ಕ್ರಾಂತಿಕಾರಿ ಪಾತ್ರದಲ್ಲಿ ಯಂಗ್ ರೆಬೆಲ್‌ಸ್ಟಾರ್ 35 ಕೋಟಿ ವೆಚ್ಚ ಅಭಿಷೇಕ್ ಅಂಬರೀಶ್ ಚಿತ್ರಕ್ಕೆ ಮಹೇಶ್ ನಿರ್ದೇಶನ
ನಟ ಅಭಿಷೇಕ್ ಅಂಬರೀಶ್ ಅವರ ನಟನೆಯ ಹೊಸ ಸಿನಿಮಾ ಘೋಷಣೆ ಆಗಿದೆ. ಅಂಬರೀಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಘೋಷಣೆ ಆಗಿರುವ ಈ ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ‘ಮದಗಜ’ ಚಿತ್ರದ ನಂತರ ಮಹೇಶ್ ಕೈಗೆತ್ತಿಕೊಂಡಿರುವ ಚಿತ್ರ ಇದಾಗಿದೆ. ಸದ್ಯಕ್ಕೆ ಸೂರಿನ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಶೂಟಿಂಗ್‌ನಲ್ಲಿ ಅಭಿಷೇಕ್, ‘ಕಾಳಿ’ ಚಿತ್ರಕ್ಕೂ ಚಾಲನೆ ಕೊಟ್ಟಿದ್ದಾರೆ. ಈ ಚಿತ್ರಗಳ ನಂತರ ನಾಲ್ಕನೇ ಚಿತ್ರವಾಗಿ ಮಹೇಶ್ ನಿರ್ದೇಶನದಲ್ಲಿ ಸೆಟ್ಟೇರುತ್ತಿದೆ. ಹೊಸ ಚಿತ್ರದ ಹೈಲೈಟ್ಸ್‌ಗಳು ಇಲ್ಲಿವೆ.
- ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಅಕ್ಟೋಬರ್ 3ರಂದು ಅಭಿಷೇಕ್ ಅವರ ಹುಟ್ಟು ಹಬ್ಬ ನಡೆಯಲಿದ್ದು, ಅಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ.
- 135 ದಿನ ಶೂಟಿಂಗ್ ನಡೆಯಲಿದೆ. 30 ರಿಂದ 35 ಕೋಟಿ ವೆಚ್ಚ ಚಿತ್ರವಿದು.
- ಒಂದು ಕಾಲಘಟ್ಟದಲ್ಲಿ ನಡೆಯುವ ಒಬ್ಬ ಹೋರಾಟಗಾರ ಕತೆ ಇದಾಗಿದೆ. ಯುದ್ಧ, ದಂಗೆ ಹಾಗೂ ಕ್ರಾಂತಿ ಹಿನ್ನೆಲೆಯಲ್ಲಿ ಕತೆ ಸಾಗುತ್ತದೆ.
- ಯುದ್ಧದಲ್ಲಿ ಎದುರಾಳಿಯ ಸೈನಿಕನನ್ನು ಹೊಡೆದು ಆತನ ರಕ್ತ ಮತ್ತು ಕೆಸರು ಮೆತ್ತಿಕೊಂಡಿರುವ ಅಭಿಷೇಕ್ ಅವರ ಫಸ್ಟ್ ಲುಕ್ ಪೋಸ್ಟರ್ ಇದಾಗಿದೆ.
- ಕೃಷ್ಣ ನಿರ್ದೇಶನದ ‘ಕಾಳಿ’ ಚಿತ್ರದ ಶೂಟಿಂಗ್ ಮುಗಿದ ಮೇಲೆ ಮಹೇಶ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಅಭಿಷೇಕ್ ಜತೆಯಾಗಲಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟುಹಬ್ಬ; ಪುಣ್ಯಭೂಮಿಗೆ ಪತ್ನಿ ಸುಮಲತಾ, ಕುಟುಂಬದವರಿಂದ ಪೂಜೆ
ಅಂಬರೀಶ್ ಅದ್ಧೂರಿ 70ನೇ ಜನ್ಮದಿನ
ಕನ್ನಡ ಚಿತ್ರರಂಗದ ಹಿರಿಯ ನಟ ಅಂಬರೀಶ್ ಅವರ 70ನೇ ಹುಟ್ಟುಹಬ್ಬದ ಸಂಭ್ರಮ ಭಾನುವಾರ ಅದ್ಧೂರಿಯಾಗಿ ನಡೆಯಿತು. ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳು, ಕುಟುಂಬದ ಸದಸ್ಯರು, ಚಿತ್ರರಂಗದ ಗಣ್ಯರು ಸೇರಿದಂತೆ ಹಲವರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಸಂಸದರಾದ ಪತ್ನಿ ಸುಮಲತಾ ಅಂಬರೀಶ್, ನಟ ಅಭಿಷೇಕ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಅವರು ಸಮಾಧಿಗೆ ಪೂಜೆ ಸಲ್ಲಿಸಿದರು.
