ಗೋಡ್ಸೆ ಜೀವನಾಧಾರಿತ ಸಿನಿಮಾಗೆ ರಿಷಭ್ ಶೆಟ್ಟಿಯೇ ಸೂಕ್ತ ವ್ಯಕ್ತಿ!

ನಾಥೂರಾಮ್ ಗೋಡ್ಸೆ ಪಾತ್ರದಲ್ಲಿ ರಿಷಭ್ ಶೆಟ್ಟಿ ನಟಿಸುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಗೋಡ್ಸೆ ಜೀವನಾಧಾರಿತ ಸಿನಿಮಾ ಮಾಡಿದರೆ ಸತ್ಯಾಸತ್ಯತೆ ಹೊರಬೀಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿಂದೆಯೇ ಚಿತ್ರೀಕರಣ ಆರಂಭವಾಗಿತ್ತು ಎಂಬ ಮಾಹಿತಿಯೂ ಹೊರಬಿದ್ದಿದೆ.

Rishabh Shetty is right person to play role of Godse in biopic on Nathuram Godse sat

ಬೆಂಗಳೂರು (ಡಿ.12): ಮಹಾತ್ಮ ಗಾಂಧೀಜಿ ಅವರನ್ನು 1948ರ ಜನವರಿ 30ರಂದು ನಾಥೂರಾಮ್ ಗೋಡ್ಸೆ ಗುಂಡಿಕ್ಕಿ ಹತ್ಯೆಗೈದಿದ್ದನು. ಈ ಕುರಿತು ಸಿನಿಮಾ ಮಾಡುವುದಾದಲ್ಲಿ ಗೋಡ್ಸೆ ಪಾತ್ರಕ್ಕೆ ನಮ್ಮ ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಸ್ಟಾರ್ ರಿಷಭ್ ಶೆಟ್ಟಿ ಅವರೇ ಸೂಕ್ತ ವ್ಯಕ್ತಿ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಟ ಮಾಡಿದ ಗಣ್ಯರ ಸಾಲಿನಲ್ಲಿ ಗಾಂಧೀಜಿ ಅವರು ಮೊದಲಿಗರಾಗಿ ನಿಲ್ಲುತ್ತಾರೆ. ಆದರೆ, ಇಂತಹ ಅವರನ್ನೇ ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ನಾಥೂರಾಮ್ ಗೋಡ್ಸೆ  1948ರ ಜನವರಿ 30ರಂದು ಗಾಂಧಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದನು. ಈ ಕುರಿತು ಸಿನಿಮಾ ಮಾಡುವುದಾದಲ್ಲಿ ಗೋಡ್ಸೆ ಪಾತ್ರಕ್ಕೆ ನಮ್ಮ ಕನ್ನಡ ಚಿತ್ರರಂಗದ ಪ್ಯಾನ್ ಇಂಡಿಯಾ ಸ್ಟಾರ್ ರಿಷಭ್ ಶೆಟ್ಟಿ ಅವರೇ ಸೂಕ್ತ ವ್ಯಕ್ತಿ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇದೀಗ ಪೋಸ್ಟ್ ವೈರಲ್ ಆಗುತ್ತಿದ್ದು, ಗೋಡ್ಸೆ ಮುಖಭಾವ ಹಾಗೂ ರಿಷಭ್ ಶೆಟ್ಟಿ ಅವರ ಮೇಕಪ್ ಫೋಟೋಗಳನ್ನು ಹೋಲಿಕೆ ಮಾಡಿ ತೋರಿಸಲಾಗಿದೆ. ಇದರ ಹಿಂದೆ ಹಿಂದುತ್ವ ಎಂಬ ಅಜೆಂಡಾ ಕೂಡ ಇರಬಹುದು..

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸನಾತನ (@sanatan_kannada) ಎಂಬ ಖಾತೆಯಿಂದ ಈ ಕುರಿತು ಪೋಸ್ಟ್ ಹಂಚಿಕೊಳ್ಳಲಾಗಿದೆ. 'ನಾಥೂರಾಮ್ ಗೋಡ್ಸೆ ಯವರ ಸಿನಿಮಾ ಮಾಡಲು ಸೂಕ್ತ ವ್ಯಕ್ತಿ ರಿಷಭ್ ಶೆಟ್ಟಿ (@shetty_rishab) ಅವರು ಮಾತ್ರ. ನೀವು ಘೋಷಣೆ ಮಾಡಿದರೆ ಅದರ ಪ್ರಚಾರ ವಿರೋಧಿಗಳೇ ಮಾಡುತ್ತಾರೆ. ಗೋಡ್ಸೆಯವರ ಜೀವನಾಧಾರಿತ ಸಿನಿಮಾ ಮಾಡಿದರೆ ದೇಶದ ಜನತೆಗೆ ಗೊತ್ತಿರುವ ಅರ್ಧ ಸತ್ಯ, ಸುಳ್ಳು ಆರೋಪ ಎಲ್ಲವೂ ಮನದಟ್ಟಾಗುತ್ತದೆ' ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಎಸ್.ಎಂ.ಕೃಷ್ಣ ತಾತನ ವಿಶೇಷ ಅಭಿರುಚಿಗಳನ್ನು ಪರಿಚಯಿಸಿದ ಡಿಕೆಶಿ ಪುತ್ರಿ ಐಶ್ವರ್ಯಾ!

