Asianet Suvarna News Asianet Suvarna News

ಟಾಕ್ಸಿಕ್ ಸಿನಿಮಾ ಶೂಟಿಂಗ್ ಶುರುವಾಯ್ತು; ಯಶ್ ಫ್ಯಾನ್ಸ್ ಮನದಲ್ಲಿ ನೂರಾರು ಪ್ರಶ್ನೆಗಳು!

ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ, ಕನ್ನಡದ ನಟ ರಾಕಿಂಗ್‌ ಸ್ಟಾರ್ ಯಶ್ ಜೋಡಿ ಮೂಲಕ ಮೂಡಿ ಬಂದಿದ್ದ ಕೆಜಿಎಫ್‌ ಸರಣಿಯ 'ಕೆಜಿಎಫ್‌ ಭಾಗ-1' ಮತ್ತು 'ಕೆಜಿಎಫ್‌ ಭಾಗ-2' ಸಿನಿಮಾಗಳು ಜಗತ್ತನ್ನೇ ನಿಬ್ಬೆರಗಾಗಿಸುವಷ್ಟು ಜನಪ್ರಿಯತೆ ಹಾಗು ಕಲೆಕ್ಷನ್ ಮಾಡಿದೆ. 

Rocking star yash lead and Geetu Mohandas directional Toxic movie shooting starts
Author
First Published Feb 23, 2024, 4:43 PM IST | Last Updated Feb 23, 2024, 4:45 PM IST

ರಾಕಿಂಗ್ ಸ್ಟಾರ್ ಯಶ್ ನಟನೆಯ ಮುಂಬರುವ 'ಟಾಕ್ಸಿಕ್' ಸಿನಿಮಾದ ಶೂಟಿಂಗ್ ಶುರುವಾಗಿದೆ. ಬಹುನಿರೀಕ್ಷಿತ ಟಾಕ್ಸಿಕ್ (Toxic Movie)ಸಿನಿಮಾ 2025ರಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದ್ದು, ಸದ್ಯ ಶೂಟಿಂಗ್ ಶುರುವಾಗಿದ್ದು ಭಾರೀ ಕುತೂಹಲ ಕೆರಳಿಸುತ್ತಿದೆ. ಯಶ್ ನಾಯಕತ್ವದ ಟಾಕ್ಸಿಕ್ ಚಿತ್ರಕ್ಕೆ ಇನ್ನೂ ನಾಯಕಿ ಅಧಿಕೃತವಾಗಿ ಫೈನಲ್ ಆಗಿಲ್ಲ. ಅನಧಿಕೃತವಾಗಿ ಅವರು ಇವರು ಎಂಬ ಟಾಕ್ ಮಾತ್ರವೇ ವೈರಲ್ ಆಗುತ್ತಿವೆ. ಸದ್ಯಕ್ಕೆ ಯಶ್ (Rocking Star Yash)ನಾಯಕರು, ಗೀತು ಮೋಹನ್‌ದಾಸ್‌ Geetu Mohandas ಎಂಬುದು ಸದ್ಯಕ್ಕೆ ಕನ್ಫರ್ಮ್ ಆಗಿದೆ.

ಟಾಕ್ಸಿಕ್ ಸಿನಿಮಾ ಶೂಟಿಂಗ್ ಯಾವಾಗ ಶುರುವಾಗುತ್ತೋ ಎಂದು ಯಶ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಈಗ ಅವರಿಗೆ ಶುಭ ಸುದ್ದಿ ಬಂದು ತಲುಪಿದೆ. ಟಾಕ್ಸಿಕ್ ಸಿನಿಮಾ ಶೂಟಿಂಗ್ ಶುರುವಾಗಿದೆ, ಯಶ್ ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಿ, ಏನು ಎಂಬ ಡೀಟೇಲ್ಸ್ ಸದ್ಯ ಹೊರಗೆ ಬಂದಿಲ್ಲವಾದರೂ ಕಾಲಕಾಲಕ್ಕೆ ಅವೆಲ್ಲ ಅಪ್‌ಡೇಟ್‌ಗಳು ಒಂದೊಂದಾಗಿ ಸಿಗಲಿವೆ. ಇಡೀ ಜಗತ್ತೇ ಸದ್ಯ ಕುತೂಹಲದ ಕಣ್ಣಿಂದ ನೋಡುತ್ತಿರುವ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಶುರುವಾಗಿದೆ ಎಂಬುದು ಜಗತ್ತೇ ಗಮನಿಸುತಗ್ತಿರುವ ಸಂಗತಿ ಎಂಬುದರಲ್ಲಿ ಸಂಶಯವೇ ಇಲ್ಲ. 

