Asianet Suvarna News Asianet Suvarna News

ಕ್ರೈಮ್‌ ಕಥಾಹಂದರದ ನಿರ್ಭಯಾ 2: ಗಾಯಕಿ ಸುಹಾನಾ ಸೈಯ್ಯದ್‌ ಈಗ ನಾಯಕಿ

  • ಕ್ರೈಮ್‌(Crime) ಕಥಾಹಂದರದ ನಿರ್ಭಯಾ 2(Nirbhaya 2)
  • ಗಾಯಕಿ ಸುಹಾನಾ ಸೈಯ್ಯದ್‌(Suhana sayed) ಈಗ ನಾಯಕಿ
Sa re ga ma pa fame Suhana Syed heroine in kannada movie Nirbhaya 2 dpl
Author
Bangalore, First Published Nov 24, 2021, 10:39 AM IST
  • Facebook
  • Twitter
  • Whatsapp

ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯ್ಯದ್‌ ಮುಖ್ಯಪಾತ್ರದಲ್ಲಿ ನಟಿಸಿರುವ ‘ನಿರ್ಭಯಾ 2’ ಚಿತ್ರ ಮುಹೂರ್ತ ಮುಗಿಸಿ ಶೂಟಿಂಗ್‌ ತಯಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ರಾಜು ಕುಣಿಗಲ್‌ ಚಿತ್ರದ ಬಗ್ಗೆ ಮಾತನಾಡಿದರು. ‘ಆಂಧ್ರ, ಮೈಸೂರಿನ ಅತ್ಯಾಚಾರ ಪ್ರಕರಣಗಳ ಜೊತೆಗೆ ದೆಹಲಿಯ ನಿರ್ಭಯಾ ಪ್ರಕರಣವನ್ನಿಟ್ಟು ಕಾಲ್ಪನಿಕವಾಗಿ ಈ ಚಿತ್ರದ ಕತೆ ಹಣೆಯಲಾಗಿದೆ. ಈ ಕ್ರೈಮ್‌ನ ಮೂಲ ಏನು, ಅದನ್ನು ಹೇಗೆ ಮಟ್ಟಹಾಕಬಹುದು ಅನ್ನೋದನ್ನು ಚಿತ್ರದಲ್ಲಿ ಕಮರ್ಷಿಯಲ್ಲಾಗಿ ಹೇಳಲಿದ್ದೇವೆ’ ಎಂದರು.

ಅರ್ಜುನ್‌ ಕೃಷ್ಣ, ಹರೀಶ್‌, ಕುಸುಮಾ ಮುಖ್ಯಪಾತ್ರದಲ್ಲಿದ್ದಾರೆ. ನಿರ್ಮಾಪಕ ಬಾಲಕೃಷ್ಣ ಕೆ ಆರ್‌, ಸಂಗೀತ ನಿರ್ದೇಶಕ ಆಕಾಶ ಪರ್ವ, ಸಿನಿಮಾಟೋಗ್ರಾಫರ್‌ ಗುಂಡ್ಲುಪೇಟೆ ಸುರೇಶ್‌ ಸುದ್ದಿಗೋಷ್ಠಿಯಲ್ಲಿದ್ದರು.

 

Follow Us:
Download App:
  • android
  • ios