99 ರೂಪಾಯಿಗೆ ಪ್ರಣೀತಾ-ರಿಷಿ ರೋಮ್ಯಾನ್ಸ್ ನೋಡಬಹುದು; ಶುಭ್ರ ಅಯ್ಯಪ್ಪಗೆ ಅಲ್ಲೇನು ಕೆಲಸ?
ರಾಮನ ಅವತಾರ ಸಿನಿಮಾದಲ್ಲಿ ರಿಷಿಗೆ ಜೋಡಿಯಾಗಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ಸಾಥ್ ಕೊಟ್ಟಿದ್ದಾರೆ. ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕಾಸ್ ಪಂಪಾಪತಿ ಸಾರಥ್ಯದಲ್ಲಿ ಚಿತ್ರ ಮೂಡಿ ಬಂದಿದೆ.
ಸ್ಯಾಂಡಲ್‌ವುಡ್ ನಟ ರಿಷಿ (Rishi) ಪ್ರತಿಭಾನ್ವಿತ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. 'ಕವಲುದಾರಿ'ಯಂತಹ ಗಂಭೀರ ಸಿನಿಮಾಗೂ ಸೈ, 'ನೋಡಿ ಸ್ವಾಮಿ ಇವನು ಇರೋದು ಹೀಗೆ', 'ಆಪರೇಷನ್ ಅಲಮೇಲಮ್ಮ' ದಂತಹ ಕಾಮಿಡಿ ಚಿತ್ರಗಳಿಗೂ ಜೈ ಎನಿಸಿಕೊಂಡವರು. ಇದೀಗ 'ರಾಮನ ಅವತಾರ' ಮೂಲಕ ಪ್ರೇಕ್ಷಕರ ಎದುರು ಬರ್ತಿದ್ದಾರೆ. ಈಗಾಗ್ಲೇ ಈ ಚಿತ್ರದ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗ್ತಿದೆ. ವಿಭಿನ್ನ ಪ್ರಮೋಷನ್ ವಿಡಿಯೋ ಮೂಲಕ ರಾಮನ ಅವತಾರ ಬಳಗವೀಗ ಪ್ರೇಕ್ಷಕರನ್ನು ಸೆಳೆಯುತ್ತಿದೆ.
ಈಗ ಚಿತ್ರತಂಡದ ಕಡೆಯಿಂದ ಮೆಗಾ ಆಫರ್ ವೊಂದು ಸಿಕ್ಕಿದೆ. ರಾಮನ ಅವತಾರ ಸಿನಿಮಾದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. ಸಿಂಗಲ್ ಸ್ಕ್ರೀನ್ ಜೊತೆಗೆ ಮಲ್ಟಿಫ್ಲೆಕ್ಸ್ ಗಳಲ್ಲಿ ಟಿಕೆಟ್ ದರ ತಗ್ಗಿಸಲಾಗಿದ್ದು, ಕೇವಲ 99 ರೂಪಾಯಿ ರಾಮನ ಅವತಾರ ಸಿನಿಮಾವನ್ನು ಸಿನಿಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.
ಮೇ 9ಕ್ಕೆ ಪ್ರೀಮಿಯರ್, ಮೇ 10ಕ್ಕೆ ಚಿತ್ರ ರಿಲೀಸ್: ರಾಮನ ಅವತಾರ ಸಿನಿಮಾ ಮೇ 10ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೆ ಒಂದು ದಿನ ಮೊದಲು, ಅಂದ್ರೆ ಮೇ 9ರಂದು ಪೇಯ್ಡ್ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ. ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್ ದರ ಕೂಡ 99ರೂಪಾಯಿಗೆ ನಿಗದಿ ಮಾಡಲಾಗಿದೆ. ಕೇವಲ ಈ ಒಂದು ದಿನ ಮಾತ್ರವಲ್ಲ. ಚಿತ್ರ ಬಿಡುಗಡೆ ದಿನ ಅಂದ್ರೆ ಮೇ 10ಕ್ಕೂ ಕೂಡ ಟಿಕೆಟ್ ಬೆಲೆ 99ರೂಪಾಯಿ ಇರಲಿದೆ. ಮೇ 9 ಹಾಗೂ ಮೇ 10ರಂದು ರಾಮನ ಅವತಾರ ಸಿನಿಮಾದ ಟಿಕೆಟ್ ಬೆಲೆ 99ರೂಪಾಯಿಗೆ ದೊರೆಯಲಿದೆ.
ರಾಮನ ಅವತಾರ ಸಿನಿಮಾದಲ್ಲಿ ರಿಷಿಗೆ ಜೋಡಿಯಾಗಿ ಪ್ರಣೀತಾ ಸುಭಾಷ್ (Pranitha Subhash) ಹಾಗೂ ಶುಭ್ರ ಅಯ್ಯಪ್ಪ (Shubra Aiyappa) ಸಾಥ್ ಕೊಟ್ಟಿದ್ದಾರೆ. ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕಾಸ್ ಪಂಪಾಪತಿ ಸಾರಥ್ಯದಲ್ಲಿ ಚಿತ್ರ ಮೂಡಿ ಬಂದಿದ್ದು, ನಿರ್ದೇಶಕರಾಗಿ ಇವರಿಗೆ ಇದು ಮೊದಲ ಸಾಹಸ. ರಾಮನ ಅವತಾರ ಸಿನಿಮಾದ ಮೂಲಕ ವಿಕಾಸ್, ಮಾರ್ಡನ್ ರಾಮನ ಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ. ಟ್ರೇಲರ್ ನೋಡ್ತಿದ್ರೆ ರಾಮಾಯಣ ನೆನಪಿಸುವ ಒಂದಷ್ಟು ದೃಶ್ಯಗಳು ಕಾಣುತ್ತವೆ. ರಾಮ ಹೆಗೆ ಜೆಂಟಲ್ ಮ್ಯಾನ್ ಆಗ್ತಾನೆ? ರಾವಣನ ರೀತಿ ಸಮಸ್ಯೆಗಳನ್ನು ಹೇಗೆ ಎದುರಿಸ್ತಾನೆ ಅನ್ನೋದನ್ನು ಕಟ್ಟಿಕೊಡಲಾಗದೆ.
ಸ್ಟಾರ್ ಫ್ಯಾಬ್ ಪ್ರೊಡಕ್ಷನ್ನಡಿ 'ಆಪರೇಷನ್ ಅಲಮೇಲಮ್ಮ' ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ಇನ್ನೇನು ಈ ಶುಕ್ರವಾರ ಸಿನಿಮಾ ರಿಲೀಸ್ ಆಗಲಿದೆ.