Rocking Star Actor Yash Wife Radhika Pandit Birthday: ʼರಾಕಿಂಗ್ ಸ್ಟಾರ್ʼ ಯಶ್ ಪತ್ನಿ ರಾಧಿಕಾ ಪಂಡಿತ್ ಅವರು ಇತ್ತೀಚೆಗೆ 41ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾರೆ. ಆ ವೇಳೆ ಯಶ್ ಅವರು ಪತ್ನಿಗೆ ಮರೆಯಲಾರದ ಉಡುಗೊರೆ ಕೊಟ್ಟಿದ್ದಾರೆ.
ನಟ ʼರಾಕಿಂಗ್ ಸ್ಟಾರ್ʼ ಯಶ್ ಅವರು ಒಳ್ಳೆಯ ಮಗ, ಒಳ್ಳೆಯ ಗಂಡ, ಒಳ್ಳೆಯ ತಂದೆ, ಒಳ್ಳೆಯ ನಟ ಎಂದು ʼಶ್ರೀಗೌರಿʼ ಧಾರಾವಾಹಿ ನಟಿ ನಂದಿನಿ ಗೌಡ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅಂತೆಯೇ ರಾಧಿಕಾ ಪಂಡಿತ್ ಹಾಗೂ ಯಶ್ ಜೋಡಿಯನ್ನು ನೋಡೋದು ಒಂದೇ ಖುಷಿ. ಸಿನಿಮಾ ಕೆಲಸಗಳ ಜೊತೆ ಫ್ಯಾಮಿಲಿಗೆ ಟೈಮ್ ಕೊಡುವ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಜನ್ಮದಿನವನ್ನು ಆಚರಿಸಿದ್ದಾರೆ. ಇನ್ನು ಜನ್ಮದಿನಕ್ಕೆ ಹಾಡು ಹಾಡಿ ಇನ್ನಷ್ಟು ಮೆಮೊರೆಬಲ್ ಆಗಿರುವಂತೆ ಮಾಡಿದ್ದಾರೆ.
ಹೋಟೆಲ್‌ನಲ್ಲಿ ಪಾರ್ಟಿ ಮಾಡಿದ್ರು!
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಯಶ್ ಅವರು ಪತ್ನಿ ಜನ್ಮದಿನ ಆಚರಣೆ ಮಾಡಿದ್ದಾರೆ. ಈ ವೇಳೆ ಇವರ ಸ್ನೇಹಿತರು, ಕುಟುಂಬಸ್ಥರು ಮಾತ್ರ ಆಗಮಿಸಿದ್ದರು. ʼನಂದಗೋಕುಲʼ ಧಾರಾವಾಹಿ ಕಲಾವಿದರು, ಚಿತ್ರರಂಗದ ಆಪ್ತರು ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಮಕ್ಕಳು ಆಯ್ರಾ, ಯಥರ್ವ್, ಯಶ್ ಸಮ್ಮುಖದಲ್ಲಿ ರಾಧಿಕಾ ಪಂಡಿತ್ ಅವರು ಕೇಕ್ ಕಟ್ ಮಾಡಿದರು.
Photos: ಎಷ್ಟೇ ಫೇಮಸ್ ಆದರೂ ನಡೆದು ಬಂದ ದಾರಿ ಮರೆಯದ ರಾಧಿಕಾ ಪಂಡಿತ್, ಯಶ್! ಸಾಕ್ಷಿ ಇಲ್ಲಿದೆ!
ವಿಡಿಯೋ ಹಂಚಿಕೊಂಡ ಯಶ್
ಯಶ್ ಅವರು ರಾಧಿಕಾ ಪಂಡಿತ್‌ಗೋಸ್ಕರ ʼಜೊತೆಯಲಿ ಜೊತೆಯಲಿʼ ಎಂದು ಹಾಡು ಹಾಡಿದ್ದಾರೆ. ಈ ಹಿಂದೆ ಯಶ್ ಅವರು ʼಅಣ್ತಮ್ಮʼ ಹಾಡು ಹಾಡಿ ಜನರ ಮನಸ್ಸು ಗೆದ್ದಿದ್ದರು. ಈಗ ಕನ್ನಡದಲ್ಲಿ ʼಜೊತೆಯಲಿ ಜೊತೆಯಲಿʼ ಹಾಡು ಹಾಡಿ ಮಡದಿ ಮನಸ್ಸನ್ನು ಮತ್ತೆ ಮತ್ತೆ ಕದಿಯುತ್ತಿದ್ದಾರೆ. ಯಶ್ ಹಾಡು ಕೇಳಿದವರು ಖುಷಿಯಿಂದ ಕೂಗಿದ್ದಾರೆ. ಇನ್ನು ಪತಿಯ ಹಾಡು ಕೇಳಿ ರಾಧಿಕಾ ಹೃದಯ ತುಂಬಿ ಬಂದಿದೆ. ಈ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವೈಭವದಿಂದ ಪತ್ನಿ ರಾಧಿಕಾ ಪಂಡಿತ್ ಜನ್ಮದಿನ ಆಚರಿಸಿದ ʼರಾಕಿಂಗ್ ಸ್ಟಾರ್ʼ ಯಶ್; ಫೋಟೋಗಳಿವು!
