Asianet Suvarna News Asianet Suvarna News

ಹಲವು ವರ್ಷಗಳ ನಂತರ ಮತ್ತೆ ತೆರೆ ಮೇಲೆ ಬರಲಿರುವ ಪ್ರಣೀತಾ ಸುಭಾಷ್, ಇದ್ಯಾವ ಸಿನಿಮಾ?

ರಾಮನ ಅವತಾರ ಎಂದು ಹೇಗೆ ಹೆಸರಟ್ಟಿದ್ದೇವೆ ಎಂದರೆ ಎಲ್ಲರ ಲೈಫ್‌ನಲ್ಲಿಯೂ ಒಂದಲ್ಲ ಒಂದು ರಾಮಾಯಣ ನಡೆಯುತ್ತದೆ. ಸೀತೆ ತರ ಹೆಂಡತಿ, ಲಕ್ಷ್ಮಣ ರೀತಿ ತಮ್ಮ, ರಾವಣನಿಂದ ಆಗುವ ಸಮಸ್ಯೆ? ಈ ರೀತಿ ಸಮಸ್ಯೆಗಳು ಎಲ್ಲರ ಜೀವನದಲ್ಲಿ ನಡೆಯುತ್ತವೆ.

Rishi lead kannada movie Ramana Avatara trailer release srb
Author
First Published Apr 29, 2024, 7:43 PM IST

ಟೀಸರ್, ಹಾಡು ಹಾಗೂ ವಿಭಿನ್ನ ಪ್ರಮೋಷನ್ ವಿಡಿಯೋಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಸಿನಿಮಾ ರಾಮನ ಅವತಾರ. ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ರಾಮನ ಅವತಾರ (Ramana Avatara) ಸಿನಿಮಾದ ಮೊದಲ ನೋಟ ಅನಾವರಣ ಮಾಡಲಾಯಿತು. ಈ ವೇಳೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ನಟ ರಿಷಿ ಮಾತನಾಡಿ, ಈ ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣ ಆಪರೇಷನ್ ಅಲಮೇಲಮ್ಮ. ಈ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಆ ರೀತಿ ಎಂಟರ್ ಟೈನ್ಮೆಂಟ್ ಸಿನಿಮಾ ಮಾಡಿ ಎನ್ನುತ್ತಿದ್ದರು. ಅದೇ ರೀತಿ ಹಾಸ್ಯಭಾರತಿ ಚಿತ್ರ ಮಾಡಿ ಎನ್ನುತ್ತಿದ್ದರು. ನನಗೆ ಆಪರೇಷನ್ ಅಲಮೇಲಮ್ಮ ಮ್ಯಾಜಿಕ್. ಅದನ್ನು ರಿಪೀಟ್ ಮಾಡುವ ಆಗಿಲ್ಲ. ನೋಡೋಣಾ ಅದು ಸರಳ ಜಾನರ್ ಅಲ್ಲ. ಆ ಸಮಯದಲ್ಲಿ ಪಂಪಾಪತಿ ಸಿಕ್ಕಿದ್ದರು. 

ಅವರ ಹಾಸ್ಯ ನನಗೆ ಇಷ್ಟವಾಯ್ತು. ರಾಮಾಯಣ ಇಟ್ಟುಕೊಂಡು ಸಿನಿಮಾ ಮಾಡುವ ಕಥೆ ತಂದರು. 2024 ರಲ್ಲಿ ನಡೆಯುವ ಘಟನೆಗೆ ರಾಮಾಯಣ ಮೌಲ್ಯವನ್ನು ತೋರಿಸುವುದು. ಈ ಚಿತ್ರದಲ್ಲಿ ತೋರಿಸುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಇದು ಖುಷಿ ಕೊಡುವ ಸಿನಿಮಾ. ಪ್ರತಿಯೊಬ್ಬರು ತಮ್ಮ ಪಾತ್ರಗಳಿಗೆ ಅದ್ಭುತವಾಗಿ ಜೀವ ತುಂಬಿದ್ದಾರೆ. ಸಿನಿಮಾ ಮೇ‌10ರಂದು ರಿಲೀಸ್ ಆಗ್ತಿದೆ. ಹಾಡುಗಳು ನನಗೆ ತುಂಬಾ ಇಷ್ಟ. ಇಡೀ ಸಿನಿಮಾಗೆ ದುಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

