Kantara Trailer; ರಿಷಬ್ - ಕಿಶೋರ್ ಕಾದಾಟ, ಟ್ರೈಲರ್ ನೋಡಿ ಫ್ಯಾನ್ಸ್ ಹೇಳಿದ್ದೇನು?

ಸ್ಯಾಂಡಲ್ ವುಡ್‌ನ ನಿರ್ದೇಶಕ, ನಟ ರಿಷಬ್ ಶೆಟ್ಟಿ ನಟನೆಯ ಬಹುನಿರೀಕ್ಷೆಯ ಕಾಂತಾರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ರಿಷಬ್ ಶೆಟ್ಟಿ ಮತ್ತು ನಟ ಕಿಶೋರ್ ಅವರ ಕಾಳಗ ಟ್ರೈಲರ್‌ನ ಹೈಲೆಟ್ ಆಗಿದೆ. 

Rishab Shetty starrer Kantara trailer released sgk

ಸ್ಯಾಂಡಲ್ ವುಡ್‌ನ ನಿರ್ದೇಶಕ, ನಟ ರಿಷಬ್ ಶೆಟ್ಟಿ ನಟನೆಯ ಬಹುನಿರೀಕ್ಷೆಯ ಕಾಂತಾರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ಮೂಡಿಬಂದಿದೆ. ಸೆಪ್ಟಂಬರ್ 5ರಂದು ಟ್ರೈಲರ್ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿ ಭಾರಿ ಕುತೂಹಲ ಮೂಡಿಸಿದ್ದ ಕಾಂತಾರ ತಂಡ ಕೊನೆಗೂ ಟ್ರೈಲರ್ ರಿಲೀಸ್ ಮಾಡಿದೆ. ರಿಷಬ್ ಶೆಟ್ಟಿ ಟ್ರೈಲರ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಿಷಬ್ ಶೆಟ್ಟಿ ಮತ್ತು ನಟ ಕಿಶೋರ್ ಅವರ ಕಾಳಗ ಟ್ರೈಲರ್‌ನ ಹೈಲೆಟ್ ಆಗಿದೆ. ಅಂದಹಾಗೆ ನಟ ಕಿಶೋರ್ ಫಾರೆಸ್ಟ್ ಅಧಿಕಾರಿಯಾಗಿ ಮಿಂಚಿದ್ದಾರೆ. ಗ್ಯಾಪ್‌ನ ಬಳಿಕ ಕಿಶೋರ್ ಮತ್ತೆ ಸಿನಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸದ್ಯ ಟ್ರೈಲರ್ ಮೂಲಕ ಕುತೂಹಲ ಹೆಚ್ಚಿಸಿರುವ ರಿಷಬ್ ಮತ್ತು ಕಿಶೋರ್ ಇಬ್ಬರನ್ನು ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ಅಂದಹಾಗೆ ಸದ್ಯ ರಿಲೀಸ್ ಆಗಿರುವ ಕಾಂತಾರ ಟ್ರೈಲರ್ನಲ್ಲಿ ಕರಾವಳಿಯ ಕಂಬಳ ಕ್ರೀಡೆ, ಭೂತಕೋಲ, ಆಚಾರ, ವಿಚಾರಗಳನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ.  ಕರಾವಳಿಯ ಸಂಸ್ಕೃತಿ ಜೊತೆಗೆ ಕಾಡಿನ ಜೊತೆ ಬದುಕುವ ಜನರು ಮತ್ತು ಸರ್ಕಾರಿ ಅಧಿಕಾರಿಗಳ ಸಂಘರ್ಷ ಕೂಡ ಇದೆ.  ಫಾರೆಸ್ಟ್ ಅಧಿಕಾರಿಯಾಗಿ ಆಗಿ ಮಿಂಚಿರುವ ಕಿಶೋರ್ ಪ್ರಕೃತಿಯ ರಕ್ಷಣೆಗೆ ಮುಂದಾದರೆ ಆಚರಣೆ, ಸಾಂಪ್ರದಾಯ ಉಳಿಸಲು ರಿಷಬ್ ಹೋರಾಡುತ್ತಾರೆ. ಇಬ್ಬರ ಕಿತ್ತಾಟ, ಘರ್ಷಣೆ ಕಾಂತಾರ ಸಿನಿಮಾದುದ್ದಕ್ಕೂ ಇರಲಿದೆ ಎನ್ನುವ ಸುಳಿವನ್ನು ಈ ಟ್ರೈಲರ್ ನೀಡಿದೆ. 

Rakshit Shetty ಗ್ಯಾಂಗ್‌ನಿಂದ ಬಂತು ನ್ಯೂಸ್; ಎರಡು ಸಿನಿಮಾ ಅನೌನ್ಸ್ ಮಾಡಿದ ಶೆಟ್ರು!

ಅಂದಹಾಗೆ ಕಾಂತಾರ ಟ್ರೈಲರ್ ನೋಡಿದ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಅದ್ಭುತವಾಗಿ ಎಂದು ಹಾಡಿಹೊಗಳಿದ್ರೆ ಇನ್ನು ಕೆಲವರು ಪುಷ್ಪ ಸಿನಿಮಾ ನೆನಪಿಸಿತು ಎನ್ನುತ್ತಿದ್ದಾರೆ. ಇನ್ನು ಕೆಲವರು ಬಿಜಿಎಮ್ ಅಧ್ಭುತವಾಗಿ ಎಂದು ಹೊಗಳುತ್ತಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದಿಂದ ಸಿಂಗಾರ ಸಿರಿಯೇ ಹಾಡನ್ನು ರಿಲೀಸ್ ಮಾಡಲಾಗಿತ್ತು. ಆ ಹಾಡು ಕೂಡ ಅಭಿಮಾನಿಗಳ ಹೃದಯ ಗೆಲ್ಲುವ ಜೊತೆಗೆ ಸಿಕ್ಕಾಪಟ್ಟೆ ವೀಕ್ಷಣೆ ಪಡೆದುಕೊಂಡಿದೆ. ಇದೀಗ ಟ್ರೈಲರ್ ಮೂಲಕ ಕಾಂತಾರ ಸದ್ದು ಮಾಡುತ್ತದೆ.

 \

ಸ್ವಾತಂತ್ರೋತ್ಸವದ ದಿನ ಬಂತು ರಿಷಬ್ ಶೆಟ್ಟಿ 'ಕಾಂತಾರ' ಸಾಂಗ್

ಅಂದಹಾಗೆ ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮತ್ತು ಕಿಶೋರ್ ಜೊತೆಗೆ ನಾಯಕಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಪ್ರಶೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಕೆಜಿಎಫ್ ಖ್ಯಾತಿಯ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ. ರಿಷಬ್ ಶೆಟ್ಟಿ ಅವರು ನಟಿಸುವ ಜೊತೆಗೆ ನಿರ್ದೇಶನದ ಜಬಾವ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅಜನೀಶ್ ಲೋಕಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಟ್ರೈಲರ್ ಮೂಲಕ ಅಭಿಮಾನಿಗಳ ಕನ್ನಡ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಕಾಂತಾರ ಸಿನಿಮಾ ಇದೇ ತಿಂಗಳು ಅಂದರೆ ಸೆಪ್ಟಂಬರ್ 30ರಂದು ರಿಲೀಸ್ ಆಗುತ್ತಿದೆ.    

Latest Videos
Follow Us:
Download App:
  • android
  • ios