Asianet Suvarna News Asianet Suvarna News

ಸತ್ರೆ ಹೆಣ ಹೊರೋಕೆ ನಾಲ್ಕು ಜನ ಬರ್ತಾರ್ರೀ, ನಮ್ ಸಿನಿಮಾ ನೋಡಾಕ ನಾಲ್ಕು ಜನ ಬರಲ್ವೇನ್ರೀ: ಶರಣಮ್ಮ ಚೆಟ್ಟಿ

ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ ಬಳಿಕ ಚಿತ್ರದ ನಿರ್ಮಾಪಕ ರಿಷಬ್‌, ‘ಇಂಥಾ ಸಿನಿಮಾ ಜನರಿಗೆ ತಲುಪಿ ಜನರು ಒಪ್ಪಿಕೊಂಡರೆ ಇಂಥಾ ಇನ್ನೂ ಅನೇಕ ಸಿನಿಮಾಗಳು ಬರಲು ದಾರಿಯಾಗುತ್ತದೆ ಎಂದರು.
 

Rishab Shetty To Release Shivamma Kannada Movie On 14th June gvd
Author
First Published Jun 7, 2024, 11:12 AM IST

ಸಣ್ಣ ಸಿನಿಮಾಗಳ ಬಿಡುಗಡೆ ಬಹಳ ಕಷ್ಟ ಎಂಬ ಮಾತು ಬರುತ್ತಿರುವ ಹೊತ್ತಿನಲ್ಲಿ ರಿಷಬ್‌ ಶೆಟ್ಟಿ ಬಜೆಟ್‌ನಲ್ಲಿ ಸಣ್ಣದಾದ, ಆದರೆ ಕಂಟೆಂಟ್‌ನಲ್ಲಿ ದೊಡ್ಡದಾದ ‘ಶಿವಮ್ಮ’ ಚಿತ್ರದ ಬಿಡುಗಡೆಗೆ ಮುಂದಾಗಿದ್ದಾರೆ. ಜೈಶಂಕರ್ ಆರ್ಯರ್ ನಿರ್ದೇಶನದ ‘ಶಿವಮ್ಮ’ ಚಿತ್ರವನ್ನು ಜೂನ್‌ 14ರಂದು ಬಿಡುಗಡೆ ಮಾಡುವ ಮೂಲಕ ಸಣ್ಣ ಸಿನಿಮಾಗಳಿಗೆ ಹೊಸ ದಾರಿಯೊಂದನ್ನು ತೆರೆಯುವ ಆಲೋಚನೆ ರಿಷಬ್‌ ಅವರಲ್ಲಿದೆ.

ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿದ ಬಳಿಕ ಚಿತ್ರದ ನಿರ್ಮಾಪಕ ರಿಷಬ್‌, ‘ಇಂಥಾ ಸಿನಿಮಾ ಜನರಿಗೆ ತಲುಪಿ ಜನರು ಒಪ್ಪಿಕೊಂಡರೆ ಇಂಥಾ ಇನ್ನೂ ಅನೇಕ ಸಿನಿಮಾಗಳು ಬರಲು ದಾರಿಯಾಗುತ್ತದೆ. ಶಿವಮ್ಮ ಚಿತ್ರವನ್ನು ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಜನ ಬಹಳ ಮೆಚ್ಚಿಕೊಂಡಿದ್ದಾರೆ. ಎಲ್ಲರಿಗೂ ಇಷ್ಟ ಆಗತ್ತೆ ಅನ್ನೋ ನಂಬಿಕೆಯೂ ಇದೆ’ ಎಂದರು.ನಿರ್ದೇಶಕ ಜೈ ಶಂಕರ್, ‘ನನ್ನ ತಂದೆಯ ಊರಾದ ಯರೇಹಂಚಿನಾಳ ತೋರಿಸಬೇಕು ಅನ್ನೋ ಆಸೆಯಾಗಿ ಈ ಸಿನಿಮಾ ಶುರು ಮಾಡಿದೆ. ಇದು ಮಲ್ಟಿ ಲೆವೆಲ್ ಮಾರ್ಕೆಟಿಂಗ್‌ ಜಾಲಕ್ಕೆ ಸಿಕ್ಕ ಶಿವಮ್ಮನ ಕತೆ. ಫೆಸ್ಟಿವಲ್‌ಗಳಲ್ಲಿ ಮೆಚ್ಚುಗೆ ಸಿಕ್ಕಿದೆ. ಕನ್ನಡದ ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂಬ ನಂಬಿಕೆ ಇದೆ’ ಎಂದರು.

ಶಿವಮ್ಮ ಪಾತ್ರದಲ್ಲಿ ನಟಿಸಿರುವ ಶರಣಮ್ಮ ಚೆಟ್ಟಿ ತುಂಬಾ ಮುಗ್ಧವಾಗಿ, ‘ಕಷ್ಟ ಪಟ್ಟು ಸಿನಿಮಾ ಮಾಡಿದ್ದೀವಿ. ನಾನು ನಟಿಸೋ ಥರ ಮಾಡಿದ್ದಾರೆ. ಎಲ್ಲರೂ ಬಂಧು ಬಳಗದ ಜೊತೆ ಸಿನಿಮಾ ನೋಡಿ’ ಎಂದರು. ಚಿತ್ರದಲ್ಲಿ ನಟಿಸಿರುವ ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ ಹಾಗೂ ಶ್ರುತಿ ಕೊಂಡೇನಹಳ್ಳಿ ಇದ್ದರು.

ನನ್ನ ಜಾತಕದಲ್ಲಿ ಪ್ರವಾಹಕ್ಕೆ ವಿರುದ್ಧವಾಗಿ ಈಜಿ ಗೆಲುವು ದಕ್ಕಿಸಿಕೊಳ್ಳಬೇಕು ಅಂತ ಇದೆ: ರಿಷಬ್ ಶೆಟ್ಟಿ

ಸತ್ರೆ ಹೆಣ ಹೊರೋಕೆ ನಾಲ್ಕು ಜನ ಬರ್ತಾರ್ರೀ. ಇನ್ನು ನಮ್ಮ ಸಿನಿಮಾ ನೋಡಾಕ ನಾಲ್ಕು ಜನ ಬರಲ್ವೇನ್ರೀ.. 
-ಶರಣಮ್ಮ ಚೆಟ್ಟಿ

Latest Videos
Follow Us:
Download App:
  • android
  • ios