ನನ್ನ ಜಾತಕದಲ್ಲಿ ಪ್ರವಾಹಕ್ಕೆ ವಿರುದ್ಧವಾಗಿ ಈಜಿ ಗೆಲುವು ದಕ್ಕಿಸಿಕೊಳ್ಳಬೇಕು ಅಂತ ಇದೆ: ರಿಷಬ್ ಶೆಟ್ಟಿ

ಕಾಂತಾರ ಅಧ್ಯಾಯ 1ರಲ್ಲಿ ಹಲವು ಆ್ಯಕ್ಷನ್‌ಗಳಿವೆ. ಈಗಾಗಲೇ ಒಂದು ಫಾರೆಸ್ಟ್‌ ಆ್ಯಕ್ಷನ್‌ ಸೀಕ್ವೆನ್ಸ್‌ ತೆಗೆದಿದ್ದೇವೆ. ನೋಡಿದವರು ಚೆನ್ನಾಗಿ ಬಂದಿದೆ ಅನ್ನುತ್ತಿದ್ದಾರೆ. ನಾನು ಕಳರಿ ಅಭ್ಯಾಸ ಮಾಡುತ್ತೇನೆ.

Actor Rishab Shetty Talks Over Kantara Chapter 1 gvd

1. ಎಲ್ಲರಿಗೂ ಕಾಂತಾರ 1 ಸಿನಿಮಾ ಬಗ್ಗೆ ಕುತೂಹಲ ಇದೆ. ಆ ಕುರಿತು ನಾನು ಸದ್ಯ ಹೆಚ್ಚೇನೂ ಬಿಟ್ಟು ಕೊಡಲಾರೆ. ಸಿನಿಮಾ ದೊಡ್ಡದು. ಪ್ರಮೋಷನ್‌ ಕೂಡ ದೊಡ್ಡದಾಗಿರಬೇಕು. ಅದಕ್ಕೆ ತಕ್ಕಂತೆ ನಿರ್ಮಾಣ ಸಂಸ್ಥೆಯವರು ಪ್ಲಾನ್‌ ಮಾಡಿರುತ್ತಾರೆ. ಅವರ ಜೊತೆ ನಾನು ನಿಲ್ಲಬೇಕು. ಯಾಕೆಂದರೆ ಅವರು ನನ್ನನ್ನು ತುಂಬಾ ದೊಡ್ಡ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.

2. ಓಟಿಟಿಯವರು ಕನ್ನಡ ಸಿನಿಮಾ ತೆಗೆದುಕೊಳ್ಳುವುದಿಲ್ಲ. ಅವರ ಸ್ಥಾನದಲ್ಲಿ ನಿಂತು ನೋಡಿದರೆ ಅದರಲ್ಲಿ ಅ‍ವರ ತಪ್ಪು ಕಾಣಿಸುವುದಿಲ್ಲ. ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಒಳ್ಳೆಯ ಕಂಟೆಂಟ್ ಬೇಕು. ನಾವು ಕೊಡುತ್ತಿದ್ದೇವಾ.. ಒಳ್ಳೆಯ ಕಂಟೆಂಟ್ ಕೊಡುವುದಕ್ಕೆ ಬೇಕಾದ ತಯಾರಿಯನ್ನು ಮಾಡುತ್ತಿದ್ದೇವಾ ಎಂಬುದರ ಕುರಿತು ಆಲೋಚಿಸಬೇಕು. ಓಟಿಟಿಗಳ ಬಳಿ ನನ್ನ ಹೋರಾಟ ನಡೆಯುತ್ತಲೇ ಇದೆ. ಈ ಮಧ್ಯೆ ಶಿವಮ್ಮ ಸಿನಿಮಾ ರಿಲೀಸ್ ಮಾಡುತ್ತಿದ್ದೇನೆ.

3. ಕಾಂತಾರ 1 ಚಿತ್ರ 125 ಕೋಟಿಗೆ ಮಾರಾಟವಾಗಿದೆ ಎಂಬ ಸುದ್ದಿಗಳು ಬಂದಿವೆ. ಆ ಸಂಖ್ಯೆಯ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆ ಅಂಕಿಯ ಅಕ್ಕಪಕ್ಕ ಇರುವ ಒಂದು ದೊಡ್ಡ ಮೊತ್ತಕ್ಕೆ ಸಿನಿಮಾ ಮಾರಾಟ ಆಗಿದೆ.

4. ನನ್ನ ಜಾತಕದಲ್ಲಿ ಪ್ರವಾಹಕ್ಕೆ ವಿರುದ್ಧವಾಗಿ ಈಜಿ ಗೆಲುವು ದಕ್ಕಿಸಿಕೊಳ್ಳಬೇಕು ಅಂತ ಇದೆ. ಹಾಗಾಗಿ ನನ್ನದು ಹೋರಾಟದ ಬದುಕು. ಯಾವುದೂ ಸುಲಭವಾಗಿ ಸಿಗುವುದಿಲ್ಲ. ಸುಲಭವಾಗಿ ಸಿಕ್ಕಿದ್ದು ಎಂದರೆ ನನ್ನ ಪತ್ನಿ ಪ್ರಗತಿ.