ಅಂಬರೀಶ್ ಅವರ ಕಟೌಟ್‌ಗಳಿಂದ ಅಲಂಕಾರ ಮಾಡಿಕೊಂಡು ಬಂದಿದ್ದ ಆಟೋ ಚಾಲಕರು, ಅಂಬರೀಶ್ ಅವರ ಟೀ ಶರ್ಚ್‌ಗಳನ್ನು ಧರಿಸಿದ್ದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಅಂಬರೀಶ್ ಅವರ ಸಮಾಧಿಗೆ ತಿಳಿ ಬಿಳಿ ಹೂವುಗಳಿಂದ ವಿಶೇಷವಾಗಿ ಸಿಂಗಾರ ಮಾಡಲಾಗಿತ್ತು. ಜತೆಗೆ ಅಂಬಿ ಅವರಿಗೆ ಇಷ್ಟದ ಆಹಾರ ಖಾದ್ಯಗಳನ್ನು ಇಡಲಾಗಿತ್ತು. ಈ ವೇಳೆ ಮಾತನಾಡಿದ ಸುಮಲತಾ ಅಂಬರೀಶ್ ಅವರು, ‘ಅಂಬರೀಶ್ ಅವರು ಇಲ್ಲ ಎಂದುಕೊಳ್ಳುವುದಕ್ಕಿಂತ ಅವರು ಒಂದು ದೊಡ್ಡ ಶಕ್ತಿಯಾಗಿ ನಮ್ಮ ಜತೆಗೇ ಇದ್ದಾರೆ ಎನ್ನುವ ಭಾವನೆ ಇದೆ. ಅವರೇ ನಿಂತು ನಮ್ಮನ್ನು ನಡೆಸುತ್ತಿದ್ದಾರೆ.
![]()
ಒಂದು ಸ್ಯಾಂಡಲ್ ವುಡ್‌ನ ಸ್ಟಾರ್ ನಿರ್ದೇಶಕ ಗಜಕೇಸರಿ, ಹೆಬ್ಬುಲಿ ಸಿನಿಮಾಗಳನ್ನು ಮಾಡಿರುವ ಕೃಷ್ಣ(Director Krishna) ಸಾರಥ್ಯದಲ್ಲಿ ಬರ್ತಿವ ಕಾಳಿ(Kaali) ಮತ್ತು ಅಯೋಗ್ಯ, ಮದಗಜ ಖ್ಯಾತಿಯ ನಿರ್ದೇಶಕ ಮಹೇಶ್ ಸಾರಥ್ಯದಲ್ಲಿ ಬರ್ತಿರುವ ಇನ್ನು ಹೆಸರಡಿದ ಎಂಎಂ4(MM4) ಸಿನಿಮಾ ಘೋಷಣೆಯಾಗಿದ್ದು ಫಸ್ಟ್ ಲುಕ್ ಸಹ ರಿಲೀಸ್ ಆಗಿದೆ.
ಕಾಳಿ ಮತ್ತು ಎಂಎಂ4 ಎರಡು ಸಿನಿಮಾಗಳಲ್ಲೂ ಅಭಿಷೇಕ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಮಾಸ್ ಎಂಟ್ರಿ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ಪುತ್ರನ ಸಿನಿಮಾ ಬಗ್ಗೆ ನಟಿ, ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿ, 'ನಮ್ಮ ಜೂನಿಯರ್ ರೆಬೆಲ್ ಅಭಿಷೇಕ್ ಅಂಬರೀಶ್ ನಟನೆಯ ಕಾಳಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಎಲ್ಲರೂ ನೋಡಿ ಹರಸಿ ಆಶೀರ್ವಾದಿಸಿ' ಎಂದು ಹೇಳಿದ್ದಾರೆ. ಕಾಳಿ ಸಿನಿಮಾ ಆರ್ ಆರ್ ಆರ್ ಮೋಷನ್ ಪಿಕ್ಚರ್ ಅಡಿಯಲ್ಲಿ ನಿರ್ದೇಶಕ ಕೃಷ್ಣ ಪತ್ನಿ, ನಿರ್ಮಾಪಕಿ ಸ್ವಪ್ನ ಕೃಷ್ಣ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಅಭಿಷೇಕ್ ಕಾಳಿ ಸಿನಿಮಾದ ಬಗ್ಗೆ ನಟ ಸುದೀಪ್ ಕೂಡ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.