ನಟ ದರ್ಶನ್ ಮೇಲೆ ಮೂರು, ಮತ್ತೊಂದು ದೂರು ದಾಖಲು; ಗೌಡತಿಯರ ಸೇನೆ ಭಾರೀ ಗರಂ!

ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ, ಕನ್ನಡದ ನಟ ರಾಕಿಂಗ್‌ ಸ್ಟಾರ್ ಯಶ್ ಜೋಡಿ ಮೂಲಕ ಮೂಡಿ ಬಂದಿದ್ದ ಕೆಜಿಎಫ್‌ ಸರಣಿಯ 'ಕೆಜಿಎಫ್‌ ಭಾಗ-1' ಮತ್ತು 'ಕೆಜಿಎಫ್‌ ಭಾಗ-2' ಸಿನಿಮಾಗಳು ಜಗತ್ತನ್ನೇ ನಿಬ್ಬೆರಗಾಗಿಸುವಷ್ಟು ಜನಪ್ರಿಯತೆ ಹಾಗು ಕಲೆಕ್ಷನ್ ಮಾಡಿದೆ. ಈಗ ಕೆಜಿಎಫ್‌ ಸಿನಿಮಕಾದಲ್ಲಿ ಮೋಡಿ ಮಾಡಿರುವ ನಟ ಯಶ್ ನಟನೆಯ ಮುಂಬರುವ ಟಾಕ್ಸಿಕ್ ಸಿನಿಮಾ ಬಗ್ಗೆ ಸಹಜವಾಗಿಯೇ ಭಾರೀ ಕುತೂಹಲ ಮನೆ ಮಾಡಿದೆ. ಶೂಟಿಂಗ್‌ಗೂ ಮೊದಲೇ ಸಾಕಷ್ಟು ಸುದ್ದಿಯಾಗಿರುವ ಟಾಕ್ಸಿಕ್ ಬಿಡುಗಡೆಗೂ ಮೊದಲೇ ದಾಖಲೆ ಮಾಡಲಿದೆ ಎನ್ನಲಾಗುತ್ತಿದೆ. 

ಪುರುಷರಿಗೆ ಪಾಠ ಮಾಡಿದ್ರು ನಟಿ ಪ್ರಿಯಾಂಕಾ ಚೋಪ್ರಾ; ಲೆಸನ್ ನೋಡಿದ್ರೆ ತಲೆ ತಿರುಗೋದು ಗ್ಯಾರಂಟಿ!

ಬಿಡುಗಡೆಗೂ ಮೊದಲೇ ಈ ಪರಿ ಸುದ್ದಿ-ಸದ್ದು ಮಾಡುತ್ತಿರುವ ಟಾಕ್ಸಿಕ್ ಸಿನಿಮಾ ಬಿಡುಗಡೆ ಬಳಿಕವಂತೂ ಪ್ರಪಂಚದ ಮೂಲೆಮೂಲೆಯನ್ನು ತಲುಪಲಿದೆ ಎನ್ನಲಾಗುತ್ತಿದೆ. ಸಿನಿಮಾವೇನಾದರೂ ತುಂಬಾ ಚೆನ್ನಾಗಿದ್ದರೆ ಕನ್ನಡ ಸಿನಿಮಾ ಉದ್ಯಮ ಪ್ರಪಂಚದಲ್ಲಿ ಮೇಲಿನ ಸ್ತರದಲ್ಲಿ ನಿಲ್ಲುವುದರಲ್ಲಿ ಸಂದೇಹವೇ ಇಲ್ಲ ಎಂಬ ಆಶಾಭಾವನೆ ಕನ್ನಡಿಗರಲ್ಲಿದೆ. ಕೆಜಿಎಫ್ ಮೂಲಕ ಸ್ಯಾಂಡಲ್‌ವುಡ್ ಇಂಡಸ್ಟ್ರಿ ಭಾರತದಲ್ಲಿ ಹೆಸರುವಾಸಿ ಆದಂತೆ ಟಾಕ್ಸಿಕ್ ಬಳಿಕ ಕನ್ನಡ ಸಿನಿಮಾ ಉದ್ಯಮ 'ಟಾಕ್ ಆಫ್‌ ದಿ ವರ್ಲ್ಡ್‌' ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. 

ಅಕ್ಷಯ್ -ಟೈಗರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ; ಬಡೇ ಮಿಯಾನ್ ಚೋಟೆ ಮಿಯಾನ್' ಟೈಟಲ್ ಟ್ರ್ಯಾಕ್ ನೋಡಿದ್ರಾ?

Latest Videos
Follow Us:
Download App:
  • android
  • ios