ಕಾಂತಾರ ಸಿನಿಮಾ ಸೆ.30ಕ್ಕೆ ಬಿಡುಗಡೆಯಾಗಲಿದೆ. ರಿಷಬ್‌ ಶೆಟ್ಟಿಈ ಚಿತ್ರದ ನಿರ್ದೇಶಕ, ನಾಯಕ. ಸಪ್ತಮಿ ಗೌಡ ನಾಯಕಿ. ಹೊಂಬಾಳೆ ಫಿಲಂಸ್‌ನ ವಿಜಯ ಕಿರಗಂದೂರು ನಿರ್ಮಾಪಕರು. ಇತ್ತೀಚೆಗೆ ತಮ್ಮ ಸಿನಿಮಾ ಅನುಭವವನ್ನು ರಿಷಬ್‌ ಹಂಚಿಕೊಂಡರು. ಅವರ ಮಾತುಗಳು ಇಲ್ಲಿವೆ.

- ಕಾಂತಾರ ಚಿತ್ರದಲ್ಲಿನ ಕೆಲವೊಂದು ಘಟನೆಗಳು ನನ್ನ ಬದುಕಿನಲ್ಲಿ ನೋಡಿದ್ದು. ಮುಖ್ಯ ಕಥೆಯೊಳಗೆ ಕೆಲವು ನಾನು ನೋಡಿದ ಅಂಶಗಳೂ ಸೇರಿಕೊಂಡಿವೆ.

- ದೊಡ್ಡ ಕ್ಯಾನ್ವಾಸ್‌ ಚಿತ್ರವಿದು. ನನ್ನ ಈವರೆಗಿನ ಸಿನಿಮಾ ಜರ್ನಿಯಲ್ಲಿ ಯಾವತ್ತೂ ಇಷ್ಟುದೊಡ್ಡ ಬಜೆಟ್‌ ಸಿನಿಮಾದಲ್ಲಿ ಕೆಲಸ ಮಾಡಿಲ್ಲ.

ಈ ಸಿನಿಮಾದಲ್ಲಿ ಮೀನು ಸಾಂಬಾರು ಮಾಡಿದ್ದು, ಮಂಗಳೂರು ಕನ್ನಡ ಕಲಿತದ್ದು ವಿಶೇಷ ಅನುಭವ. ಫಾರೆಸ್ಟ್‌ ಗಾರ್ಡ್‌ ಪಾತ್ರ ನನ್ನದು.

- ಸಪ್ತಮಿ ಗೌಡ, ನಾಯಕಿ

- ನಿರ್ದೇಶಕ ಮತ್ತು ಆ್ಯಕ್ಟರ್‌ ಆಗಿ ಸಿಕ್ಕಿದ್ದು ದೊಡ್ಡ ಅನುಭವ. ಎಷ್ಟುದೊಡ್ಡದು ಅಂದರೆ ಆಗಾಗ ‘ನಿಂಗಿದು ಬೇಕಿತ್ತಾ ಮಗನೇ..’ ಹಾಡು ನೆನಪಾಗ್ತಿತ್ತು.

- ಇದರಲ್ಲಿ ದೈವದ ಪಾತ್ರಿಯಾಗಿ ಬಣ್ಣ ಹಚ್ಚಿದ್ದು ಮಾತಿಗೂ ನಿಲುಕದ ದೈವಿಕ ಅನುಭವ.

ಮಾಡರ್ನ್ ಹುಡುಗಿಯಾಗಿ ಮೂಗಿನ ಎರಡೂ ಸೈಡ್‌ ಚುಚ್ಚಿಸಿಕೊಂಡ Kantara ನಟಿ ಸಪ್ತಮಿ ಗೌಡ!

- ಪೌರಾಣಿಕ ಶಿವನ ರೇಜ್‌ ಈ ಚಿತ್ರದ ನಾಯಕ ಶಿವನ ಪಾತ್ರಕ್ಕಿದೆ. ಇದು ಆಗ್ರ್ಯಾನಿಕ್‌ ಆಗಿ ಬಂದ ಹೆಸರು, ಅಷ್ಟೇ ಸಹಜವಾಗಿ ಇಡೀ ಸಿನಿಮಾ ವ್ಯಾಪಿಸಿರುವ ಪಾತ್ರ. ಆತನ ಸಿಟ್ಟು, ಎನರ್ಜಿ ಎಂಥಾದ್ದು ಅನ್ನೋದು ಟ್ರೇಲರ್‌ನಲ್ಲಿ ಗೊತ್ತಾಗುತ್ತೆ. ಧರ್ಮಸ್ಥಳದ ಮಂಜುನಾಥನಿಂದಲೇ ಸಿನಿಮಾ ಆರಂಭವಾದದ್ದು, ಇಡೀ ಸಿನಿಮಾ ಪ್ರೊಸೆಸ್‌ ಒಂದು ಸ್ಪಿರಿಚ್ಯುವಲ್‌ ಜರ್ನಿ.

