ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಹಾಗಾ ರಾಧಿಕಾ ಪಂಡಿತ್ 2ನೇ ಮಗುವಿನ ಫೋಟೋ ಎಲ್ಲಾ ಬಹಿರಂಗ ಪಡಿಸಿಲ್ಲ. 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಯಶ್ ಪತ್ನಿ ರಾಧಿಕಾ ಪಂಡಿತ್ ಮಗನ ಫೋಟೋ ರಿವೀಲ್ ಮಾಡಿದ್ದಾರೆ. ಇಷ್ಟೇ ಅಲ್ಲ ಮತ್ತೊಂದು ಸರ್ಪ್ರೈಸ್ ನೀಡುವ ಸೂಚನೆ ನೀಡಿದ್ದಾರೆ.

ಬೆಂಗಳೂರು(ಏ.29): ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಯ 2ನೇ ಮಗುವಿನ ಫೋಟೋ ಇದುವರೆಗೂ ರಿವೀಲ್ ಮಾಡಿಲ್ಲ. ಅಭಿಮಾನಿಗಳು ಹಲವು ಬೇಡಿಕೆ ಇಟ್ಟಿದ್ದರೂ ಮಗನ ಮುಖ ಅಭಿಮಾನಿಗಳಿಗೆ ತೋರಿಸಿಲ್ಲ. ಯಶ್ -ರಾಧಿಕಾ ದಂಪತಿಯ ಮಗ 6 ತಿಂಗಳ ಪೂರೈಸುತ್ತಿರುವ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ಮಗು ಫೋಟೋ ರಿವೀಲ್ ಮಾಡಿದ್ದಾರೆ. ಪುತ್ರಿ ಐರಾ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಧಿಕಾ ಪಂಡಿತ್, ಮತ್ತೊಂದು ಸುಳಿವು ನೀಡಿದ್ದಾರೆ.

ಯಶ್ ಮಗನ ಫುಲ್ ಫೋಟೋ ಇಲ್ಲಿದೆ ನೋಡಿ

ಮಗನ ಸಂಪೂರ್ಣ ಫೋಟೋ ರಿವೀಲ್ ಮಾಡಿಲ್ಲ. ಅರ್ಧ ಮುಖವನ್ನು ರಿವೀಲ್ ಮಾಡಿರುವ ರಾಧಿಕಾ ಪಂಡಿತ್. ನಾಳೆ(ಏ.30) 2ನೇ ಮಗುವಿಗೆ 6 ತಿಂಗಳು ಭರ್ತಿಯಾಗಲಿದೆ. ಹೀಗಾಗಿ ಮಗನ ಫೋಟೋ ರಿವೀಲ್ ಮಾಡುವುದಾಗಿ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.

View post on Instagram

ಇದೀಗ ಕರ್ನಾಟಕ ಮಾತ್ರವಲ್ಲ ಕೆಜಿಎಫ್ ಮೂಲಕ ದೇಶದಲ್ಲಿ ಅಪಾರ ಅಭಿಮಾನಿ ಬಳಗವನ್ನೂ ಸಂಪಾದಿಸಿರುವ ರಾಕಿ ಬಾಯ್ ಯಶ್ ಪುತ್ರನ ಫೋಟೋ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ರಾಧಿಕಾ ಪಂಡಿತ್ ಪ್ರೋಮೋ ಹರಿಬಿಟ್ಟ ಬೆನ್ನಲ್ಲೇ, ಫೋಟೋಗಾಗಿ ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಐರಾ ಕೈಯಲ್ಲಿ ಐಸ್‌ ಕ್ಯಾಂಡಿ; ರಾಧಿಕಾ ತಯಾರಿಸಿದ ಪಾಪ್‌ಸಿಕಲ್ ಇದು!.

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಯಶ್ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಪುತ್ರಿಗೆ ಕಲ್ಲಂಗಡಿ ಐಸ್‌ಕ್ಯಾಂಡಿ ಮಾಡಿಕೊಟ್ಟ ಫೋಟೋ ವೈರಲ್ ಆಗಿತ್ತು. ಇತ್ತ ಯಶ್‌ಗೆ ಪುತ್ರಿ ಐರಾ ಊಟ ತಿನ್ನಿಸುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು.