ಟಾಕ್ಸಿಕ್‌ನಲ್ಲಿ ಈ ಪಾತ್ರದಲ್ಲಿ ಮಿಂಚಲಿದ್ದಾರೆ ರಾಕಿಂಗ್ ಸ್ಟಾರ್ ಯಶ್: ಫ್ಯಾನ್ಸ್ ಫುಲ್ ಖುಷ್
‘ರಾಕಿಂಗ್ ಸ್ಟಾರ್’ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಹೊಸ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಚಿತ್ರದಲ್ಲಿ ನಟ ಯಶ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
‘ರಾಕಿಂಗ್ ಸ್ಟಾರ್’ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಹೊಸ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಚಿತ್ರದಲ್ಲಿ ನಟ ಯಶ್ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವಿಷಯ ಬಹಿರಂಗವಾಗಿದೆ. ಯಶ್‌ರ ಲುಕ್ ನೋಡಿ ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಂಬೈಯಲ್ಲಿ ಟಾಕ್ಸಿಕ್ ಮುಂದಿನ ಹಂತದ ಶೂಟಿಂಗ್: ಯಶ್ ಸೇರಿದಂತೆ ‘ಟಾಕ್ಸಿಕ್’ ಸಿನಿಮಾ ತಂಡ ಪ್ರಸ್ತುತ ಮುಂಬೈನಲ್ಲಿದೆ. ‘ಟಾಕ್ಸಿಕ್’ ಚಿತ್ರದ ಎರಡನೇ ಹಂತದ ಚಿತ್ರೀಕರಣಕ್ಕೆ ಮುಂಬೈನಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಯಶ್, ಕಿಯಾರ, ಹ್ಯೂಮಾ ಖುರೇಷಿ, ನಯನತಾರಾ ಜೊತೆಗೆ ಬ್ರಿಟಿಷ್ ನಟರಾದ ಡೇರೆಲ್ ಡಿಸಿಲ್ವ, ಬೆನೆಡಿಕ್ಟ್ ಗ್ಯಾರೆಟ್ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ ಕೊನೆಯ ವಾರದಲ್ಲಿ ಮತ್ತೆ ಚಿತ್ರೀಕರಣ ಆರಂಭವಾಗಲಿದೆ. ಸುಮಾರು 45 ದಿನಗಳ ಶೆಡ್ಯೂಲ್ ಇದೆ ಎನ್ನಲಾಗಿದೆ. ಸದ್ಯಕ್ಕೀಗ ಯಶ್ ಹಾಗೂ ಕಿಯಾರಾ ಹಾಡಿನ ಸನ್ನಿವೇಶದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಬೆಂಗಳೂರಿನ ಹೆಚ್‌ಎಎಲ್‌ನಲ್ಲಿ ಸಿನಿಮಾದ ಮೊದಲ ಹಂತದ ಶೂಟಿಂಗ್ ಮುಕ್ತಾಯಗೊಂಡಿದ್ದು, ನಯನತಾರಾ, ಹ್ಯೂಮಾ ಖುರೇಷಿ ಈ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ.
ದಳಪತಿ ವಿಜಯ್ 69 ಸಿನಿಮಾದ ಕಾಸ್ಟ್ & ಕ್ರ್ಯೂ ರಿವೀಲ್: ಟಾಕ್ಸಿಕ್ ಯಾಕಿಷ್ಟು ಸೈಲೆಂಟ್?
ಟಾಕ್ಸಿಕ್ ಸ್ಕ್ರಿಪ್ಟೇ ಸ್ಫೂರ್ತಿ: ಅನಂತ್ ಅಂಬಾನಿ ವಿವಾಹದ ವೇಳೆ ಸಖತ್ ಟ್ರೆಂಡಿಂಗ್ ಆದ ಯಶ್ ಹೊಸ ಹೇರ್‌ಸ್ಟೈಲ್ ‘ಟಾಕ್ಸಿಕ್’ ಸಿನಿಮಾಗಾಗಿಯೇ ಮಾಡಿರುವ ಕೇಶವಿನ್ಯಾಸ ಎಂದು ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಹೇಳಿದ್ದಾರೆ. ‘ಈ ಸ್ಟೈಲ್‌ಗೆ ಯಶ್ ಹೇಳಿರುವ ಟಾಕ್ಸಿಕ್ ಸಿನಿಮಾ ಸ್ಕ್ರಿಪ್ಟೇ ಸ್ಪೂರ್ತಿ’ ಎಂದೂ ತಿಳಿಸಿದ್ದಾರೆ. ‘ನನಗೆ ಟಾಕ್ಸಿಕ್ ಕಥೆ ವಿವರಿಸಿ ಅದಕ್ಕೆ ತಕ್ಕಂಥಾ ಸ್ಟೈಲ್ ಮಾಡಲು ಹೇಳಿದಾಗ ಇದಕ್ಕೆ ಅವರ ಈ ಹಿಂದಿನ ಲಾಂಗ್‌ಹೇರ್‌ಗಿಂತಲೂ ಶಾರ್ಟ್ ಹೇರ್ ಕಟ್ ಚಂದ ಅಂತನಿಸಿತು. ಪೊಂಪಡೋರ್ ಹೇರ್ ಸ್ಟೈಲ್ ಆ ಪಾತ್ರಕ್ಕೆ ಸೊಗಸಾಗಿ ಹೊಂದುತ್ತೆ ಅನಿಸಿ ಆ ಹೇರ್ ಸ್ಟೈಲ್‌ನಲ್ಲೇ ಯಶ್ ಅವರನ್ನು ರೆಡಿ ಮಾಡಿದೆ. ಅವರು ಬಹಳ ಖುಷಿಯಲ್ಲಿ, ಅಲೆಕ್ಸ್ ಯೂ ಡಿಡ್ ಇಟ್ ಎಂದು ಹಗ್ ಮಾಡಿದರು’ ಎಂದು ಹೇಳಿದ್ದಾರೆ.