Asianet Suvarna News Asianet Suvarna News

'ಪುಷ್ಪಾ' ಬಿಡುಗಡೆ ಟೈಂ ಟೆನ್‌ಷನ್ ಬಿಚ್ಚಿಟ್ಟ ಅಲ್ಲು ಅರ್ಜುನ್; ಥ್ಯಾಂಕ್ಯೂ ಅಂದ್ರಲ್ಲ, ಅದು ಯಾರಿಗೆ?

ಈ ಪ್ರಶ್ನೆ ನನ್ನನ್ನು ಕಾಡಿದ್ದು ನಿಜ. ಪುಷ್ಪಾ ಹಿಂದಿ ವರ್ಷನ್ ಅನ್ನು ಉತ್ತರ ಭಾರತೀಯರ ಮುಂದೆ ಇಡುವಾಗ ನನಗೆ ಈ ಪ್ರಶ್ನೆ ಬೃಹದಾಕಾರವಾಗಿ ಕಾಡಿದ್ದು ನಿಜವೇ ಆಗಿದ್ದರೂ ಎಲ್ಲೋ ಒಂದು ಕಡೆ ನನಗೆ ನಂಬಿಕೆ ಇತ್ತು. ಖಂಡಿತ ನಾರ್ತ್‌ ಪ್ರೇಕ್ಷಕರು..

Telugu actor Allu Arjun reveals the tension behind the release of Pushpa movie Hindi Version srb
Author
First Published Apr 29, 2024, 7:19 PM IST

ಪ್ಯಾನ್ ಇಂಡಿಯಾ ಸ್ಟಾರ್ ನಟ ಅಲ್ಲು ಅರ್ಜುನ್ (Allu Arjun) ಮಾತನಾಡುತ್ತ 'ಪುಷ್ಪಾ (Pushpa)' ಸಿನಿಮಾ ಹಿಂದಿ ವರ್ಷನ್‌ ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪಾ' ಚಿತ್ರವು ಸೂಪರ್ ಹಿಟ್ ದಾಖಲಿಸಿ ಒಳ್ಳೆಯ ಗಳಿಕೆ ಕಂಡಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ನಟ ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವುದೆಲ್ಲ ಈಗ ಇತಿಹಾಸ. ಆದರೆ, ಆಗಿನ್ನೂ ಪುಷ್ಪಾ ಚಿತ್ರದ ಹಿಂದಿ ವರ್ಷನ್‌ ಬಿಡುಗಡೆ ಆಗಿರಲಿಲ್ಲ, ಅಂದು ಹೆಚ್ಚು ಪಬ್ಲಿಸಿಟಿ ಕೂಡ ಮಾಡದೇ ಬಾಲಿವುಡ್ ಅಂಗಳದಲ್ಲಿ ತೆಲುಗು ಸಿನಿಮಾದ ಹಿಂದಿ ಡಬ್ಬಿಂಗ್ ವರ್ಷನ್ ಬಿಡುಗಡೆ ಮಾಡುವ ಸಂದರ್ಭದಲ್ಲಿ ನಡೆದಿದ್ದ ಮನಸ್ಸಿನ ತಾಕಲಾಟವನ್ನು ನಟ ಅಲ್ಲು ಅರ್ಜುನ್ ಬಹಿರಂಗಪಡಿಸಿದ್ದಾರೆ. 

ಅಂದು ಸಾಕಷ್ಟು ಪಬ್ಲಿಸಿಟಿ ಇಲ್ಲದೇ ಪುಷ್ಪಾ ಹಿಂದಿ ವರ್ಷನ್ ಬಿಡುಗಡೆಗೆ ನಿರ್ಧಾರ ಮಾಡಲಾಗಿತ್ತು. ಆದರೆ, ನನಗೆ ಬಾಲಿವುಡ್ ಪ್ರೇಕ್ಷಕರು ನಮ್ಮ ಚಿತ್ರವನ್ನು ಖಂಡಿತ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆಯಿತ್ತು. ಅದಕ್ಕೆ ಕಾರಣ, ನಾನು ಕಳೆದ ಐದು ವರ್ಷಗಳಿಂದ ಯೂಟ್ಯೂಬ್ ಮತ್ತು ಸೆಟಲೈಟ್‌ಗಳ ಮೇಲೆ ಕಣ್ಣಿಟ್ಟದ್ದೆ. ಅಲ್ಲಿ ನಮ್ಮ ಸೌತ್ ಚಿತ್ರಗಳನ್ನು, ಹಾಡು-ವೀಡಿಯೋಗಳನ್ನು ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಣೆ ಮಾಡಲಾಗುತ್ತಿತ್ತು. ಇವರೆಲ್ಲ ನಮ್ಮ ಚಿತ್ರಗಳ ಪ್ರೇಕ್ಷಕರು ಹೌದು. ಆದರೆ, ಇವರೆಲ್ಲ ಕೇವಲ ಯೂಟ್ಯೂಬ್ ಹಾಗೂ ಸೆಟಲೈಟ್‌ಗಳಲ್ಲಿ ಮಾತ್ರ ನಮ್ಮ ಸಿನಿಮಾಗಳನ್ನು ನೋಡುತ್ತಾರಾ ಅಥವಾ ಥಿಯೇಟರ್‌ಗೂ ಬರುತ್ತಾರಾ? 

