ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ದ್ವಾರಕೀಶ್ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಚಿತ್ರ ನಿರ್ದೇಶಿಸಲು ಸಾಲ ಪಡೆದ ಹಣವನ್ನು ಹಿಂತಿರುಗಿಸಲು ಸಾಧ್ಯವಾಗದ ಕಾರಣ ಫೈನಾನ್ಷಿಯರ್ ಮನೆ ಬಾಗಿಲಿಗೆ ಬಂದು ಗಲಾಟೆ ಮಾಡಿದ್ದಾರೆ.

ಶಿವಣ್ಣ ಅಂದ್ರೆ ಫೆಂಟಾಸ್ಟಿಕ್‌, ವೆರಿ ಹಂಬಲ್‌, ವೆರಿ ಸಿನ್ಸಿಯರ್‌:ದ್ವಾರಕೀಶ್‌

ದ್ವಾರಕೀಶ್ ನಿರ್ದೇಶನದ 'ಆಯುಷ್ಮಾನ್‌ ಭವ' ನವೆಂವರ್ 15,2019 ರಂದು ರಾಜ್ಯಾದ್ಯಾಂತ ತೆರೆ ಕಂಡಿದ್ದು ಬಾಕ್ಸ್‌ ಆಫೀಸ್‌ ಮುಟ್ಟುವುದರಲ್ಲಿ ವಿಫಲವಾಗಿದೆ. ಚಿತ್ರ ನಿರ್ದೆಶಿಸಲು ದ್ವಾರಕೀಶ್ ಫೈನಾನ್ಷಿಯರ್ ಬಳಿ 5 ಕೋಟಿ ಸಾಲ ಪಡೆದಿದ್ದಾರೆ ಎನ್ನಲಾಗಿದೆ. ಲಾಸ್‌ನಲ್ಲಿ ಇದ್ದ ಕಾರಣ ಹಣವನ್ನು ಹಿಂತಿರುಗಿಸಲು ವಿಫಲರಾಗಿದ್ದಾರೆ. 

ಸಾಲ ಹಿಂತಿರುಗಿಸಲು ಫೈನಾನ್ಷಿಯರ್ 1 ವರ್ಷ ಸಮಯ ನೀಡಿದ್ದರು. ಆದರೆ ಸಮಯ ಮೀರಿದ ಕಾರಣ ರಮೆಶ್‌ HSR Layoutನಲ್ಲಿರುವ ದ್ವಾರಕೀಶ್ ಮನೆಗೆ ಹೋಗಿ ಏರುಧ್ವನಿಯಲ್ಲಿ ಮಾತನಾಡಿದ್ದಾರೆ. 

ತೆರೆಗೆ ಬರಲು ಸಿದ್ಧವಾಗಿದೆ 'ಆಯುಷ್ಮಾನ್ ಭವ'; ಸುವರ್ಣ ನ್ಯೂಸ್ ಜೊತೆ ಶಿವಣ್ಣ, ದ್ವಾರಕೀಶ್

ಹೆಚ್‌.ಎಸ್‌.ಆರ್‌ ಲೇಔಟ್‌ ಪೊಲೀಸ್‌ ಠಾಣೆಗೆ ದ್ವಾರಕೀಶ್ ಪುತ್ರ ಯೋಗಿ ದೂರು ನೀಡಿದ್ದಾರೆ. ನಮ್ಮ ಕುಟುಂಬ ಭಯದಲ್ಲಿದೆ. ದಯವಿಟ್ಟು ರಕ್ಷಣೆ ಕೊಡಿ ಏನಾದ್ರೂ ಆದ್ರೆ ಅದಕ್ಕೆ ರಮೇಶ್‌ ಕಾರಣವಾಗುತ್ತಾರೆ ಎಂದು ದೂರು ನೀಡಿದ್ದಾರೆ. ಈ ವಿಚಾರದ ಬಗ್ಗೆ ಕೋರ್ಟ್‌ ಮೊರೆ ಹೋಗುತ್ತೇವೆ ಎಂದಿದ್ದಾರೆ.