ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕರೆದೊಯ್ದ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ಹ್ಯಾಟ್ರಿಕ್‌ ನಟಿ ರಾಧಿಕಾ ಪಂಡಿತ್ ಪುತ್ರ Junior Yash ಏಪ್ರಿಲ್ 30ಕ್ಕೆ  6 ತಿಂಗಳಿಗೆ ಮುಗಿಸಿದ್ದಾರೆ. ಈ ಪ್ರಯುಕ್ತ ಮುದ್ದು ಕಂದನ ಫೋಟೋ ರಿವೀಲ್‌ ಮಾಡಲಾಗಿದೆ.

 

'ನಮ್ಮ ಜೀವನದ ಕಾಮನ ಬಿಲ್ಲು. ಖಂಡಿತಾ ಅಮ್ಮನ ಮಗನೇ ನಮ್ಮ ಲಿಟಲ್‌ ಜೂನಿಯರ್‌. ನಿಮ್ಮ ಪ್ರೀತಿ ಅವನ ಮೇಲಿರಲಿ..' ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ 'ಎಲ್ಲರೂ ನನ್ನ ಬಡ್ಡಿಗೆ ಹಲೋ ಹೇಳಿ. ನಿಮ್ಮ ಪ್ರೀತಿ ನಮ್ಮ ಹಾಗೂ ಆರ್ಶಿರ್ವಾದ ಸದಾ ನನ್ನ ಪುಟ್ಟ ಕಂದನ ಮೇಲಿರಲಿ' ಎಂದಿದ್ದಾರೆ. ವಿಶೇಷವೇನೆಂದರೆ ಸ್ಟಾರ್ ಕಿಡ್ ಐರಾಳದ್ದೂ ಇದೇ ಪೋಸ್‌ನಲ್ಲಿ ಪೋಟೋ ರಿವೀಲ್‌ ಮಾಡಲಾಗಿತ್ತು.

ಪುತ್ರಿ ಐರಾ ಫೋಟೋವನ್ನು ಕಳೆದ ವರ್ಷ ಅಕ್ಷಯ್ ತೃತೀಯದಂದು ಹಂಚಿಕೊಂಡಿದ್ದರು. ಆಗ ಅಭಿಮಾನಿಗಳು ಅನೇಕ ಹೆಸರುಗಳನ್ನು ಸೂಚಿಸಿದರು. ಏನೇ ಮಾಡಿದರೂ ಡಿಫರೆಂಟ್‌ ಆಗಿ ಮಾಡುವ ರಾಕಿಂಗ್ ಸ್ಟಾರ್ ಮಗಳ ಹೆಸರನ್ನು ಅಭಿಮಾನಿಗಳೇ ಗೆಸ್‌ ಮಾಡಲಿ ಎಂದು ನಾಮಕರಣದವರೆಗೂ ಬಹಿರಂಗ ಪಡಿಸಿರಲಿಲ್ಲ. ಜೂನ್‌ 23,2019ರಂದು  ಬೆಳಗ್ಗೆ 11ಗಂಟೆಗೆ ಶತಭಿಷಾ ನಕ್ಷತ್ರ ಸಿಂಹ ಲಗ್ನದಲ್ಲಿ ನಾಮಕರಣ ಮಾಡಿ, 'Ayra' ಎಂದು ಹೆಸರಿಟ್ಟರು. 

ಪುತ್ರಿಗೆ ವಿಭಿನ್ನ ಹೆಸರಿಟ್ಟ ಯಶ್-ರಾಧಿಕಾ ದಂಪತಿ

ಅಷ್ಟೇ ಅಲ್ಲದೇ  ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಅವರು ಐರಾಗೆ ಸಂಗೀತ ಸಂಯೋಚನೆ ಮಾಡಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ಐರಾ ಹೆಸರು ರಿವೀಲ್ ಮಾಡಲಾಗಿತ್ತು. ಮಗಳಿಗೆ ಇಷ್ಟೆಲ್ಲಾ ಡಿಫರೆಂಟ್‌ ಆಗಿ ಮಾಡಿದ ಮೇಲೆ ಮಗನಿಗೂ ಮಾಡಬೇಕಲ್ವಾ?

ಹೌದು! ಇದುವರೆಗೂ ಎಲ್ಲಿಯೂ ಪುತ್ರನ ಫೋಟೋ ಬಹಿರಂಗಪಡಿಸಲ್ಲ ಯಶ್ -ರಾಧಿಕಾ ದಂಪತಿ. ಇಂದು 6 ತಿಂಗಳಿಗೆ ಕಾಲಿಡುತ್ತಿರುವ ಪ್ರಯುಕ್ತ ಫೊಟೋ ಶೇರ್ ಮಾಡಿಕೊಳ್ಳುವುದಾಗಿ ಏಪ್ರಿಲ್ 29ರಂದೇ ರಾಧಿಕಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದು ಕೊಂಡಿದ್ದರು. 'ನೀವೇಲ್ಲರೂ ಕಾಯುತ್ತಿದ್ದ ಕ್ಷಣ ಇಲ್ಲಿದೆ. ನಾಳೆ ಜೂನಿಯರ್‌ಗೆ 6 ತಿಂಗಳು ತುಂಬುತ್ತದೆ. ನಿಮ್ಮೆಲ್ಲರಿಗೂ ಪರಿಚಯವಾಗಲು ಸಿದ್ಧನಾಗುತ್ತಿದ್ದಾನೆ. ನೀವು ರೆಡಿನಾ?' ಎಂದು ಬರೆದುಕೊಂಡಿದ್ದರು ಅಷ್ಟೇ ಅಲ್ಲದೇ ಫೋಟೋವನ್ನು ಖ್ಯಾತ ಬೇಬಿ ಫೋಟೋಗ್ರಾಫರ್‌ ಆದ ಅಮೃತಾ ಸೆರೆ ಹಿಡಿದಿರುವುದು. 

