Asianet Suvarna News Asianet Suvarna News

ಬೆಳ್ತಂಗಡಿ: ಸದಾಶಿವ ರುದ್ರ ದೇವಸ್ಥಾನಕ್ಕೆ ನಟ ಯಶ್ ಭೇಟಿ, ಹರಕೆ ತೀರಿಸಿದ ರಾಕಿಂಗ್‌ ಸ್ಟಾರ್‌..!

ಪತ್ನಿ ನಟಿ ರಾಧಿಕಾ, ಮಕ್ಕಳ ಜೊತೆ ಆಗಮಿಸಿದ ನಟ ಯಶ್‌ ದೇವರ ದರ್ಶನವನ್ನ ಪಡೆದಿದ್ದಾರೆ. ಮಣ್ಣಿನ ರೀಲ್ ಮತ್ತು ಕುಟುಂಬದ ಮಣ್ಣಿನ ಹರಕೆ ತೀರಿಸಿದ ರಾಕಿಂಗ್‌ ಸ್ಟಾರ್‌ ನಟ ಯಶ್ 

rocking star yash visited to surya shri sadashiva rudra temple in dakshina kannada grg
Author
First Published Aug 6, 2024, 12:22 PM IST | Last Updated Aug 6, 2024, 4:55 PM IST

ಮಂಗಳೂರು(ಆ.06): ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನಲ್ಲಿರುವ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ರಾಕಿಂಗ್‌ ಸ್ಟಾರ್‌ ನಟ ಯಶ್ ಇಂದು(ಮಂಗಳವಾರ) ಭೇಟಿ ನೀಡಿದ್ದಾರೆ.  ಟಾಕ್ಸಿಕ್ ಚಲನಚಿತ್ರದ ಡೈರೆಕ್ಟರ್ ವೆಂಕಟ್ ಜೊತೆಯಲ್ಲಿ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ನಟ ಯಶ್ ಭೇಟಿ ನೀಡಿ, ಆಶೀರ್ವಾದ ಪಡೆದಿದ್ದಾರೆ. 

ಪತ್ನಿ ನಟಿ ರಾಧಿಕಾ, ಮಕ್ಕಳ ಜೊತೆ ಆಗಮಿಸಿದ ನಟ ಯಶ್‌ ದೇವರ ದರ್ಶನವನ್ನ ಪಡೆದಿದ್ದಾರೆ. ಮಣ್ಣಿನ ರೀಲ್ ಮತ್ತು ಕುಟುಂಬದ ಮಣ್ಣಿನ ಹರಕೆ (ಆರೋಗ್ಯ ಸಮಸ್ಯೆಗೆ) ತೀರಿಸಿದ್ದಾರೆ.  ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ದರ್ಶನದ ಬಳಿಕ ನಟ ಯಶ್‌ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿಲಿದ್ದಾರೆ. ಕುಟುಂಬ ಸಮೇತ ಯಶ್ ಧರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.  

ಕೆಜಿಎಫ್ ನಟಿ ಈಗ ಮೂಗುತಿ ಸುಂದ್ರಿ, ಸೀರೆಯಲ್ಲಿ ಈ ನಾರಿ ಹೇಗೆ ಕಾಣ್ತಾರೆ ನೋಡ್ರೀ..!

ನಟ ಯಶ್ ಅವರು ತಮ್ಮ ಪ್ರತೀ ಸಿನಿಮಾದ ವೇಳೆ ಸುರ್ಯ ದೇವಸ್ಥಾನ ಬರುತ್ತಾರೆ. ಕೆಜಿಎಫ್ ಹೊತ್ತಲ್ಲೂಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನಕ್ಕೆ ಮಣ್ಣಿನ ಹರಕೆ ಕೊಟ್ಟಿದ್ದರು. 

Latest Videos
Follow Us:
Download App:
  • android
  • ios