Asianet Suvarna News Asianet Suvarna News

Kantara; ಹಿಂದಿ ವರ್ಷನ್ OTT ರಿಲೀಸ್ ಯಾವಾಗ? ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ರಿಷಬ್

ಕಾಂತಾರ ಸಿನಿಮಾದ ಹಿಂದಿ ವರ್ಷನ್ ಒಟಿಟಿ ರಿಲೀಸ್ ಡೇಟ್ ಬಹಿರಂಗವಾಗಿದೆ. ಅಭಿಮಾನಿಗಳ ಪ್ರಶ್ನೆಗೆ ಸುಸ್ತಾದ ರಿಷಬ್ ಒಟಿಟಿ ರಿಲೀಸ್ ಡೇಟ್ ಬಹಿರಂಗ ಪಡಿಸಿದರು. 

Rishab Shetty starrer Kantara Hindi version OTT release on December 9th sgk
Author
First Published Dec 7, 2022, 11:06 AM IST

ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ಬಳಿಕ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಮಲಯಾಳಂ ವರ್ಷನ್ ಕಾಂತಾರ ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಿದೆ. ಚಿತ್ರಮಂದಿರದ ಬಳಿಕ ಒಟಿಟಿಯಲ್ಲೂ ಕಾಂತಾರಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಹಿಂದಿ ವರ್ಷನ್ ಒಟಿಟಿಗೆ ರಿಲೀಸ್ ಯಾವಾಗ ಎಂದು ಹಿಂದಿ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಅಂದಹಾಗೆ ಕಾಂತಾರ ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಗಳಿಂದನೂ ಒದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನಕ್ಕೆ ಫಿದಾ ಆಗಿದ್ದಾರೆ. ಹಿಂದಿಯಲ್ಲೂ ಕಾಂತಾರ ಸಿನಿಮಾವನ್ನು ಅಪ್ಪಿಕೊಂಡಿದ್ದಾರೆ. ಹಾಗಾಗಿ ಹಿಂದಿ ಅಭಿಮಾನಿಗಳು  ಒಟಿಟಿ ರಿಲೀಸ್ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದರು. 

ಅಭಿಮಾನಿಗಳ ಪ್ರಶ್ನೆಗೆ ಸುಸ್ತಾಗಿ ರಿಷಬ್ ಶೆಟ್ಟಿ ಹಿಂದಿ ವರ್ಷನ್ ರಿಲೀಸ್ ಡೇಟ್ ಮತ್ತು ಯಾವ ಒಟಿಟಿ ಪ್ಲಾಟ್‌ಪಾರ್ಮ್ ಎಂದು ಬಹಿರಂಗ ಪಡಿಸಿದರು. ಅಂದಹಾಗೆ ಹಿಂದಿ ವರ್ಷನ್ ಕಾಂತಾರ ಒಟಿಟಿಗಳ ದೈತ್ಯ ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ನೆಟ್‌ಫ್ಲಿಕ್ಸ್ ಕಾಂತಾರ ಸ್ಟ್ರೀಮಿಂಗ್ ಬಗ್ಗೆ ಒಂದು ಪ್ರೋಮೋ ರಿಲೀಸ್ ಮಾಡಿದೆ. ಪ್ರೋಮೋದಲ್ಲಿ ರಿಷಬ್ ಶೆಟ್ಟಿ ದಿನಾಂಕ ಬಹಿರಂಗ ಪಡಿಸಿದರು. ರಿಷಬ್ ಶೆಟ್ಟಿಗೆ ಹಿಂದಿ ಅಭಿಮಾನಿಗಳಿಂದ ರಿಲೀಸ್ ಯಾವಾಗ ಎಂದು ಪ್ರಶ್ನೆಗಳ  ಸುರಿಮಳೆಯೇ ಬರುತ್ತೆ. ಸುಸ್ತಾದ ರಿಷಬ್ ಕೊನೆಗೂ ಡೇಟ್ ಬಹಿರಂಗ ಪಡಿಸಿದರು. ಅಂದಹಾಗೆ ಕಾಂತಾರ ಹಿಂದಿ ವರ್ಷನ್ ಒಟಿಟಿ ರಿಲೀಸ್ ಡಿಸೆಂಬರ್ 9ಕ್ಕೆ ಎಂದು ಹೇಳಿದರು. 

ದಕ್ಷಿಣ ಭಾರತದ ಕಾಂತಾರ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೋ ಪಡೆದುಕೊಂಡಿದೆ. ದಕ್ಷಿಣದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಹೆಚ್ಚು ಪ್ರಾಭಲ್ಯ ಹೊಂದಿದೆ. ಉತತ್ರ ಭಾರತದಲ್ಲಿ ನೆಟ್‌ಫ್ಲಿಕ್ಸ್ ಹೆಚ್ಚು ಚಂದಾದಾರನ್ನು ಹೊಂದಿದೆ ಹಾಗಾಗಿ ಕಾಂತಾರ ಹಿಂದಿ ವರ್ಷನ್ ನೆಟ್‌ಫ್ಲಿಕ್ಸ್ ಖರೀದಿ ಮಾಡಿದೆ. ಅಂದಹಾಗೆ ಸದ್ಯ ನೆಟ್‌ಫ್ಲಿಕ್ಸ್ ಶೇರ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

Kantara; ರಿಷಬ್ ಶೆಟ್ಟಿ ಸಿನಿಮಾ ನೋಡಿ ತೆಲುಗು ನಿರೂಪಕಿ ಅನಸೂಯ ಹೇಳಿದ್ದೇನು?

ರಿಷಬ್ ಶೆಟ್ಟಿ ಸದ್ಯ ಕಾಂತಾರ ಸಕ್ಸಸ್ ನಲ್ಲಿದ್ದಾರೆ. ಈ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ರಿಷಬ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ಅಂದಹಾಗೆ ಈಗಾಗಲೇ ಒಂದಿಷ್ಟು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಅದೇ ಸಿನಿಮಾಗಳನ್ನು ಮುಂದುವರೆಸುತ್ತಾರಾ ಅಥವಾ ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರಾ ಕಾದು ನೋಡಬೇಕು.

Kantara: ಮೂರು ಬಿಗ್ ನ್ಯೂಸ್ ಕೊಟ್ಟ ಡಿವೈನ್ ಸ್ಟಾರ್: ಕಾಂತಾರಾ ಪಾರ್ಟ್ 2 ಬಗ್ಗೆ ರಿಷಬ್ ಶೆಟ್ಟಿ ಹೇಳಿದ್ದೇನು?

ಕಾಂತಾರ ಬಗ್ಗೆ

ಕಾಂತಾರ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಸಿನಿಮಾ. ಈ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಇನ್ನೂ ಖ್ಯಾತ ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಿದ್ದಾರೆ. ನಟ ಅಚ್ಯುತ್ ಕುಮಾರ್ ಗಮನಾರ್ಹ ಪಾತ್ರ ನಿರ್ವಹಿಸಿದ್ದಾರೆ. ಅನೇಕ ರಂಗಭೂಮಿ ಕಲಾವಿದರು ಕಾಂತಾರ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಸ್ಮ್ ನಿರ್ಮಾಣದಲ್ಲಿ ಕಾಂತಾರ ಮೂಡಿ ಬಂದಿದೆ.     

Follow Us:
Download App:
  • android
  • ios