ವಿಶ್ವಸಂಸ್ಥೆಯಲ್ಲಿ ಕನ್ನಡದ ಸೂಪರ್‌ ಹಿಟ್‌ ‘ಕಾಂತಾರ’ ಪ್ರದರ್ಶನವಾಗತ್ತಿದೆ.

ನಟ ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕನ್ನಡದ ಸೂಪರ್‌ ಹಿಟ್‌ ಚಲನಚಿತ್ರ ‘ಕಾಂತಾರ’ ಮಾರ್ಚ್ 17ರ ಶುಕ್ರವಾರ ವಿಶ್ವಸಂಸ್ಥೆ ಸಭೆಯ ನಿಮಿತ್ತ ಪ್ರದರ್ಶನಗೊಳ್ಳಲಿದೆ. ಸ್ವಿಜರ್ಲೆಂಡ್‌ನ ಜಿನೇವಾದಲ್ಲಿ ವಿಶ್ವಸಂಸ್ಥೆ ಜಾಗತಿಕ ಸಭೆ ಹಮ್ಮಿಕೊಂಡಿದ್ದು, ಈ ನಿಮಿತ್ತ ಪಾಥೆ ಬಾಲೆಕ್ಸೆರ್ಟ್ ಚಿತ್ರಮಂದಿರದ 13 ನೇ ಹಾಲ್‌ನಲ್ಲಿ ಪ್ರದರ್ಶನ ಏರ್ಪಾಡಿಸಲಾಗಿದೆ.

ಅಲ್ಲದೇ ಈ ವೇಳೆ ಪರಿಸರ, ಹವಾಮಾನ ಹಾಗೂ ಸಂರಕ್ಷಣೆಯಲ್ಲಿ ಭಾರತೀಯ ಚಿತ್ರರಂಗದ ಪಾತ್ರದ ಕುರಿತು ರಿಷಬ್‌ ಚರ್ಚಿಸಲಿದ್ದಾರೆ ಎಂದು ‘ದ ಸೆಂಟರ್‌ ಆಫ್‌ ಗ್ಲೋಬಲ್‌ ಅಫೇ​ರ್‍ಸ ಆ್ಯಂಡ್‌ ಪಬ್ಲಿಕ್‌ ಪಾಲಿಸಿ’ ಟ್ವೀಟರ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದೆ.

2022ರ ಸೆಪ್ಟಂಬರ್ 30 ರಂದು ಕನ್ನಡದಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಬಳಿಕ ಬೇರೆ ಭಾಷೆಗಳಿಗೆ ಡಬ್‌ ಆಗಿತ್ತು. ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಿದ್ದಂತೆ ಬೇರೆ ಬೇರೆ ಭಾಷೆಗಳಲ್ಲಿ ಬೇಡಿಕೆ ಹೆಚ್ಚಾಯಿತು. ಬಳಿಕ ದಕ್ಷಿಣ ಭಾರತದ ಎಲ್ಲಾ ಭಾಷೆ ಸೇರಿದಂತೆ ಹಿಂದಿಯಲ್ಲೂ ತೆರೆಗೆ ಬಂದಿತು. ಎಲ್ಲಾ ಭಾಷೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದಲ್ಲದೆ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಪ್ರದರ್ಶನ ಕಂಡಿತು. ಇದೀಗ ವಿಶ್ವಸಂಸ್ಥೆ ಜಾಗತಿಕ ಸಭೆಯಲ್ಲಿ ಕಾಂತಾರ ಪ್ರದರ್ಶನಗೊಳ್ಳುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.

ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ಕರ್ನಾಟಕದ ಸಂಸ್ಕೃತಿ, ತುಳುನಾಡಿನ ದೈವಾರಾಧನೆ ಹಾಗೂ ಅರಣ್ಯ ಸಂರಕ್ಷಣೆ ಸಂದೇಶ ಸಾರುವ ಕಥೆ ಹೊಂದಿರುವ ಆ್ಯಕ್ಷನ್‌ ಥ್ರಿಲ್ಲರ್‌ ಸಿನಿಮಾ ಕಾಂತಾರ. 

ಸಿನಿಮಾ ಮೂಲಕ ಪರಿಸರ ರಕ್ಷಣೆ ಜಾಗೃತಿ: ವಿಶ್ವಸಂಸ್ಥೆಯಲ್ಲಿ ರಿಷಬ್‌ ಶೆಟ್ಟಿ ಕರೆ

ವಿಶ್ವಸಂಸ್ಥೆಯಲ್ಲಿ ರಿಷಬ್‌ ಶೆಟ್ಟಿ ಭಾಷಣ

‘ಪರಿಸರದ ಸುಸ್ಥಿರತೆಯನ್ನು ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟನಾಗಿ, ನಿರ್ದೇಶಕನಾಗಿ ಈ ಕುರಿತಾಗಿ ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದೇ ನನ್ನ ಉದ್ದೇಶ. ಪರಿಸರ ಪ್ರಜ್ಞೆಗೆ ಸಿನಿಮಾ ಮಾಧ್ಯಮ ಕನ್ನಡಿ ಹಿಡಿಯುತ್ತದೆ. ಪರಿಸರ ಕುರಿತಾದ ಸಿನಿಮಾಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ಈ ಮೂಲಕ ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷಣ ಮಾಡಲಿರುವ ಮೊದಲ ಕನ್ನಡಿಗ ಎನ್ನಿಸಿಕೊಂಡಿದ್ದಾರೆ. 

'ಕಾಂತಾರ' ನಂತರ ಕಾಡಂಚಿನ ಜನರ ಬೆಂಬಲಕ್ಕೆ ನಿಂತ ರಿಷಬ್ ಶೆಟ್ಟಿ

ಅರಣ್ಯ ರಕ್ಷಣಾ ಅಭಿಯಾನದಲ್ಲಿ ರಿಷಬ್ 

ಕೆಲವು ದಿನಗಳ ಹಿಂದಷ್ಟೆ ನಟ ರಿಷಬ್‌ ಶೆಟ್ಟಿ, ಅವರು ‘ಕನ್ನಡ ಪ್ರಭ’ ಹಾಗೂ ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ನಡೆಸಿದ್ದ ಅರಣ್ಯ ರಕ್ಷಣಾ ಅಭಿಯಾನದಲ್ಲಿ ಭಾಗಿಯಾಗಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅರಣ್ಯ ಹಾಗೂ ಕಾಡಂಚಿನ ಜನರ ಸಮಸ್ಯೆಗಳ ನೀಗಿಸುವಂತೆ ಮನವಿ ಮಾಡಿದ್ದರು. ಅವರು ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಮಾಡಿ ಮುಖ್ಯಮಂತ್ರಿಗಳಿಗೆ ನೀಡಿದ್ದರು.