ಯುಗಾದಿ ಹಬ್ಬದಂದು ಕ್ರೇಜಿಸ್ಟಾರ್‌ ರವಿಚಂದ್ರನ್‌ ಯೂಟ್ಯೂಬ್‌ ಚಾನಲ್‌ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಎಂಟ್ರಿ ಆಗುತ್ತಿದ್ದಾರೆ. ಕ್ರೇಜಿ ಲೋಕದ ಈ ಡಿಜಿಟಲ್‌ ಲೋಕದ ಹೆಸರು ಒನ್‌ ಆಂಡ್‌ ಓನ್ಲಿ (1N1LY) ಎಂಬುದು.

ಏಪ್ರಿಲ್‌ 13ರಂದು ಅನಾವರಣಗೊಳ್ಳುವ ಈ ಕ್ರೇಜಿ ಯೂಟ್ಯೂಬ್‌ನಲ್ಲಿ ಕ್ರೇಜಿಸ್ಟಾರ್‌ ತಮ್ಮ ಜೀವನದ ಅನುಭವದ ಕತೆಗಳನ್ನು ಹೇಳಲಿದ್ದಾರೆ. ತಾವು ನಟಿಸಿದ ಸಿನಿಮಾಗಳ ಆಸಕ್ತಿಕರ ವಿಚಾರಗಳನ್ನೂ ಹಂಚಿಕೊಳ್ಳಲಿದ್ದಾರೆ. ಅಭಿಮಾನಿಗಳ ಜತೆ ಸಂವಾದವನ್ನೂ ನಡೆಸಲಿದ್ದಾರೆ. ಹೀಗೆ ಸಿನಿಮಾ, ಜೀವನ, ಅಭಿಮಾನ, ಸ್ನೇಹದ ಸುತ್ತ ರವಿಚಂದ್ರನ್‌ ಮಾತುಗಳು ಮೂಡಿ ಬರಲಿವೆ. ಕ್ರೇಜಿಸ್ಟಾರ್‌ ಸಿನಿಮಾ ಮತ್ತು ಬದುಕಿನ ಯಾವುದೇ ಅಧಿಕೃತ ಮಾಹಿತಿ ಬೇಕಿದ್ದರೆ ಇದೇ ಒನ್‌ ಆಂಡ್‌ ಓನ್ಲಿ ಯೂಟ್ಯೂಬ್‌ ಚಾನಲ್‌ ನೋಡಬಹುದು.

Add Asianetnews Kannada as a Preferred SourcegooglePreferred

ಯುಗಾದಿಯಂದು ಯೂಟ್ಯೂಬ್‌ನಲ್ಲಿ ಬರಲಿರುವ ಕ್ರೇಜಿಸ್ಟಾರ್‌!

‘ಕಮಿಂಗ್‌ ಸೂನ್‌’ ಎನ್ನುವ ಸಾಲುಗಳೊಂದಿಗೆ ಈಗಷ್ಟೆಎರಡು ಪ್ರೋಮೋಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟು ಹಾಕಿದ್ದಾರೆ. ಮುಂದೆ ಇದೇ ಹೆಸರಿನಲ್ಲಿ ಓಟಿಟಿ ಹಾಗೂ ವೆಬ್‌ಸೈಟ್‌ ಕೂಡ ಮಾಡುವ ಪ್ಲಾನ್‌ ರವಿಚಂದ್ರನ್‌ ಅವರದ್ದು.

Click and drag to move

‘ನನ್ನ ವಿಚಾರಗಳು ಹೊಸದಾಗಿ ಈಗಿನ ಜನರೇಷನ್‌ಗೆ ತಲುಪಬೇಕು. ಹೇಳುವ ಶಕ್ತಿ ನನಗೆ ಇದೆ. ಅದಕ್ಕೊಂದು ವೇದಿಕೆ ಬೇಕಿತ್ತು. ಅದುವೇ ಈ ಒನ್‌ ಆಂಡ್‌ ಓನ್ಲಿ ಹೆಸರಿನ ಯೂಟ್ಯೂಬ್‌ ಚಾನಲ್‌. ಇದು ನನ್ನ ಅನುಭವಗಳನ್ನು ಹೊತ್ತು ಬರುತ್ತಿರುವ ಈ ಜನರೇಷನ್‌ ವೇದಿಕೆ ಎನ್ನಬಹುದು. ಇಲ್ಲಿ ನೀವು ನನ್ನ ಜೀವನ ಪಯಣವನ್ನು ನೋಡಬಹುದು, ಕೇಳಬಹುದು. ಹಾಗೆ ನಾನು ಮಾಡುವ ಸಿನಿಮಾಗಳು, ಮಾಡಿರುವ ಚಿತ್ರಗಳ ಆಸಕ್ತಿಕರ ಸಂಗತಿಗಳು, ಮುಂದಿನ ಹೆಜ್ಜೆಗಳು, ಕಿರು ಚಿತ್ರಗಳು, ವೆಬ್‌ ಸರಣಿ... ಹೀಗೆ ನನ್ನದೇ ಸಿನಿಮಾ ಲೋಕದ ಹತ್ತಾರು ಸಂಗತಿಗಳನ್ನು ಅಧಿಕೃತವಾಗಿ ಈ ಯೂಟ್ಯೂಬ್‌ ಚಾನಲ್‌ನಲ್ಲಿ ಸಿಗಲಿವೆ’ ಎನ್ನುತ್ತಾರೆ ನಟ ರವಿಚಂದ್ರನ್‌.