‘ನೆನಪಿನ ಹುಡುಗಿಯೇ’ಹಾಡನ್ನು ‘ಹೀರೋ’ ಚಿತ್ರತಂಡ ರಿಲೀಸ್‌ ಮಾಡಿದೆ. ‘ನಿನಪಿನ ಹುಡುಗಿಯೇ ಕೊನೆಯಲಿ ನುಡಿಯುವೆ ಕೇಳಿಬಿಡು ಸರಿಯಾಗಿ’ ಎಂಬ ರೊಮ್ಯಾಂಟಿಕ್‌ ಹಾಡಿನಲ್ಲಿ ರಿಶಬ್‌ ಹಾಗೂ ಗಾನವಿ ಜೊತೆಯಾಗಿದ್ದಾರೆ.

ಯೋಗರಾಜ್‌ ಭಟ್‌ ಸಾಹಿತ್ಯ, ಅಜನೀಶ್‌ ಲೋಕನಾಥ್‌ ಸಂಗೀತ ಈ ಹಾಡಿಗಿದೆ. ವಿಜಯಪ್ರಕಾಶ್‌ ಈ ರೊಮ್ಯಾಂಟಿಕ್ ಹಾರ್ಟ್ ಟಚಿಂಗ್ ಹಾಡನ್ನು ಹಾಡಿದ್ದಾರೆ.

ಕಾದಂಬರಿಗಾರ್ತಿಯಾಗಿ ಪ್ರಿಯಾಂಕಾ ಉಪೇಂದ್ರ: 1980ರಲ್ಲಿ ಹೊಸ ಲುಕ್

ಯೂಟ್ಯೂಬ್‌ನಲ್ಲಿ ಲಕ್ಷಾಂತರ ಜನ ಈ ಮೆಲೊಡಿಸ್‌ ಹಾಡಿಗೆ ಕಿವಿಯಾಗಿದ್ದಾರೆ. ಎಂ ಭರತ್‌ರಾಜ್‌ ನಿರ್ದೇಶನದ ಈ ಚಿತ್ರವನ್ನು ರಿಶಬ್‌ ನಿರ್ಮಿಸಿದ್ದಾರೆ. ಮಾರ್ಚ್ 12ಕ್ಕೆ ಸಿನಿಮಾ ರಿಲೀಸ್‌ ಆಗಲಿದೆ.

ಹಾಡಿಗೆ 200 ಸಾವಿರ ವ್ಯೂಸ್ ಬಂದಿದೆ. ಮೆಲೊಡಿ ಸಾಂಗ್‌ನಲ್ಲಿ ರಿಷಭ್ ಬೈಕ್ ರೈಡಿಂಗ್ ಫೋಟೋಗಳು, ರೊಮ್ಯಾಂಟಿಕ್ ಸೀನ್‌ಗಳು ಹಾದು ಹೋಗಿ ಸುಂದರವಾಗಿ ಮೂಡಿ ಬಂದಿದೆ.