆ. ಟಿಕೆಟ್‌ ಬೆಲೆ 30 ರುಪಾಯಿಗಳನ್ನು ನಿಗದಿ ಮಾಡಲಾಗಿದೆ.

ಬೆಳಗಾವಿ ಮೂಲದ ಅಕ್ಷಯ್‌ ಚಂದ್ರಶೇಖರ್‌ ಈ ಚಿತ್ರದ ನಾಯಕ ಹಾಗೂ ನಿರ್ಮಾಪಕ. ಡ್ರಾಮಾ ಜ್ಯೂನಿಯರ್ಸ್‌ ಖ್ಯಾತಿಯ ಅಚಿಂತ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಡಿಜಿಟಲ್‌ ಲೋಕಲ್ಲಿ ಕ್ರೇಜಿ ಲೋಕ; ಯುಗಾದಿಗೆ ಶುರು ರವಿಚಂದ್ರನ್‌ ಯೂಟ್ಯೂಬ್‌ ಚಾನಲ್‌ 1N1LY 

‘ಮೂರು ವರ್ಷದ ಕನಸು ಇದು. ಮೊದಲಿಂದಲೂ ಭಗತ್‌ ಸಿಂಗ್‌ ಕುರಿತು ಸಿನಿಮಾ ಮಾಡುವ ಆಲೋಚನೆ ಇತ್ತು. ಅಂದಿನಿಂದ ಶುರುವಾಗಿದ್ದ ಜರ್ನಿಗೆ ಸಾಗರ್‌ ಜತೆಯಾದರು. ದಕ್ಷಿಣ ಭಾರತದಲ್ಲಿ ಅತೀ ಹೆಚ್ಚು ಬಜೆಟ್‌ನ ಕಿರುಚಿತ್ರವಿದು. ಇದಕ್ಕೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿತು. ಸೈನಿಕ ಹಾಗೂ ಭಗತ್‌ ಸಿಂಗ್‌ ಪಾತ್ರದಲ್ಲಿ ನಟಿಸಿದ್ದೇನೆ. ಮುಂದೆ ಇದೇ ಕತೆಯನ್ನು ಸಿನಿಮಾ ಮಾಡುವ ಆಸೆಯೂ ಇದೆ’ ಎಂದರು ಅಕ್ಷಯ್‌ ಚಂದ್ರಶೇಖರ್‌.

ಸಾಗರ್‌ ಪುರಾಣಿಕ್‌ ಅವರು ಆಜಾದ್‌ ಚಂದ್ರಶೇಖರ್‌ ಪಾತ್ರದಲ್ಲಿ ನಟಿಸಿದ್ದಾರೆ. ‘ಸ್ವಾತಂತ್ರ್ಯ ಪೂರ್ವದ ಶೈಲಿಯ ಕಟ್ಟಡ ಬೇಕಿತ್ತು. ಮಲ್ಲೇಶ್ವರಂ ಕಾಲೇಜನ್ನು ಬಳಸಿಕೊಂಡಿದ್ದೇವೆ. ಸೈನಿಕರ ಜತೆಗಿನ ಕಾಳಗವನ್ನು ತುರಹಳ್ಳಿ ಅರಣ್ಯದಲ್ಲಿ ಶೂಟ್‌ ಮಾಡಿದ್ದೇವೆ. ನಮ್ಮ ಚಿತ್ರ 20ಕ್ಕೂ ಹೆಚ್ಚು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆಗೆ ಪಾತ್ರವಾಗಿದೆ’ ಎಂಬುದು ನಿರ್ದೇಶಕರ ಮಾತು.