'ಪುಷ್ಪಾ' ಬಿಡುಗಡೆ ಟೈಂ ಟೆನ್‌ಷನ್ ಬಿಚ್ಚಿಟ್ಟ ಅಲ್ಲು ಅರ್ಜುನ್; ಥ್ಯಾಂಕ್ಯೂ ಅಂದ್ರಲ್ಲ, ಅದು ಯಾರಿಗೆ?

ನಿರ್ದೇಶಕ ವಿಕಾಸ್ ಪಂಪಾಪತಿ ಮಾತನಾಡಿ, ಈ ಸಿನಿಮಾ ಕ್ಯಾರೆಕ್ಟರ್ ಜರ್ನಿ ಹೇಳುತ್ತಿದ್ದೇವೆ. ರಾಮ ಪಾತ್ರಧಾರಿ ಅವನಿಗೆ ಅವನೇ ಜೆಂಟಲ್ ಮ್ಯಾನ್ ಎಂದು ಹೇಳಿಕೊಂಡು ಓಡಾಡುತ್ತಾ ಇರುತ್ತಾನೆ. ಅವನು ಹೇಗೆ ಜೆಂಟಲ್ ಮ್ಯಾನ್ ಆಗುತ್ತಾನೆ? ಅವನ ಜೀವನದಲ್ಲಿ ನಡೆದ ಘಟನೆಗಳೇನು ಅವನನ್ನು ಹೇಗೆ ಬದಲಾಯಿಸುತ್ತದೆ?  ರಾಮನ ಅವತಾರ ಎಂದು ಯಾಕೆ ಇಟ್ಟಿದ್ದೇವೆ ಎಂದರೆ, ರಾಮನ ಹೇಗೆ ಜೆಂಟಲ್ ಮ್ಯಾನ್ ಆಗುತ್ತಾನೆ ಅನ್ನುವುದನ್ನು ಎಂಟರ್ ಟೈನ್ಮೆಂಟ್ ಆಗಿ ಹೇಳಿದ್ದೇವೆ. 

ನೀತೂ ಮನದಾಳದ ಮಾತು, ಏನ್ ಹೇಳಿದ್ರು ಅನ್ನೋದಕ್ಕಿಂತ ಯಾಕ್ ಹೇಳಿದ್ರು ಅಂತ ಯೋಚಿಸಿ!

ರಾಮನ ಅವತಾರ ಎಂದು ಹೇಗೆ ಹೆಸರಟ್ಟಿದ್ದೇವೆ ಎಂದರೆ ಎಲ್ಲರ ಲೈಫ್‌ನಲ್ಲಿಯೂ ಒಂದಲ್ಲ ಒಂದು ರಾಮಾಯಣ ನಡೆಯುತ್ತದೆ. ಸೀತೆ ತರ ಹೆಂಡತಿ, ಲಕ್ಷ್ಮಣ ರೀತಿ ತಮ್ಮ, ರಾವಣನಿಂದ ಆಗುವ ಸಮಸ್ಯೆ? ಈ ರೀತಿ ಸಮಸ್ಯೆಗಳು ಎಲ್ಲರ ಜೀವನದಲ್ಲಿ ನಡೆಯುತ್ತವೆ. ಆ ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಹೇಳಿದರು.

