ರಾಕಿಂಗ್‌ ದಂಪತಿ ಮುದ್ದಿನ ಮಗಳ ಕೈಯಲ್ಲಿ ಪಾಪ್‌ಸಿಕಲ್. ಫೋಟೋ ಅಪ್ಲೋಡ್‌ ಆದ ಕೆಲವೇ ಕ್ಷಣಗಳಲ್ಲಿ ಫುಲ್‌ ವೈರಲ್‌... 

ಸ್ಯಾಂಡಲ್‌ವುಡ್‌ ಮಿಸ್ಟರ್ ಆ್ಯಂಡ್‌ ಮಿಸಸ್ ರಾಮಚಾರಿ ಪುತ್ರಿ ಐರಾ ಯಶ್‌ 'ಬೀಟ್‌ ದಿ ಹೀಟ್‌' ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಟೈಂ ಸ್ಪೆಂಡ್‌ ಮಾಡುತ್ತಿರುವ ಸಿನಿ ತಾರೆಯರು ತಮ್ಮ ಮಕ್ಕಳೊಟ್ಟಿಗೆ ಕಾಲ ಕಳೆಯಲು ಇದು ಗುಡ್‌ ಟೈಂ. ಸ್ಯಾಂಡಲ್‌ವುಡ್‌ ಸ್ಟಾರ್‌ ಕಿಡ್‌ ಆಗಿರುವ ಐರಾ ಮನೆಯಲ್ಲಿ ಅಮ್ಮ ರಾಧಿಕಾ ತಯಾರಿಸಿದ ಕಲ್ಲಂಗಡಿ ಹಣ್ಣಿನ ಐಸ್‌ ಕ್ಯಾಂಡಿ ಸವಿಯುತ್ತಿದ್ದಾರೆ. 

ಮೋದಿ ಕರೆಗೆ ಲಿಟಲ್‌ ಐರಾ ಸಾಥ್; ರಾಕಿ ಬಾಯ್‌ ಶೇರ್ ಮಾಡಿದ ವಿಡಿಯೋ ಇದು

'ನಾವು ಸಮ್ಮರ್ ಹೀಟ್‌ ಬೀಟ್‌ ಮಾಡುತ್ತಿರುವುದು ಹೀಗೆ, ಅಮ್ಮ ಮಾಡಿದ ಕಲ್ಲಂಗಡಿ ಹಣ್ಣಿನ ಪಾಪ್‌ಸಿಕಲ್ (ಐಸ್ ಕ್ಯಾಂಡಿ)' . ಇದು 'ಐರಾ ತಿಂದ ನಂತರ ನಾನು ಮನೆಯೆಲ್ಲಾ ಕ್ಲೀನ್‌ ಮಾಡಬೇಕಾಯ್ತು ' ಎಂದು ಹೇಳಿಕೊಂಡಿದ್ದಾರೆ.

View post on Instagram

ಸದ್ಯ ಕೆಜಿಎಫ್‌2 ಶೂಟಿಂಗ್ ಇಲ್ಲದ ಕಾರಣ ಯಶ್ ಮನೆಯಲ್ಲಿಯೇ ಲಾಕ್ ಡೌನ್ ಆಗಿದ್ದಾರೆ ಹೀಗಾಗಿ ಐರಾ ಅಪ್ಪ-ಅಮ್ಮನ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಅಪ್ಪನಿಗೆ ಆಹಾರ ತಿನಿಸುತ್ತಿರುವ ವಿಡಿಯೋ ಫುಲ್‌ ವೈರಲ್‌ ಆಗಿತ್ತು . ಇನ್ನು ಮೋದಿ ಕರೆ ನೀಡಿದ ಅಭಿಯಾನಕ್ಕೆ ಐರಾ ಚಪ್ಪಾಳೆ ಹಾಗೂ ದೀಪ ಬೆಳಗುವ ಮೂಲಕ ಸಾಥ್ ನೀಡಿದ್ದಳು.

View post on Instagram