ಮತ್ತೊಬ್ಬರು 'ಈ ಸಿನಿಮಾ 2017-18 ರಲ್ಲಿ ಸೆಟ್ಟೇರಿ ನಿಂತು ಹೋಗಿದೆ. ಸ್ವಲ್ಪ ಭಾಗ ಚಿತ್ರೀಕರಣ ಸಹ ಆಗಿತ್ತು' ಎಂದು ಕಾಮೆಂಟ್ ಮಾಡಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಪೋಸ್ಟರ್ ಒಂದನ್ನೂ ಕೂಡ ಹಂಚಿಕೊಂಡಿದ್ದಾರೆ. ಈ ಪೋಸ್ಟರ್‌ನಲ್ಲಿ ಗಾಂಧೀಜಿ 150ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಶ್ರೀ ದೇವಿ ಎಂಟರ್‌ಟೇನರ್ಸ್ ನಿರ್ಮಾಣ ಸಂಸ್ಥೆಯಿಂದ ಮಹಾತ್ಮನ ಸವಿ ನೆನಪುಗಳೊಂದಿಗೆ ಎಂದು ಬರೆದುಕೊಂಡು 'ನಾಥೂರಾಮ್' ಎಂಬ ಟೈಟಲ್ ಕೂಡ ರಿವೀಲ್ ಮಾಡಲಾಗಿದೆ. ಇನ್ನು ಈ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಅವರೇ ನಾಯಕ ಎಂದು ಕೂಡ ಹೆಸರು ರಿವೀಲ್ ಮಾಡಲಾಗಿದೆ. ವಿನು ಬಾಲಂಜಾ ಅವರ ಕಥೆ ಮತ್ತು ನಿರ್ದೇಶನವಿದ್ದು, ಹೆಚ್.ಕೆ. ಪ್ರಕಾಶ್ ಅವರು ನಿರ್ಮಾಪಕರಾಗಿದ್ದಾರೆ ಎಂದು ತಿಳಿಸಲಾಗಿದೆ. ಆದರೆ, ಇದು ಎಷ್ಟು ಸತ್ಯ ಎಂಬುದು ಮಾತ್ರ ಚಿತ್ರತಂಡದ ಸದಸ್ಯರೇ ಹೇಳಿಕೊಳ್ಳಬೇಕು.

ಈಗಾಗಲೇ ಭಾರತದಲ್ಲಿ ಹಿಂದಿ ಮತ್ತಿ ಇತರೆ ಭಾಷೆಗಳ ಅವತರಣಿಕೆಗಳಲ್ಲಿ ನಾಥೂರಾಮ್ ಗೋಡ್ಸೆ ಸಂಬಂಧಿತ ಸಿನಿಮಾಗಳು ಬಂದಿವೆ. ಇನ್ನು ಗೋಡ್ಸೆ ಕುರಿತಂತೆ ಕೆಲವು ಡಾಕ್ಯೂಮೆಂಟರಿಗಳು ಕೂಡ ಬಿಡುಗಡೆ ಆಗಿವೆ. ಈ ಸಿನಿಮಾ ಮತ್ತು ಡಾಕ್ಯೂಮೆಂಟರಿಗಳಲ್ಲಿ ಗೋಡ್ಸೆ ಒಬ್ಬ ಮಹಾನ್ ದೇಶಭಕ್ತ, ಹಿಂದೂವಾದಿ ಎಂಬುದನ್ನು ತೋರಿಸಲಾಗಿದೆ. ಗಾಂಧೀಜಿಯಿಂದ ಅಖಂಡ ದೇಶ ಇಬ್ಭಾಗ ಆಗಿದೆ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ದೇಶ ಮಾಡಿದರೂ, ಪುನಃ ದೇಶದಲ್ಲಿ ಮುಸ್ಲಿಮರು ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಕೋಪಗೊಂಡು ಗಾಂಧೀಜಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸತ್ಯಾಸತ್ಯತೆ ಪರಿಚಯಿಸಲು ಗೋಡ್ಸೆ ಜೀವನಾಧಾರಿತ ಸಿನಿಮಾ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.

ಇದನ್ನೂ ಓದಿ: ದರ್ಶನ್ ಸರ್ಜರಿ ವಿಳಂಬ ಮಾಡಿದ್ದರ ಹಿಂದೆ ಏನಾದ್ರೂ ಮಾಸ್ಟರ್​ಪ್ಲ್ಯಾನ್ ಇದ್ಯಾ?

Latest Videos
Follow Us:
Download App:
  • android
  • ios