 

ಐರಾ ಫೋಟೋ ರಿವೀಲ್‌ ಆದ ದಿನದಿಂದ ಇಂದಿಗೂ ಸಾಕಷ್ಟು ಅಭಿಮಾನಿಗಳು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಸೋಷಿಯಲ್‌ ಮೀಡಿಯಾದಲ್ಲಿ ತಂದೆ-ತಾಯಿಗೆ ಸಮನಾಗಿ ಫ್ಯಾನ್‌ ಪೇಜ್‌ ಹೊಂದಿದ್ದಾರೆ. ಸ್ಟಾರ್ ಕಿಡ್‌ ಆಗಿ ಮಿಂಚುತ್ತಿರುವ ಐರಾಳನ್ನು ನೋಡಲು ಅಭಿಮಾನಿಗಳು ಯಶ್‌ ನಿವಾಸಕ್ಕೆ ತೆರಳುತ್ತಾರಂತೆ. ಎಲ್ಲೆಡೆ ಕೊರೋನಾ ವೈರಸ್‌ ಲಾಕ್‌ಡೌನ್‌ ಇರುವ ಕಾರಣ ಮನೆಯಲ್ಲಿಯೇ ಮಕ್ಕಳೊಟ್ಟಿಗೆ ಟೈಂ ಪಾಸ್‌ ಮಾಡುತ್ತಿರುವ ಯಶ್‌ ಮಗಳೊಟ್ಟಿಗೆ ಶೇರ್ ಮಾಡಿಕೊಂಡ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.

ಯಶ್‌- ಐರಾ ಊಟ ಮಾಡುತ್ತಿದ್ದ ವಿಡಿಯೋ ವೈರಲ್

 
 
 
 
 
 
 
 
 
 
 
 
 

And i surrender...❤ P.S " Perks of home quarantine " my t'shirt doesn't agree though 😜 Stay safe everyone 🤗

A post shared by Yash (@thenameisyash) on Mar 23, 2020 at 8:40am PDT

ರಾಕಿಂಗ್ ಸ್ಟಾರ್ ಯಶ್‌ ಮಗಳಿಗೆ ಊಟ ಮಾಡಿಸುಲು ಪ್ರಯತ್ನ ಪಟ್ಟರೆ ಐರಾ 'ನೋ' ಎಂದು ಹೇಳುತ್ತಾ, ತಟ್ಟೆಯಲ್ಲಿದ ಊಟವನ್ನು ತಂದೆಗೆ ತಿನಿಸುತ್ತಿದ್ದಳು. ಯಶ್‌ ಶರ್ಟ್‌ ಮೇಲೆಲ್ಲಾ ಚೆಲ್ಲಿದರೂ ಮಗಳ ಮುದ್ದು ತುಂಟಾಟವನ್ನು ನೋಡಿ ನಕ್ಕು ಸುಮ್ಮನಾಗಿದ್ದರು ಮಿ.ರಾಮಾಚಾರಿ.

ಬೇಕಿಂಗ್ ಹಾಗೂ ಕುಕ್ಕಿಂಗ್‌ನಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಇರುವ ರಾಧಿಕಾ ಯಶ್‌ ಹುಟ್ಟು ಹಬ್ಬಕ್ಕೆ ಮಗಳ ಜೊತೆ ಕೇಕ್‌ ತಯಾರಿಸಿದ್ದರು. ವಿಡಿಯೋದಲ್ಲಿ ಐರಾ ಕೇಕ್‌ ತಯಾರಿ ಮಾಡುತ್ತಲೇ ತಿನ್ನುತ್ತಿದ್ದ ವಿಡಿಯೋಗೆ ನೆಟ್ಟಿಗರ ಮಗ ಗೆದ್ದಿತ್ತು. ಮನೆಯಲ್ಲಿ ಅಮ್ಮ ತಯಾರಿಸಿದ ಕಲ್ಲಂಗಡಿ ಐಸ್‌ ಕ್ರೀಮನ್ನು ಸಂತೋಷದಿಂದ ಸವಿಯುತ್ತ ' Beat the Heat'ಎಂದು ಫೋಟೀ ಶೇರ್ ಮಾಡಿಕೊಂಡು ರಾಧಿಕಾ ಬರೆದುಕೊಂಡಿದ್ದರು. ಒಟ್ಟಿನಲ್ಲಿ ಇಬ್ಬರು ಮುದ್ದಾದ ಮಕ್ಕಳನ್ನು ನೋಡಿ ಅಭಿಮಾನಿಗಳಿಗೆ ಸಂತೋಷವಾಗಿ, ಈ ನಿಟ್ಟಿನಲ್ಲಿ ಜೂನಿಯರ್‌ ಕೂಡ ಸ್ಟಾರ್‌ ಕಿಡ್‌ ಆಗುವುದರಲ್ಲಿ ಅನುಮಾನವಿಲ್ಲ.