Asianet Suvarna News Asianet Suvarna News

ಡಾರ್ಲಿಂಗ್ ಪ್ರಭಾಸ್ ಯಾಕಿನ್ನೂ ಮದುವೆಯಾಗಿಲ್ಲ? ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಕ್ತು ಪಕ್ಕಾ ಉತ್ತರ!

ನಾನು ಇಂತಹ ಅನುಭವವನ್ನು ಹಲವಾರು ಬಾರಿ ಅನುಭವಿಸಿದ್ದೇನೆ. ಹೀಗಾಗಿ ನಾನು ಇನ್ನೂ ಲವ್ ಮಾಡಿ ಅಥವಾ ಲವ್ ಮಾಡಿದವರನ್ನು ಮದುವೆಯಾಗಲು ಸಾಧ್ಯವಾಗಿಲ್ಲ' ಎಂದಿದ್ದಾರೆ ನಟ ಡಾರ್ಲಿಂಗ್ ಪ್ರಭಾಸ್. ಅಂದರೆ, ನಟ ಪ್ರಭಾಸ್ ಲವ್..

Bahubali fame Pan India star actor Prabhas reveals the secret behind not getting Married srb
Author
First Published Apr 29, 2024, 1:55 PM IST

ಪ್ಯಾನ್ ಇಂಡಿಯಾ ನಟ ಪ್ರಭಾಸ್ (Darling Prabhas) ಯಾಕೆ ಇನ್ನೂ ಮದುವೆಯಾಗಿಲ್ಲ ಎಂಬುವುದಕ್ಕೆ ಸರಿಯಾದ ಕಾರಣ ದೊರಕಿದೆ. ನಟ ಪ್ರಭಾಸ್ ಸಂದರ್ಶನವೊಂದರಲ್ಲಿ ಮಾತನಾಡುತ್ತ, ತಾವು ಯಾಕೆ ಇನ್ನೂ ಮದುವೆಯಾಗಿಲ್ಲ ಎಂಬುವುದಕ್ಕೆ ಕಾರಣ ಬಹಿರಂಗ ಪಡಿಸಿದ್ದಾರೆ. 'ನೀವು ಯಾಕೆ ಇನ್ನೂ ಮದುವೆಯಾಗಿಲ್ಲ? ನಿಮ್ಮ ರಿಯಲ್ ಜೀವನದ ಪ್ರೀತಿ ಕೂಡ ಕೆಲವು ಸಿನಿಮಾ ಪ್ರೀತಿಯಂತೆ ದಾರಿ ತಪ್ಪಿದೆಯಾ?' ಎಂದು ಕೇಳಲಾದ ಪ್ರಶ್ನೆಗೆ ನಟ ಪ್ರಭಾಸ್ 'ಹೌದು, ನಿಜ ಜೀವನದಲ್ಲಿ ನಾನು ಅಂದುಕೊಂಡ ಪ್ರೀತಿ ನಿಜವಾದುದಲ್ಲ ಎಂದು ಕೆಲವು ಬಾರಿ ನನಗೆ ಅನುಭವವಾಗಿದೆ' 

ನಾನು ಇಂತಹ ಅನುಭವವನ್ನು ಹಲವಾರು ಬಾರಿ ಅನುಭವಿಸಿದ್ದೇನೆ. ಹೀಗಾಗಿ ನಾನು ಇನ್ನೂ ಲವ್ ಮಾಡಿ ಅಥವಾ ಲವ್ ಮಾಡಿದವರನ್ನು ಮದುವೆಯಾಗಲು ಸಾಧ್ಯವಾಗಿಲ್ಲ' ಎಂದಿದ್ದಾರೆ ನಟ ಡಾರ್ಲಿಂಗ್ ಪ್ರಭಾಸ್. ಅಂದರೆ, ನಟ ಪ್ರಭಾಸ್ ಲವ್ ಮಾಡಿದವರು ಅವರನ್ನು ನಿಜವಾಗಿ ಲವ್ ಮಾಡದೇ ಟೈಂಪಾಸ್ ಲವ್‌ ಮಾಡಿದ್ರು ಅಂತ ಅರ್ಥನಾ? ಗೊತ್ತಿಲ್ಲ, ಅದನ್ನು ಡಾರ್ಲಿಂಗ್ ಪ್ರಭಾಸ್ ಅವರೇ ಹೇಳಬೇಕು. ಆದರೆ, ನಟ ಪ್ರಭಾಸ್ ಇನ್ನೂ ಮದುವೆಯಾಗದಿರಲು ಅವರು ಲವ್ ಮಾಡಿದ ಹುಡುಗಿಯರ ಜತೆ ಕಾಲಾನಂತರದಲ್ಲಿ ಲವ್ ಫೇಲ್ಯೂರ್ ಆಗಿದ್ದು ಕಾರಣ ಎನ್ನಬಹುದು. 

ಬೆಂಗಳೂರಲ್ಲಿ ಕಿಟ್ಟಿ ಪಾರ್ಟೀಲಿ ಮಡದಿ ಬ್ಯುಸಿ ಇದ್ರೆ, ನೀರ್ನಳ್ಳಿ ರಾಮಕೃಷ್ಣ ಹಳ್ಳಿಗೆ ಹೋಗಿದ್ಯಾಕೆ?

