ಅಯೋಗ್ಯ ಮಹೇಶ್‌ ಕುಮಾರ್‌ ನಿರ್ದೇಶನದ, ಅಭಿಷೇಕ್‌ ಅಂಬರೀಷ್‌ ನಟನೆಯ ಮುಂದಿನ ಚಿತ್ರಕ್ಕೆ ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಪಕರಾಗುತ್ತಿದ್ದಾರೆ. ಆಗಸ್ಟ್‌ 27ರಂದು ಸುಮಲತಾ ಅಂಬರೀಶ್‌ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಚಿತ್ರದ ಟೈಟಲ್‌ ಘೋಷಣೆ ಮಾಡುವ ಜತೆಗೆ ಚಿತ್ರದ ಶೂಟಿಂಗ್‌ಗೆ ಚಾಲನೆ ಕೊಡುವುದಕ್ಕೆ ನಿರ್ದೇಶಕ ಮಹೇಶ್‌ ಕುಮಾರ್‌ ನಿರ್ಧರಿಸಿದ್ದಾರೆ.

ಅಯೋಗ್ಯ ಮಹೇಶ್‌ ಕುಮಾರ್‌ ನಿರ್ದೇಶನದ, ಅಭಿಷೇಕ್‌ ಅಂಬರೀಷ್‌ ನಟನೆಯ ಮುಂದಿನ ಚಿತ್ರಕ್ಕೆ ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಪಕರಾಗುತ್ತಿದ್ದಾರೆ. ಆಗಸ್ಟ್‌ 27ರಂದು ಸುಮಲತಾ ಅಂಬರೀಶ್‌ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಚಿತ್ರದ ಟೈಟಲ್‌ ಘೋಷಣೆ ಮಾಡುವ ಜತೆಗೆ ಚಿತ್ರದ ಶೂಟಿಂಗ್‌ಗೆ ಚಾಲನೆ ಕೊಡುವುದಕ್ಕೆ ನಿರ್ದೇಶಕ ಮಹೇಶ್‌ ಕುಮಾರ್‌ ನಿರ್ಧರಿಸಿದ್ದಾರೆ.

ಐತಿಹಾಸಿಕ ಕದನದ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರಕ್ಕೆ ಬಹುಕೋಟಿ ವೆಚ್ಚವಾಗಲಿದೆ. ಬೆಂಗಳೂರಿನಲ್ಲಿ ಅದ್ದೂರಿ ಸೆಟ್‌ಗಳನ್ನು ಹಾಕಿ ಚಿತ್ರದ ಶೂಟಿಂಗ್‌ ಆರಂಭಿಸುವ ತಯಾರಿ ಚಿತ್ರತಂಡದ್ದು. ಈ ಚಿತ್ರಕ್ಕೆ ರಾಕ್‌ಲೈನ್‌ ವೆಂಕಟೇಶ್‌ ಅವರೇ ನಿರ್ಮಾಪಕರು ಎಂಬ ವಿಚಾರ ಇನ್ನಷ್ಟೆ ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಸದ್ಯಕ್ಕೆ ಸೂರಿ ನಿರ್ದೇಶನದ ‘ಬ್ಯಾಡ್‌ ಮ್ಯಾನರ್ಸ್‌’ ಚಿತ್ರದ ಶೂಟಿಂಗ್‌ನಲ್ಲಿ ಅಭಿಷೇಕ್‌, ‘ಕಾಳಿ’ ಚಿತ್ರಕ್ಕೂ ಚಾಲನೆ ಕೊಟ್ಟಿದ್ದಾರೆ. ಈ ಚಿತ್ರಗಳ ನಂತರ ನಾಲ್ಕನೇ ಚಿತ್ರವಾಗಿ ಮಹೇಶ್‌ ನಿರ್ದೇಶನದಲ್ಲಿ ಸೆಟ್ಟೇರುತ್ತಿದೆ. ಹೊಸ ಚಿತ್ರದ ಹೈಲೈಟ್ಸ್‌ಗಳು ಇಲ್ಲಿವೆ.

35 ಕೋಟಿ ವೆಚ್ಚ; ಅಭಿಷೇಕ್‌ ಅಂಬರೀಶ್‌ ಚಿತ್ರಕ್ಕೆ ಮಹೇಶ್‌ ನಿರ್ದೇಶನ

- ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಅಕ್ಟೋಬರ್‌ 3ರಂದು ಅಭಿಷೇಕ್‌ ಅವರ ಹುಟ್ಟು ಹಬ್ಬ ನಡೆಯಲಿದ್ದು, ಅಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ.

- 135 ದಿನ ಶೂಟಿಂಗ್‌ ನಡೆಯಲಿದೆ. 30 ರಿಂದ 35 ಕೋಟಿ ವೆಚ್ಚ ಚಿತ್ರವಿದು.