5. ನನಗೆ ಗೊತ್ತಿದ್ದಂತೆ ಯಶ್‌ ಕೂಡ ಒಂದು ದಿನವೂ ಸುಮ್ಮನೆ ಕೂತಿಲ್ಲ. ನಾನು ನೂರಾರು ಮಂದಿಯ ತಂಡ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೇನೆ. ಇನ್ನೂ ನೂರು ದಿನ ಬೇಕು. ಗಾತ್ರ ದೊಡ್ಡದಿದ್ದಾಗ ಸಮಯವೂ ಜಾಸ್ತಿ ಬೇಕು.

5. ಎಲ್ಲಾ ಕಡೆ ಎಂಟರ್‌ಟೇನ್‌ಮೆಂಟ್ ಇದೆ. ಎಲ್ಲರೂ ರೀಲ್‌ ಮಾಡುತ್ತಿದ್ದಾರೆ. ಸಿನಿಮಾ ನೋಡೋರಿಗಿಂತ ಸಿನಿಮಾ ಮಾಡೋರ ಸಂಖ್ಯೆ ಜಾಸ್ತಿಯಾಗಿದೆ. ಇಂಥಾ ಹೊತ್ತಲ್ಲಿ ನಾವು ಸಿನಿಮಾವನ್ನು ಎಲ್ಲಾ ರೀತಿಯಲ್ಲೂ ಒಳ್ಳೆಯ ಪ್ಯಾಕೇಜ್‌ ಮಾಡಿ ಕೊಡಬೇಕು. ಒಂದೊಳ್ಳೆ ಅನುಭವ ಕಟ್ಟಿಕೊಡಬೇಕು.

6. ಕಾಂತಾರ ನಂತರ ಸಣ್ಣ ಬಜೆಟ್‌ನ ಹಲವು ಸಿನಿಮಾಗಳಲ್ಲಿ ನಟಿಸುವ ಆಲೋಚನೆ ಇದೆ. ನನ್ನ ಒಂದು ಸಿನಿಮಾವನ್ನು ಇನ್ನೊಂದು ಸಿನಿಮಾ ಮೀರಿಸಬೇಕು ಎಂಬ ಆಲೋಚನೆ ನನ್ನಲ್ಲಿಲ್ಲ.

7. ನಾನು ಕತೆ, ಚಿತ್ರಕತೆಯನ್ನು ವಿಜಯ್‌ ಕಿರಗಂದೂರು ಅವರಲ್ಲಿ ಚರ್ಚೆ ಮಾಡುತ್ತೇನೆ. ಕತೆ ವಿಚಾರದಲ್ಲಿ ಬಹಳ ಒಳ್ಳೆಯ ಜಡ್ಜ್ ಅವರು. ಕತೆ ಕೇಳಿ ಏನಾದರೂ ಹೇಳಬಹುದಾ ಎಂದು ಕೇಳುತ್ತಾರೆ. ಒಪ್ಪಿದರೆ ಹೇಳುತ್ತಾರೆ. ಹಾಗೆ ಅವರು ಹೇಳಿದ ಮಹತ್ವದ ಪಾಯಿಂಟ್‌ಗಳನ್ನು ನಾನು ಒಪ್ಪಿಕೊಂಡಿದ್ದೇನೆ.

8. ಕಾಂತಾರ ಅಧ್ಯಾಯ 1ರಲ್ಲಿ ಹಲವು ಆ್ಯಕ್ಷನ್‌ಗಳಿವೆ. ಈಗಾಗಲೇ ಒಂದು ಫಾರೆಸ್ಟ್‌ ಆ್ಯಕ್ಷನ್‌ ಸೀಕ್ವೆನ್ಸ್‌ ತೆಗೆದಿದ್ದೇವೆ. ನೋಡಿದವರು ಚೆನ್ನಾಗಿ ಬಂದಿದೆ ಅನ್ನುತ್ತಿದ್ದಾರೆ. ನಾನು ಕಳರಿ ಅಭ್ಯಾಸ ಮಾಡುತ್ತೇನೆ. 10 ಕೆಜಿ ತೂಕ ಏರಿಸಿ, 8 ಕೆಜಿ ತೂಕ ಇಳಿಸಿದ್ದೇನೆ.

9 . ಕೋಕೋಮೆಲನ್‌ ಥರದ ಮಕ್ಕಳ ವಿಡಿಯೋಗಳನ್ನು ಬ್ಯಾನ್‌ ಮಾಡಬೇಕು. ಅದರಿಂದಲೇ ಮಕ್ಕಳ ಸ್ಕ್ರೀನ್ ಅಟೆನ್ಷನ್‌ ಟೈಮ್‌ ಕಡಿಮೆಯಾಗುತ್ತಿದೆ. ಅದರಿಂದ ಸಿನಿಮಾದಲ್ಲಿ ನಮ್ಮನ್ನು ಹಿಡಿದಿಟ್ಟುಕೊಳ್ಳುವ ಗುಣ ಜಾಸ್ತಿ ಇರಬೇಕು.

10. ನನಗೋಸ್ಕರ ಸಿನಿಮಾ ಮಾಡಲು ನನ್ನಲ್ಲಿ ಹತ್ತಾರು ಕತೆಗಳಿವೆ. ನಾವು ನಮ್ಮ ಪಾಡಿಗೆ ಕೆಲಸ ಮಾಡೋದನ್ನು ಕಲಿಯಬೇಕು. ಯಾವ ಕೆಲಸವನ್ನೂ ಒತ್ತಡದಲ್ಲಿ ಮಾಡಬಾರದು. ಮಾಡುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು.

Latest Videos
Follow Us:
Download App:
  • android
  • ios