ನಟ ಪ್ರಭಾಸ್ ಇತ್ತೀಚೆಗೆ ಎಲ್ಲೇ ಹೋಗಲಿ, ಯಾವುದೇ ಮಾಧ್ಯಮದಲ್ಲಿ ಸಂದರ್ಶನ ಕೊಡಲಿ, ಮೊದಲು ಅಥವಾ ಕೊನೆಯಲ್ಲಿ ಅವರ ಮದುವೆ ಬಗ್ಗೆ ಕೇಳದೇ ಇಂಟರ್‌ವ್ಯೂ ಪೂರ್ಣವಾಗುವುದೇ ಇಲ್ಲ. ಪ್ರಭಾಸ್ ತಾಯಿ ಕೂಡ ಯಾವಾಗಲೂ ಮದುವೆ ಆಗುವಂತೆ ಒತ್ತಾಯ ಹೇರುತ್ತಲೇ ಇರುತ್ತಾರೆ ಎಂಬ ಮಾತನ್ನು ಹಲವಾರು ಬಾರಿ ಸ್ವತಃ ನಟ ಪ್ರಭಾಸ್ ಅವರೇ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ, ಪ್ರಭಾಸ್ ಮದುವೆಯಾಗುವ ತನಕ ಈ ಪ್ರಶ್ನೆ-ಉತ್ತರಗಳ ತಾಕಲಾಟ ನಿಲ್ಲುವುದಿಲ್ಲ. ಎಲಿಜೆಬಲ್ ಬ್ಯಾಚುಲರ್ ಪ್ರಭಾಸ್ ಯಾಕೆ ಇನ್ನೂ ಮದುವೆಯಾಗಿಲ್ಲ ಎಂಬುದನ್ನು ಹಲವರು ಸ್ವತಃ ತಮ್ಮ ಜೀವನದ ಬೇಸಿಕ್ ಅಗತ್ಯಕ್ಕಿಂತ ಹೆಚ್ಚು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ ಎಂಬುದು ಅಚ್ಚರಿಯಾದರೂ ಸತ್ಯ. 

ಮಹಿಳೆಯರು ಯಾವುದೋ ಗ್ರಹದ ಜೀವಿಗಳು ಎಂದುಕೊಂಡಿದ್ದೆ; ವಿಜಯ್ ದೇವರಕೊಂಡ ಶಾಕಿಂಗ್ ಹೇಳಿಕೆ!

ಡಾರ್ಲಿಂಗ್ ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ತೆಲುಗಿನ 'ವರ್ಷಂ' ಸಿನಿಮಾ ಮೂಲಕ ನಾಯಕನಟರಾಗಿ ಸಿನಿರಂಗಕ್ಕೆ ಅಡಿಯಿಟ್ಟ ಪ್ರಭಾಸ್, ಬಹಳಷ್ಟು  ಚಿತ್ರಗಳಲ್ಲಿ ನಟಿಸುವ ಮೂಲಕ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಪ್ರಭಾಸ್ ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಲು ಕಾರಣ ನಿರ್ದೇಶಕರಾದ ಎಸ್‌ಎಸ್‌ ರಾಜಮೌಳಿಯವರು ಎಂದು ಹೇಳಿದರೆ ಅದರಲ್ಲಿ ಸ್ವಲ್ಪವೂ ಸುಳ್ಳಿಲ್ಲ. ಪ್ರಭಾಸ್ ಅವರನ್ನು ಹೀರೋ ಮಾಡಿಕೊಂಡು ರಾಜಮೌಳಿಯವರು 'ಬಾಹುಬಲಿ' ಸಿನಿಮಾ ಮಾಡಿದ್ದಾರೆ. ಅದು ಸೂಪರ್ ಹಿಟ್ ಆಗಿ ದಾಖಲೆ ಕಲೆಕ್ಷನ್ ಮಾಡಿದ್ದು ಗೊತ್ತೇ ಇದೆ. 

ರಜನಿಕಾಂತ್ ಸೇಡು ತೀರಿಸಿಕೊಂಡಿದ್ದು ಕೂಡ ಸಖತ್ ಸ್ಟೈಲಿಶ್ ಆಗಿಯೇ ಅಂದ್ರೆ ನಂಬ್ಲೇಬೇಕು!

ಯಾವಾಗ ಬಾಹುಬಲಿ ಸಿನಿಮಾ ಅಷ್ಟೊಂದು ಸಕ್ಸಸ್ ಕಂಡಿತೋ, ಆಗಲೇ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದರು. ಆದರೆ ಆ ಬಳಿಕ ಅವರ ಮೂರು ಸಿನಿಮಾಗಳು ಸತತ ಸೋಲು ಕಾಣುವ ಮೂಲಕ ಕೆಳಗೆ ಕುಸಿದಿದ್ದರು. ಇತ್ತೀಚೆಗೆ ಬಿಡುಗಡೆಯಾದ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದ ಮೂಲಕ ನಟ ಪ್ರಭಾಸ್ ಮತ್ತೆ ಸ್ಟಾರ್ ಪಟ್ಟವನ್ನು ಉಳಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಪ್ರಭಾಸ್ ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ವೃತ್ತಿಜೀವನದಲ್ಲಿ ಹಾವು ಏಣಿ ಆಟವನ್ನು ನೋಡಿದ್ದಾರೆ. ಸದ್ಯ ಇನ್ನೂ ಮದುವೆಯಾಗದೇ ಉಳಿದಿದ್ದಾರೆ ಎಂಬುದು ಬಿಸಿಬಿಸಿ ಚರ್ಚೆಯ ಸಂಗತಿ. 

ಡಾ. ರಾಜ್‌ಕುಮಾರ್ ಮಗಳು ಪೂರ್ಣಿಮಾ ಅನುಕರಿಸಿ 'ಬಜಾರಿ' ಪಾತ್ರ ಮಾಡಿದ್ರು ಮಂಜುಳಾ!

Latest Videos
Follow Us:
Download App:
  • android
  • ios