ರಿಷಬ್ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಇದೇ ಜೂ.23ಕ್ಕೆ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ನಿರ್ದೇಶನದ ಈ ಚಿತ್ರದಲ್ಲಿ ರಚನಾ ಇಂದರ್, ತೇಜಸ್ವಿನಿ ಪೂಣಚ್ಚ ನಾಯಕಿಯರಾಗಿ ನಟಿಸಿದ್ದಾರೆ.
ರಿಷಬ್ ಶೆಟ್ಟಿ ನಟನೆಯ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಇದೇ ಜೂ.23ಕ್ಕೆ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಕರಣ್ ಅನಂತ್ ಹಾಗೂ ಅನಿರುದ್ಧ್ ಮಹೇಶ್ ನಿರ್ದೇಶನದ ಈ ಚಿತ್ರದಲ್ಲಿ ರಚನಾ ಇಂದರ್, ತೇಜಸ್ವಿನಿ ಪೂಣಚ್ಚ ನಾಯಕಿಯರಾಗಿ ನಟಿಸಿದ್ದಾರೆ. ಟ್ರೇಲರ್ ಬಿಡುಗಡೆ ನಂತರ ಮಾತನಾಡಿದ ರಿಷಬ್ ಶೆಟ್ಟಿ, ‘ಹೀರೋ ಪ್ರಧಾನವಾದ ಕೆಜಿಎಫ್ ನೋಡಿದ್ದಾರೆ, ಭಾವನೆಗಳನ್ನು ಹಂಚಿಕೊಳ್ಳುವ 777 ಚಾರ್ಲಿ ಚಿತ್ರವನ್ನೂ ನೋಡಿ ಗೆಲ್ಲಿಸುವ ಪ್ರೇಕ್ಷಕನಿಗೆ ಈಗ ನಗುವ ಸಮಯ.
ಅಂದರೆ ನಮ್ಮ ಹರಿಕಥೆ ಅಲ್ಲ ಗಿರಿಕಥೆ ಚಿತ್ರ ಸಂಪೂರ್ಣವಾಗಿ ಮನರಂಜನೆ ಪ್ರಧಾನವಾಗಿರುತ್ತದೆ. ತುಂಬಾ ಖುಷಿ ಖುಷಿಯಾಗಿ ನೋಡಿಸಿಕೊಂಡು ಹೋಗುವ ಸಿನಿಮಾ. ಸಿನಿಮಾ ಮಾಡಲು ಹೋಗುವವನ ಹಾಡು-ಪಾಡುಗಳನ್ನು ಇಲ್ಲಿ ಹಾಸ್ಯದ ನೆರಳಿನಲ್ಲಿ ಹೇಳಲಾಗಿದೆ. ನಮ್ಮ ನಿರೀಕ್ಷೆಯಂತೆ ಸಿನಿಮಾ ಬಂದಿದೆ’ ಎಂದರು. ನಿರ್ಮಾಪಕ ಸಂದೇಶ್ ನಾಗರಾಜ್ ಮಾತನಾಡಿ, ‘ರಿಷಬ್ ಶೆಟ್ಟಿ ಅವರ ಮೇಲಿನ ನಂಬಿಕೆಯೇ ಈ ಸಿನಿಮಾ ಮಾಡಲು ಕಾರಣವಾಯಿತು. ಒಳ್ಳೆಯ ಕತೆ ಇದೆ. ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ಒಳ್ಳೆಯ ಸಿನಿಮಾಗಳನ್ನು ಎಲ್ಲರು ನೋಡುತ್ತಾರೆಂಬ ನಂಬಿಕೆ ಇದೆ’ ಎಂದರು.
ಜ್ಯೂನಿಯರ್ ಮೊನಾಲಿಸಾ ಹಿಂದೆ ಬಿದ್ದ ಶೆಟ್ರು: 'ಹರಿಕಥೆ ಅಲ್ಲ ಗಿರಿಕಥೆ' ಲವ್ ಸಾಂಗ್ ರಿಲೀಸ್!