- ಒಂದು ಕಾಲಘಟ್ಟದಲ್ಲಿ ನಡೆಯುವ ಒಬ್ಬ ಹೋರಾಟಗಾರ ಕತೆ ಇದಾಗಿದೆ. ಯುದ್ಧ, ದಂಗೆ ಹಾಗೂ ಕ್ರಾಂತಿ ಹಿನ್ನೆಲೆಯಲ್ಲಿ ಕತೆ ಸಾಗುತ್ತದೆ.

- ಯುದ್ಧದಲ್ಲಿ ಎದುರಾಳಿಯ ಸೈನಿಕನನ್ನು ಹೊಡೆದು ಆತನ ರಕ್ತ ಮತ್ತು ಕೆಸರು ಮೆತ್ತಿಕೊಂಡಿರುವ ಅಭಿಷೇಕ್‌ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಇದಾಗಿದೆ.

- ಕೃಷ್ಣ ನಿರ್ದೇಶನದ ‘ಕಾಳಿ’ ಚಿತ್ರದ ಶೂಟಿಂಗ್‌ ಮುಗಿದ ಮೇಲೆ ಮಹೇಶ್‌ ಕುಮಾರ್‌ ನಿರ್ದೇಶನದ ಚಿತ್ರಕ್ಕೆ ಅಭಿಷೇಕ್‌ ಜತೆಯಾಗಲಿದ್ದಾರೆ.

ಬ್ಯಾಡ್‌ಮ್ಯಾನರ್ಸ್‌ಗೆ ಪ್ರಮೋದ್‌ ವಿಲನ್‌: ಅಭಿಷೇಕ್‌ ಅಂಬರೀಶ್‌ ನಟನೆಯ ‘ಬ್ಯಾಡ್‌ಮ್ಯಾನರ್ಸ್‌’ ಚಿತ್ರದಲ್ಲಿ ಪ್ರಮೋದ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಪ್ರೀಮಿಯರ್‌ ಪದ್ಮಿನಿ’ ಚಿತ್ರದ ಮೂಲಕ ಗಮನ ಸೆಳೆದು, ಸದ್ಯ ಹೀರೋ ಆಗಿ ಯಶಸ್ಸಿನ ಹಾದಿಯಲ್ಲಿರುವ ನಟ ಪ್ರಮೋದ್‌ ಈಗಾಗಲೇ ನಾಲ್ಕೈದು ಚಿತ್ರಗಳಲ್ಲಿ ಹೀರೋ ಆಗಿ ನಟಿಸುತ್ತಿದ್ದರೂ ಅಭಿಷೇಕ್‌ಗೆ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಇಬ್ಬರ ಪಾತ್ರದ ಚಿತ್ರೀಕರಣ ಎರಡನೇ ಹಂತದಲ್ಲಿ ಮುಗಿದಿದ್ದು, ಮೂರನೇ ಹಂತದ ಚಿತ್ರೀಕರಣ ಕೋಲಾರದಲ್ಲಿ ನಡೆಯಬೇಕಿತ್ತು. 

ಇದೇನಪ್ಪಾ ಅಭಿಷೇಕ್ ಅಂಬರೀಶ್ ಹಾಗೂ ರಚಿತಾ ರಾಮ್‌ ಬ್ಯಾಡ್‌ ಮ್ಯಾನರ್ಸ್?

ಕಾರಣಾಂತರಗಳಿಂದ ಚಿತ್ರೀಕರಣ ಮುಂದೂಡಲಾಗಿದೆ. ಈ ಚಿತ್ರದ ಮೂಲಕ ನಿರ್ದೇಶಕ ಸೂರಿ ಅವರು ಮತ್ತೊಬ್ಬ ಭರವಸೆಯ ನಟನನ್ನು ವಿಲನ್‌ ಮಾಡಿದ್ದಾರೆ. ಸೂರಿ ‘ಟಗರು’ ಚಿತ್ರದಲ್ಲಿ ಧನಂಜಯ್‌ ಅವರನ್ನು ವಿಲನ್‌ ಮಾಡಿ, ಡಾಲಿ ಇಮೇಜ್‌ ತಂದುಕೊಟ್ಟರು. ಈಗ ಪ್ರಮೋದ್‌ ಸರದಿ. ಧನಂಜಯ್‌ ಅವರಂತೆಯೇ ಪ್ರಮೋದ್‌ ಕೂಡ ಹೀರೋ ಕಂ ವಿಲನ್‌ ಆಗಿ ಮಿಂಚಲಿದ್ದಾರೆಯೇ, ಡಾಲಿಗೆ ಸಿಕ್ಕ ಅದೃಷ್ಟಪ್ರಮೋದ್‌ಗೂ ಸಿಗಲಿದೆಯೇ ಎಂಬುದು ಎಲ್ಲರ ಕುತೂಹಲ.