ಆದರೆ, ಮೊದಲ ದಿನ ಈ ಚಿತ್ರ 100 ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತಾದರೂ, ಈಗ ಆ ಸಂಖ್ಯೆ೩೫ಕ್ಕೆ ಕುಸಿದಿದೆ.ಎರಡನೇ ವಾರಕ್ಕೆ ಈ ಸಂಖ್ಯೆಯಲ್ಲೂ ವ್ಯತ್ಯಾಸ ಆಗುವ ಭಯ ಚಿತ್ರತಂಡಕ್ಕಿದೆ.ಪ್ರೇಕ್ಷಕರಿಂದ ಒಳ್ಳೆಯ
ಪ್ರತಿಕ್ರಿಯೆ ಸಿಕ್ಕರೂ, ಚಿತ್ರಮಂದಿರಗಳಲ್ಲಿ ಚಿತ್ರದ ಪ್ರದರ್ಶನಕ್ಕೆ ಅವಕಾಶ ಸಿಗುತ್ತಿಲ್ಲ ಎನ್ನುವ ಆಕ್ಷೇಪದ ಜತೆಗೆ ತಕ್ಕ ಮಟ್ಟಿಗೆ ಗೆಲುವು ಕಂಡ ಖುಷಿ ಹಂಚಿಕೊಳ್ಳುವುದಕ್ಕೆ ಈ ಚಿತ್ರತಂಡ ಇತ್ತೀಚೆಗೆ ಮಾಧ್ಯಮದ ಮುಂದೆ ಬಂದಿತ್ತು.

‘ಈಗ ದೊಡ್ಡ ಪೈಪೋಟಿಯಿದೆ. ಸಣ್ಣ ಪುಟ್ಟ ಸಿನಿಮಾಗಳು ಉಳಿಯುವಂತಿಲ್ಲ. ಆದರೂ ನಮ್ಮ ಚಿತ್ರಕ್ಕೆ ಮೊದಲ ದಿನದಿಂದಲೇ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಎರಡ್ಮೂರು ದಿನ ಕಳೆಯುತ್ತಿದ್ದಂತೆ ಚಿತ್ರಮಂದಿರಗಳ ಸಂಖ್ಯೆ ಕಮ್ಮಿಯಾದರೂ, ಚಿತ್ರದ ನಿರ್ಮಾಣಕ್ಕೆ ಹಾಕಿದ ಬಂಡವಾಳ ವಾಪಸ್ ಬಂದಿದೆ. ಅಲ್ಲಿಗೆ ತಕ್ಕಮಟ್ಟಿಗೆ ಗೆಲುವು ಸಿಕ್ಕಿದೆ ಎನ್ನುವ ಖುಷಿಯಿದೆ’ ಎಂದರು ನಿರ್ದೇಶಕ ಅಶೋಕ್.

ಮೊಬೈಲ್‌ ಪಾಸ್ವರ್ಡ್ ತೋರಿಸಿ, WhatsApp ಮೆಸೇಜ್ ತೋರಿಸಿದ್ರು ನಟಿ ರೂಪಿಕಾ!

ಅಂದು ಕೊಂಡಂತೆ ಚಿತ್ರ ಗೆದ್ದ ಖುಷಿಯಲ್ಲೇ ನಿರ್ಮಾಪಕ ಹಾಗೂ ನಾಯಕ ನಟ ನಮ್ ಜಗದೀಶ್ ಮತ್ತೊಂದು ಚಿತ್ರ ಅನೌನ್ಸ್ ಮಾಡಿದರು. ‘ಜೋಪಾನ’ ಹೆಸರಲ್ಲಿ ಚಿತ್ರ ಮಾಡುತ್ತಿರುವುದಾಗಿ ಹೇಳಿದರು. ಪಿ.ಸಿ. ಶೇಖರ್ ನಿರ್ದೇಶನ ಹಾಗೂ ಅರ್ಜುನ್ ಜನ್ಯ ಸಂಗೀತ ನೀಡುತ್ತಿರುವುದಾಗಿ ಪ್ರಕಟಿಸಿದರು. ‘ಚೆಲುವಿನ ಚಿಲಿಪಿಲಿ’ ಚಿತ್ರದ ನಂತರ ಗೆದ್ದ ಖುಷಿ ‘ಥರ್ಡ್ ಕ್ಲಾಸ್ ’ ಚಿತ್ರದಲ್ಲಿ ಸಿಕ್ಕಿದೆ ಅಂತ ನಟಿ ರೂಪಿಕಾ ಹೇಳಿಕೊಂಡರು. ಚಿತ್ರದ ಬಿಡುಗಡೆಯ ದಿನ ಚಿತ್ರತಂಡ ಬೆಂಗಳೂರಿನ ‘ನವರಂಗ’ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗೆ ಉಚಿತ ಪ್ರದರ್ಶನ ಆಯೋಜಿಸಲಾಗಿತ್ತು. ವಿಶೇಷವಾಗಿ ವಿಕಲಚೇತನ ಮಕ್ಕಳಿಗಾಗಿಯೇ ಅವತ್ತಿನ ಪ್ರದರ್ಶನ ಮೀಸಲಾಗಿಟ್ಟಿತ್ತು. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು ಎನ್ನುವುದನ್ನು ಚಿತ್ರತಂಡ ಖುಷಿಯಿಂದ ಹೇಳಿಕೊಂಡಿತು.