‘ನಾವು ಹೇಳಲು ಹೊರಟ ಕತೆಯ ಒಂದು ಝಲಕ್ ಈ ಟ್ರೇಲರ್. ಇದೇ ರೀತಿಯ ಲವಲವಿಕೆ ಇಡೀ ಸಿನಿಮಾ ಸಿನಿಮಾದಲ್ಲಿ ಇರುತ್ತದೆ. ಚಿತ್ರರಂಗದಲ್ಲಿ ಕಂಡ ನೈಜ ಪಾತ್ರಗಳು ಇಲ್ಲಿ ಸಿನಿಮಾ ರೂಪದಲ್ಲಿ ಬಂದು ಹೋಗುತ್ತವೆ’ ಎಂದರು ನಿರ್ದೇಶಕರಾದ ಕರಣ್ ಹಾಗೂ ಅನಿರುದ್ಧ್. ದಿನೇಶ್ ಮಂಗಳೂರ್, ರಚನಾ ಇಂದರ್, ತೇಜಸ್ವಿನಿ ಪೂಣಚ್ಚ , ಕಾಸ್ಟ್ಯೂಮ್ ಡಿಸೈನರ್ ಪ್ರಗತಿ ಶೆಟ್ಟಿ ಇದ್ದರು.
ಇನ್ನು ಸಹಾಯಕ ನಿರ್ದೇಶಕರ ಕತೆಯ ಮೇಲೆ ಸಿದ್ಧವಾಗಿರೋ ಸಿನಿಮಾ 'ಹರಿಕಥೆ ಅಲ್ಲ ಗಿರಿ ಕಥೆ'. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಡೈರೆಕ್ಟರ್ ಕ್ಯಾಪ್‌ನ್ನು ರಿಷಬ್ ಶೆಟ್ಟಿ ತೊಟ್ಟಿದ್ದಾರೆ. ಸಹಾಯಕ ನಿರ್ದೇಶಕನ ಕೆಲಸ ಥ್ಯಾಕ್ಲೆಸ್ ಜಾಬ್. ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದವನು. ಸರಿಯಾಗಿ ಸಂಬಳ ಸಿಗುತ್ತಿರಲಿಲ್ಲ. ಸಹಾಯಕ ನಿರ್ದೇಶಕನಾಗಿ ನಾನು 50 ರೂಪಾಯಿ ಸಂಬಳ ಪಡೆದಿದ್ದೇನೆ. ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವಾಗ ನಿರ್ದೇಶಕರೊಬ್ಬರು ನನ್ನ ತಲೆಗೆ ಹೊಡೆದಿದ್ರು. ನಾನು ಅಂದೇ ಸಿನಿಮಾ ಇಂಡಸ್ಟ್ರಿಯಿಂದ ದೂರ ಹೋಗೋಕೆ ಬಯಸಿದ್ದೆ.
Nirup Bhandari: ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋಸೀಟ್ ಟ್ರೇಲರ್ ಬಿಡುಗಡೆ
ಇದೀಗ ಕಾಂತಾರ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದೇನೆ ಎಂದು ತಿಳಿಸಿದರು. ಇನ್ನು ಇದು ಸಿನಿಮಾ ಮಾಡಲು ಹೊರಡುವವನ ಕತೆ. ಚಿತ್ರರಂಗದಲ್ಲಿ ಕೆಲಸ ಮಾಡುವ ಸಹಾಯ ನಿರ್ದೇಶಕರದ್ದೇ ಒಂದು ದೊಡ್ಡ ಜಗತ್ತು ಇದೆ. ಆ ಜಗತ್ತಿನ ಕತೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ. ಆ ಜಗತ್ತಿನ ಕೋಪ, ಕನಸುಗಳು, ಪ್ರೀತಿ ಮತ್ತು ಸ್ನೇಹ ಎಲ್ಲವೂ ಇದೆ. ಇದನ್ನು ಸಾಕಷ್ಟು ಮಟ್ಟಿಗೆ ಹಾಸ್ಯದ ಧಾಟಿಯಲ್ಲಿ ಹೇಳಿದ್ದೇವೆ. ಎಲ್ಲರಿಗೂ ಇಷ್ಟವಾಗುವ ಸಿನಿಮಾ ಎಂದರು ರಿಷಬ್ ಶೆಟ್ಟಿ.