ನಟಿ ಪ್ರಣೀತಾ ಸುಭಾಷ್ ಮಾತನಾಡಿ, ರಾಮನ ಅವತಾರ ತುಂಬಾ ವಿಶೇಷವಾದ ಸಿನಿಮಾ. ರಾಮಾಯಣ ಎಲ್ಲರಿಗೂ ಗೊತ್ತಿದೆ. ಈ ರಾಮಾಯಣ ಮಾರ್ಡನ್ ಟೇಕ್. ನಾನು ಈ ರೀತಿ ಪ್ರಾಜೆಕ್ಟ್ ಭಾಗವಾಗಿದ್ದು, ಖುಷಿ ಕೊಟ್ಟಿದೆ. ರಾಮಾಯಣ ಬಗ್ಗೆ ಅಂದ ತಕ್ಷಣ ಸಿನಿಮಾ ಒಪ್ಪಿಕೊಂಡೆ. ರಿಷಿ ಬೇರೆ ಅವರ ಚಿತ್ರಗಳನ್ನು ನೋಡಿದ್ದೇನೆ. ಶೂಟಿಂಗ್ ಜರ್ನಿ ತುಂಬಾ ಚೆನ್ನಾಗಿತ್ತು ಎಂದು ಹೇಳಿದರು.

ಅಭಿಮಾನಿ ಪತ್ರಕ್ಕೆ ಸ್ವತಃ ಕೈ ಬರಹದಲ್ಲೇ ಏನಂತ ಉತ್ತರ ಬರೆದಿದ್ದರು ನಟ ವಿಷ್ಣುವರ್ಧನ್?

ನಟಿ ಶುಭ್ರ ಅಯ್ಯಪ್ಪ ಮಾತನಾಡಿ, ನಿರ್ದೇಶಕರು ನನ್ನ ಪಾತ್ರದ ಹೇಳಿದಾಗ ನಾನು ಎಕ್ಸೈಟ್ ಆದೆ. ಹಳ್ಳಿ ಹುಡುಗಿ ಪಾತ್ರದಲ್ಲಿ ನನ್ನನ್ನು ನಾನು ನೋಡಲು ಕಾತುರನಾಗಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಮೇ 10ಕ್ಕೆ‌  ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ. ನಿಮ್ಮ ಬೆಂಬಲ ಇರಲಿ ಎಂದರು.

ಡಾರ್ಲಿಂಗ್ ಪ್ರಭಾಸ್ ಯಾಕಿನ್ನೂ ಮದುವೆಯಾಗಿಲ್ಲ? ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ತು ಪಕ್ಕಾ ಉತ್ತರ!

ರಾಮನ‌ ಅವತಾರ ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಟ್ರೇಲರ್ ನಲ್ಲಿ ನಗು, ಅಳು, ಪ್ರೀತಿ-ಪ್ರೇಮ ಎಲ್ಲವೂ ಇದೆ. ಭಿನ್ನ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ರಿಷಿ, ಇತ್ತೀಚಿಗೆ ವೆಬ್​ ಸೀರಿಸ್ ಮೂಲಕವೂ ಮೋಡಿ ಮಾಡಿರುವ ಅವರೀಗ ಕಾಮಿಡಿ ಕಥೆ ಹೊತ್ತು ನಿಮ್ಮನ್ನು ನಗಿಸಲು ಬರ್ತಿದ್ದಾರೆ. 

ಬೆಂಗಳೂರಲ್ಲಿ ಕಿಟ್ಟಿ ಪಾರ್ಟೀಲಿ ಮಡದಿ ಬ್ಯುಸಿ ಇದ್ರೆ, ನೀರ್ನಳ್ಳಿ ರಾಮಕೃಷ್ಣ ಹಳ್ಳಿಗೆ ಹೋಗಿದ್ಯಾಕೆ?

'ರಾಮನ ಅವತಾರ' ಸಿನಿಮಾದಲ್ಲಿ ಪ್ರಣೀತಾ ಸುಭಾಷ್ (Pranitha Subhash) ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದಾರೆ. ನಟ ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ರಾಮನ ಅವತಾರ’ ಸಿನಿಮಾಗೆ ವಿಕಾಸ್ ಪಂಪಾಪತಿ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದಲ್ಲಿ ಇದು ಅವರ ಮೊದಲ ಅನುಭವ. 

Latest Videos
Follow Us:
Download App:
  • android
  • ios