ನೀತೂ ಮನದಾಳದ ಮಾತು, ಏನ್ ಹೇಳಿದ್ರು ಅನ್ನೋದಕ್ಕಿಂತ ಯಾಕ್ ಹೇಳಿದ್ರು ಅಂತ ಯೋಚಿಸಿ!

ಈ ಪ್ರಶ್ನೆ ನನ್ನನ್ನು ಕಾಡಿದ್ದು ನಿಜ. ಪುಷ್ಪಾ ಹಿಂದಿ ವರ್ಷನ್ ಅನ್ನು ಉತ್ತರ ಭಾರತೀಯರ ಮುಂದೆ ಇಡುವಾಗ ನನಗೆ ಈ ಪ್ರಶ್ನೆ ಬೃಹದಾಕಾರವಾಗಿ ಕಾಡಿದ್ದು ನಿಜವೇ ಆಗಿದ್ದರೂ ಎಲ್ಲೋ ಒಂದು ಕಡೆ ನನಗೆ ನಂಬಿಕೆ ಇತ್ತು. ಖಂಡಿತ ನಾರ್ತ್‌ ಪ್ರೇಕ್ಷಕರು ನಮ್ಮ ಚಿತ್ರವನ್ನು ಒಪ್ಪಿ, ಅಪ್ಪಿಕೊಳ್ಳುತ್ತಾರೆ. ಪುಷ್ಪಾ ಹಿಂದಿಯ ಅಂಗಳದಲ್ಲಿ ಕೂಡ ಜಯಭೇರಿ ಭಾರಿಸುತ್ತದೆ ಎಂದೇ ನನ್ನ ಮನಸ್ಸು ಪದೇಪದೇ ಹೇಳುತ್ತಿತ್ತು. ಪುಷ್ಪಾ ಸಿನಿಮಾ ರಿಲೀಸ್ ಮಾಡಿದಾಗ ಈ ನನ್ನ ನಂಬಿಕೆಯನ್ನು ಉತ್ತರ ಭಾರತೀಯ ಪ್ರೇಕ್ಷಕರು ಉಳಿಸಿದ್ದಾರೆ. 

ಅಭಿಮಾನಿ ಪತ್ರಕ್ಕೆ ಸ್ವತಃ ಕೈ ಬರಹದಲ್ಲೇ ಏನಂತ ಉತ್ತರ ಬರೆದಿದ್ದರು ನಟ ವಿಷ್ಣುವರ್ಧನ್?

ಥ್ಯಾಂಕ್ಸ್ ನಾರ್ತ್ ಆಡಿಯನ್ಸ್, ಥ್ಯಾಂಕ್ಸ್ ಬಾಲಿವುಡ್..'ಎಂದು ಹೇಳಿ ನಟ ಅಲ್ಲು ಅರ್ಜುನ್ ಹೃತ್ಪೂರ್ವಕವಾಗಿ 'ಪುಷ್ಪಾ' ವೀಕ್ಷಣೆ ಮಾಡಿದ ಉತ್ತರ ಭಾರತೀಯ ಸಿನಿಮಾ ಪ್ರೇಕ್ಷಕರನ್ನು ಅಭಿನಂದಿಸಿದ್ದಾರೆ. ಅಂದಹಾಗೆ, ಸದ್ಯ ಅಲ್ಲು ಅರ್ಜುನ್ ನಟನೆಯ 'ಪುಷ್ಪಾ 2' ಸಿನಿಮಾದ ಶೂಟಿಂಗ್ ಪ್ರಗತಿಯಲ್ಲಿದೆ. ಈ ಚಿತ್ರದಲ್ಲಿಯೂ ಕೂಡ ಪುಷ್ಪಾದಲ್ಲಿ ಅಲ್ಲುಗೆ ಜೋಡಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಜೊತೆಯಾಗಿದ್ದಾರೆ. 

ಡಾರ್ಲಿಂಗ್ ಪ್ರಭಾಸ್ ಯಾಕಿನ್ನೂ ಮದುವೆಯಾಗಿಲ್ಲ? ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ತು ಪಕ್ಕಾ ಉತ್ತರ!

Latest Videos
Follow Us:
Download App:
  • android
  • ios