- Home
- Entertainment
- Sandalwood
- Photos: ಎಷ್ಟೇ ಫೇಮಸ್ ಆದರೂ ನಡೆದು ಬಂದ ದಾರಿ ಮರೆಯದ ರಾಧಿಕಾ ಪಂಡಿತ್, ಯಶ್! ಸಾಕ್ಷಿ ಇಲ್ಲಿದೆ!
Photos: ಎಷ್ಟೇ ಫೇಮಸ್ ಆದರೂ ನಡೆದು ಬಂದ ದಾರಿ ಮರೆಯದ ರಾಧಿಕಾ ಪಂಡಿತ್, ಯಶ್! ಸಾಕ್ಷಿ ಇಲ್ಲಿದೆ!
rocking star actor yash wife radhika pandit birthday photos: ರಾಕಿಂಗ್ ಸ್ಟಾರ್ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಮಾರ್ಚ್ 7ರಂದು ಜನ್ಮದಿನ ಆಚರಿಸಿಕೊಂಡರು. ಈ ಜನ್ಮದಿನದಲ್ಲಿ ಅವರ ಕುಟುಂಬಸ್ಥರು, ಸ್ನೇಹಿತರು ಇದ್ದರು. ಇನ್ನು ʼನಂದಗೋಕುಲʼ ಧಾರಾವಾಹಿಯಲ್ಲಿ ಯಶ್, ರಾಧಿಕಾ ಪಂಡಿತ್ ನಟಿಸಿದ್ದರು. ಈ ಕಲಾವಿದರು ಈ ಜನ್ಮದಿನದ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ನಟಿ ರಾಧಿಕಾ ಪಂಡಿತ್ ಜನ್ಮದಿನ ಆಚರಣೆಯಲ್ಲಿ ನಂದಿನಿ ಗೌಡ ಅವರು ಭಾಗಿಯಾಗಿದ್ದಾರೆ. ಈ ಹಿಂದೆ ʼನಂದಗೋಕುಲʼ ಧಾರಾವಾಹಿಯಲ್ಲಿ ನಂದಿನಿ ಗೌಡ, ರಾಧಿಕಾ ಪಂಡಿತ್ ಕೂಡ ನಟಿಸಿದ್ದರು.
ಈ ಹಿಂದೆ ʼನಂದಗೋಕುಲʼ ಧಾರಾವಾಹಿಯಲ್ಲಿ ನಟಿಸಿದ್ದ ಕಲಾವಿದರ ಜೊತೆ ಯಶ್, ರಾಧಿಕಾ ಪಂಡಿತ್ ಒಳ್ಳೆಯ ಸ್ನೇಹ ಸಂಬಂಧ ಹೊಂದಿದ್ದಾರೆ. ರಾಧಿಕಾ ಪಂಡಿತ್ ಮನೆಯ ಎಲ್ಲ ಕಾರ್ಯಕ್ರಮಗಳಲ್ಲಿಯೂ ಇವರೆಲ್ಲ ಭಾಗಿ ಆಗುತ್ತಾರೆ.
ನಟಿ ರಾಧಿಕಾ ಪಂಡಿತ್ ಅವರು ಬಂಗಾರದ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದಾರೆ. 41 ವರ್ಷ ವಯಸ್ಸಾದರೂ ಕೂಡ ರಾಧಿಕಾ ಪಂಡಿತ್ ಇನ್ನೂ 25 ವರ್ಷ ವಯಸ್ಸಿನ ಹುಡುಗಿ ಥರ ಕಾಣ್ತಾರೆ.
ರಾಧಿಕಾ ಪಂಡಿತ್ ಜನ್ಮದಿನ ಪಾರ್ಟಿಗೆ ಲಿಮಿಟೆಟ್ ಸಂಖ್ಯೆಯಲ್ಲಿ ಜನರು ಬಂದಿದ್ದರು. ಇನ್ನು ಅಭಿಮಾನಿಗಳ ಜೊತೆ ಕೂಡ ರಾಧಿಕಾ ಜನ್ಮದಿನ ಆಚರಣೆ ಮಾಡಿದ್ದಾರೆ.
ನಂದಗೋಕುಲ ಧಾರಾವಾಹಿಯಲ್ಲಿ ರಾಧಿಕಾ ಪಂಡಿತ್ ಹಾಗೂ ಯಶ್ ನಟಿಸಿದ್ದರು. ಇದು ಇವರ ಮೊದಲ ಧಾರಾವಾಹಿ ಆಗಿತ್ತು. ಅಲ್ಲಿಂದಲೇ ನಟನೆ ಶುರುವಾಗಿತ್ತು.
ರಾಧಿಕಾ ಪಂಡಿತ್ ತಾಯಿ ಕೂಡ ವೆಸ್ಟರ್ನ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ರಾಧಿಕಾ ಪಂಡಿತ್ ಅವರ ಜೊತೆಗೆ ತಂದೆ-ತಾಯಿ ಕೂಡ ಇದ್ದು, ಮೊಮ್ಮಕ್ಕಳ ಲಾಲನೆ-ಪಾಲನೆ ಮಾಡುತ್ತಾರೆ.
ಯಶ್ ಅವರು ಇಂದು ನ್ಯಾಶನಲ್ ಸ್ಟಾರ್. ಇವರು ತಾವು ನಡೆದುಬಂದ ಹಾದಿಯನ್ನು ಮರೆತಿಲ್ಲ. ಆರಂಭದ ದಿನಗಳಲ್ಲಿ ಬೆಂಬಲವಾಗಿ ನಿಂತ ಸ್ನೇಹಿತರನ್ನು ಈ ಸ್ಟಾರ್ ದಂಪತಿ ಮರೆಯೋದಿಲ್ಲ.
ಕೆಲವರು ಹೆಸರು ಮಾಡಿದಮೇಲೆ ಅಂದು ಬೆಂಬಲವಾಗಿ ನಿಂತ ಸ್ನೇಹಿತರನ್ನು ಮರೆತ ಉದಾಹರಣೆಗಳು ಇರಬಹುದು. ಆದರೆ ರಾಧಿಕಾ, ಯಶ್ ಮಾತ್ರ ಹಾಗಲ್ಲ.
ಯಶ್, ರಾಧಿಕಾ ಪಂಡಿತ್ ಸ್ನೇಹಿತರು ಕೂಡ ಅವರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಅಷ್ಟೇ ಅಲ್ಲದೆ ಪ್ರಾಮಾಣಿಕತೆ, ನಿಯತ್ತು ಹೊಂದಿದ್ದಾರೆ.
ರಾಧಿಕಾ ಪಂಡಿತ್ ಅವರು ಪತಿ ಯಶ್‌ಗೆ ಕೇಕ್ ತಿನಿಸಿದರು. ಇನ್ನು ಅ ವೇಳೆ ಮಕ್ಕಳು ಆಯ್ರಾ ಹಾಗೂ ಯಥರ್ವ ಕೂಡ ಇದ್ದರು. ಒಟ್ಟಿನಲ್ಲಿ ಈ ಖುಷಿಯನ್ನು ಸಂಭ್ರಮಿಸಲಾಗಿದೆ.