ಕಾಂತಾರಾ ಚಿತ್ರದ ಕ್ಲೈಮ್ಯಾಕ್ಸ್ ಎಂಥವರಿಗೂ ಮೈನವಿರೇಳಿಸುವಂಥದ್ದು. ಈ ಸೀನ್‌ಗೆ ಮಗುವೊಂದು ಪ್ರತಿಕ್ರಿಯಿಸುತ್ತಿರುವ ವಿಡಿಯೋವನ್ನು ನಟ, ನಿರ್ದೇಶಕ ರಿಷಭ್ ಶೆಟ್ಟಿ ಹಂಚಿಕೊಂಡಿದ್ದಾರೆ. 

ಕಾಂತಾರಾ ಚಿತ್ರದ ಕ್ಲೈಮ್ಯಾಕ್ಸ್ ಎಂಥವರಿಗೂ ಮೈನವಿರೇಳಿಸುವಂಥದ್ದು. ಅದೆಷ್ಟು ಸೊಗಸಾಗಿ ದೈವದ ನಟನೆ ಮೂಡಿಬಂದಿದೆ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೆ ಪ್ರತಿಯೊಬ್ಬರೂ ಈ ಸೀನ್ ನೋಡಿ ಖುಷಿ ಪಡುತ್ತಿದ್ದಾರೆ. 

ಇದೀಗ ಪುಟ್ಟ ಹೆಣ್ಣುಮಗುವೊಂದು ಕ್ಲೈಮ್ಯಾಕ್ಸ್ ನೋಡುತ್ತಾ, ಕೂಗುತ್ತಾ, ತಲ್ಲೀನವಾಗಿರುವ ವಿಡಿಯೋವೊಂದನ್ನು ಎಕ್ಸ್‌ನಲ್ಲಿ ಸ್ವತಃ ರಿಷಭ್ ಶೆಟ್ಟಿ ಮರು ಹಂಚಿಕೆ ಮಾಡಿದ್ದಾರೆ. ಇದಕ್ಕೆ ಕಣ್ಣಿನಲ್ಲಿ ಹಾರ್ಟ್ ಇರುವ ಎಮೋಜಿಗಳನ್ನು ಹಾಕಿ ಧನ್ಯವಾದ ಕೂಡಾ ಎಮೋಜಿಯಲ್ಲೇ ಹೇಳಿದ್ದಾರೆ.

ಗರ್ಭಿಣಿಯಾಗ್ಬೇಕಂತೆ ನಟಿ ಕಿಯಾರಾ; ಕಾರಣ ಮಾತ್ರ ವಿಚಿತ್ರ!

ಇದನ್ನು ಮೊದಲು ಶ್ರೀರಾಮ್ ಎಂಬವರು ಹಂಚಿಕೊಂಡಿದ್ದು, ಆಧ್ಯಾತ್ಮ ಎಂಬುದು ಮಗುವಿನ ಹೃದಯವನ್ನು ಹೊಕ್ಕಾಗ ಅದೊಂದು ಮ್ಯಾಜಿಕ್ ಆಗುತ್ತದೆ ಎಂದು ಕ್ಯಾಪ್ಶನ್ ನೀಡಿದ್ದರು. ಈ ವಿಡಿಯೋ ಹಲವು ಮರು ಶೇರು ಕಂಡಿದೆ. 

ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, 'ಮಗುವಾಗಿದ್ದಾಗ ಮಾತಾಡಲು ಬಾರದಿದ್ದಾಗ ಮಕ್ಕಳು ತಮ್ಮ ಅನುಭವಗಳನ್ನು ಪೂರ್ವಜನ್ಮದ ಅನುಭವಗಳೊಂದಿಗೆ ಸಂಬಂಧಿಸಿ ನೋಡಬಲ್ಲರು. ಆದರೆ, ಬೆಳೆಯುತ್ತಾ ಹಳೆಯದು ಮರೆತು ಹೋಗುತ್ತದೆ' ಎಂದಿದ್ದಾರೆ.

ಕೋಟ್‌ ಒಳಗೆ ಬೇಬಿ ಬಂಪ್ ಮುಚ್ಚಿಟ್ಕೊಂಡ ಕತ್ರೀನಾ ಕೈಫ್; ನಟಿ ಗರ್ಭಿಣಿ ಎಂಬ ವದಂತಿಗೆ ಸಾಕ್ಷಿ ನೀಡ್ತಿದೆ ವಿಡಿಯೋ

'ಈ ವಯಸ್ಸಿನಲ್ಲಿ ಮಕ್ಕಳು ದೇವರಿಗೆ ತುಂಬಾ ಹತ್ತಿರದಲ್ಲಿರುತ್ತಾರೆ. ಹಾಗಾಗಿ, ಮಗುವಿಗೆ ದೈವದ ಭಾಷೆ ತಲುಪುತ್ತಿದೆ,' ಎಂದು ಮತ್ತೊಬ್ಬರು ಹೇಳಿದ್ದಾರೆ. 

'ಶುದ್ಧವಾದ ಮನಸ್ಸು ಸಂಸ್ಕೃತಿಯನ್ನು ಅರಿತಾಗ ಅವರ ಪ್ರತಿಕ್ರಿಯೆ ತುಂಬಾ ಸಹಜವಾಗಿರುತ್ತದೆ' ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. 


Scroll to load tweet…