ನೆಟ್ಟಿಗರಿಂದ ಮೆಚ್ಚುಗೆ!
“ಬರ್ತಡೇ ಪಾರ್ಟಿಗಳಲ್ಲಿ ಪರಭಾಷಾ ಹಾಡಿಗೆ ಕುಣಿಯುವ ನಟನಟಿಯರ ಮಧ್ಯೆ ಅಲ್ಲೊಬ್ಬ ಕನ್ನಡ ಗೀತೆಯನ್ನು ಹಾಡ್ತಿದ್ದ. ಯಶ್ ಅವರು ನಟನೆಗೂ ಸೈ, ಡ್ಯಾನ್ಸ್‌ಗೂ ಸೈ, ಹಾಡಿಗೂ ಸೈ. ರಾಧಿಕಾ ಪಂಡಿತ್ ಸದಾ ಹೀಗೆ ನಗುತ್ತಿರಲಿ” ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ರಾಧಿಕಾ-ಯಶ್ ಕ್ಯೂಟ್ ಜೋಡಿ!
ನಟ ಯಶ್ ಅವರನ್ನು ಮದುವೆಯಾದಬಳಿಕ ರಾಧಿಕಾ ಪಂಡಿತ್ ಅವರು ಸಿನಿಮಾಗಳತ್ತ ಮುಖ ಮಾಡಿಲ್ಲ. ಆಯ್ರಾ, ಯಥರ್ವ ಅವರ ಪಾಲನೆಯಲ್ಲಿ ಬ್ಯುಸಿ ಆಗಿರುವ ರಾಧಿಕಾ ಪಂಡಿತ್ ಆಗಾಗ ಪತಿ ಯಶ್ ಜೊತೆಗೆ ಜಾಹೀರಾತುಗಳಲ್ಲಿ ಮಾತ್ರ ಕಾಣಿಸಿಕೊಳ್ತಾರೆ. ಇನ್ನು ಆತ್ಮೀಯರ ಮದುವೆ ಸಮಾರಂಭಗಳಲ್ಲಿ ಪತಿಯ ಜೊತೆಗೆ ಬಂದು ನವಜೋಡಿಗೆ ಶುಭ ಹಾರೈಸುತ್ತಾರೆ. ಎಲ್ಲೇ ಹೋದರೂ ಯಶ್ ಅವರು ಪತ್ನಿ ರಾಧಿಕಾರ ಕೈಹಿಡಿದು ಹೋಗುತ್ತಾರೆ. ಪತ್ನಿಯನ್ನು ಪ್ರೊಟೆಕ್ಟ್ ಮಾಡುವ ಪರಿ ಮಾತ್ರ ಎದ್ದು ಕಾಣುವುದು. ಒಟ್ಟಿನಲ್ಲಿ ಈ ಜೋಡಿ ಎಲ್ಲರ ಫೇವರಿಟ್ ಎನ್ನಬಹುದು.
ಈಗ ಸಿನಿಮಾದಿಂದ ದೂರ ಉಳಿದಿರುವ ರಾಧಿಕಾ ಪಂಡಿತ್ ಹಿಂದೆ ಎಷ್ಟು ಹಿಟ್ಸ್ ಕೊಟ್ಟಿದ್ರು ಗೊತ್ತಾ?
ಟಾಕ್ಸಿಕ್ ಸಿನಿಮಾ ಯಾವಾಗ?
ನಟ ಯಶ್ ಅವರು ʼಕೆಜಿಎಫ್ʼ, ʼಕೆಜಿಎಫ್ 2ʼ ಸಿನಿಮಾಗಳ ಯಶಸ್ಸಿನ ಬಳಿಕ ʼಟಾಕ್ಸಿಕ್ʼ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮಲಯಾಳಂ ಸಿನಿಮಾ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ʼಒಳ್ಳೆಯ ಸಿನಿಮಾ ಮಾಡುತ್ತಿರೋದಿಕ್ಕೆ ತಡವಾಗುತ್ತಿದೆʼ ಎಂದು ಅವರು ಹೇಳಿದ್ದರು. ಈಗಾಗಲೇ ಟೀಸರ್ ಮೂಲಕ ಈ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ʼಟಾಕ್ಸಿಕ್ʼ ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ವೀಕ್ಷಕರು ಕಾಯುತ್ತಿದ್ದಾರೆ.
ʼಕೆಜಿಎಫ್ʼ ಯಶಸ್ಸಿನ ಬಳಿಕ ಯಶ್ ಮೇಲೆ ಜಗತ್ತಿನ ಕಣ್ಣಿದೆ. ಬಾಲಿವುಡ್‌ನ ಸ್ಟಾರ್ ನಟರು ಕೂಡ ಯಶ್ ಅವರು ನ್ಯಾಶನಲ್ ಸ್ಟಾರ್ ಎಂದು ಹೇಳಿದ್ದೂ ಉಂಟು. ಹೀಗಾಗಿ ಯಶ್ ಅತ್ಯಂತ ಬೇಡಿಕೆಯ ನಟ ಎಂದು ಹೇಳಬಹುದು.