ಹಾಂಟ್‌ ಮಾಡುವ ಚಿತ್ರವಿದು. ಊರ ಧಣಿಯ ಪಾತ್ರ ನನ್ನದು.

ಅಚ್ಯುತ ಕುಮಾರ್‌

- ಕಾಡಬೆಟ್ಟು ಅನ್ನೋದು ಈ ಕಥೆಯಲ್ಲಿ ಬರುವ ಊರು. ನಮ್ಮೂರಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಸೆಟ್‌ ಹಾಕಿದ್ವಿ. ಅಲ್ಲಿ ಎಲ್ಲಾ ಶುದ್ಧದಲ್ಲಿ ನಡೆಯುತ್ತಿತ್ತು. ಮಾಂಸ, ಮದ್ಯಕ್ಕೆಲ್ಲ ನಿಷೇಧ ಇತ್ತು. ಸೆಟ್‌ನಲ್ಲಿ ಓಡಾಡ್ತಿದ್ರೆ ದೇವಸ್ಥಾನದಲ್ಲಿ ಓಡಾಡಿದ ಫೀಲ್‌ ಬರ್ತಿತ್ತು. ಆರಂಭದಲ್ಲಿ ಈ ನಂಬಿಕೆಗಳ ಬಗ್ಗೆ ವಿರೋಧ ತೋರುತ್ತಿದ್ದ ನಾಸ್ತಿಕರೂ ಕೊನೆಯಲ್ಲಿ ಇಲ್ಲಿ ದೇವರಿಗೆ ಪೂಜೆ ಮಾಡಿಸಿ ನಮಸ್ಕಾರ ಹಾಕಿ ಹೋದರು.

- ಕಂಬಳದ್ದು ಮತ್ತೊಂದು ಅನುಭವ. ಈ ಚಿತ್ರಕ್ಕಾಗಿ 36 ರೌಂಡ್‌ ಕೋಣ ಓಡಿಸಿದ್ದೇನೆ. ಅದಕ್ಕಾಗಿ ಸಾಕಷ್ಟುಶ್ರಮವನ್ನೂ ಹಾಕಿದ್ದೀನಿ. ಕಂಬಳ ಕಥೆಗೆ ಪೂರಕವಾಗಿ ಬರುತ್ತದೆಯೇ ಹೊರತು ಅದರ ಮೇಲೇ ಕಥೆ ನಡೆಯೋದಿಲ್ಲ. ಇಡೀ ಸಿನಿಮಾ ಪ್ರಕೃತಿ ಮತ್ತು ಮಾನವ ಸಂಘರ್ಷದ ಮೇಲೆ ನಡೆಯುತ್ತೆ.

ಕಾಂತಾರ ಚಿತ್ರಕ್ಕೆ ರಿಷಬ್ ಶ್ರಮ ಹಾಕಿ ಕಂಬಳ ಅಭ್ಯಾಸ ಮಾಡಿದ್ದಾನೆ: ರಕ್ಷಿತ್ ಶೆಟ್ಟಿ

- ಇದರಲ್ಲಿ ಕರಾವಳಿಯ ಅನೇಕ ಜಾನಪದ ಪ್ರಕಾರಗಳು, ಜನಪದ ವಾದ್ಯಗಳ ಬಳಕೆ ಮಾಡಿದ್ದೇವೆ. ಅದನ್ನೆಲ್ಲ ಒರಿಜಿನಲ್‌ ಕಲಾವಿದರಿಂದಲೇ ರೆಕಾರ್ಡ್‌ ಮಾಡಲಾಗಿದೆ.

- ಸಿನಿಮಾದ ಕೆಲವು ಅಂಶಗಳನ್ನು ಟ್ರೇಲರ್‌ನಲ್ಲಿ ಬಿಟ್ಟಿದ್ದೇವೆಯೇ ಹೊರತು ಎಲ್ಲೂ ಕತೆಯ ಹಿಂಟ್‌ ಬಿಟ್ಟುಕೊಟ್ಟಿಲ್ಲ.

ಪ್ರತೀ ದಿನ ಸೆಟ್‌ನಲ್ಲಿ ಎಷ್ಟುಜನ ಇರ್ತಿದ್ರು ಅಂದ್ರೆ ನಮಗೆ ಮದುವೆ ಮನೆಯ ಫೀಲ್‌ ಬರ್ತಿತ್ತು. ನಾನಿಲ್ಲಿ ಊಸರವಳ್ಳಿಯಂಥಾ ರಾಜಕೀಯ ಪುಢಾರಿ.

 ಪ್ರಮೋದ್‌ ಶೆಟ್ಟಿ