ಸ್ಯಾಂಡಲ್‌ವುಡ್‌ ಟ್ಯಾಲೆಂಟೆಡ್‌ ಡೈರೆಕ್ಟರ್ ಕಮ್ ನಟ ರಿಷಬ್ ಶೆಟ್ಟಿ, ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್‌ನನ್ನು ಭೇಟಿ ಮಾಡಿದ್ದಾರೆ. ಇಲ್ಲಿ ಸೈಲೆಂಟ್ ಆಗಿ ಸಿನಿಮಾ ಮಾತುಕತೆ ಶುರುವಾಗಿದ್ಯಾ ಅಥವಾ ಬೇರೆ ಏನಾದ್ರೂ ಪ್ಲಾನ್ ಮಾಡುತ್ತಿದ್ದಾರಾ ಎಂಬ ಕನ್ಫ್ಯೂಶನ್‌ಲ್ಲಿದ್ದ ನೆಟ್ಟಿಗರಿಗೆ ರಿಷಬ್ ಸ್ಪಷ್ಟನೆ ಕೊಟ್ಟಿದ್ದಾರೆ.

ರಿಷಬ್‌ ಶೆಟ್ಟಿ 'ಹರಿಕತೆ ಅಲ್ಲ ಗಿರಿಕತೆ' ಚಿತ್ರಕ್ಕೆ ಕರಣ್‌ ಅನಂತ್‌, ಅನಿರುದ್ಧ ಮಹೇಶ್‌ ನಿರ್ದೇಶಕರು!

ರಿಷಬ್ ಫೋಸ್ಟ್‌:
ನಟ ರಿಷಬ್ ಶೆಟ್ಟಿಗೂ ಸಿನಿಮಾ ಕ್ರೇಜ್ ಮಾತ್ರವಲ್ಲ, ಕಾರು ಕ್ರೇಜ್ ಕೂಡ ಜಾಸ್ತಿಯೇ ಇದೆ. ಎಲ್ಲರಿಗೂ ಒಂದಲ್ಲ ಒಂದು ಡ್ರೀಮ್ ಕಾರು ಇದ್ದೇ ಇರುತ್ತದೆ. ಹಾಗೆ ರಿಷಬ್‌ಗೆ ಈ ಫೋರ್ಡ್ ಮಸ್ಟ್ಯಾಂಗ್ ಅಂದ್ರೆ ತುಂಬಾನೇ ಇಷ್ಟವಂತೆ. 'ನನ್ನ ಡ್ರೀಮ್ ಕಾರು ಫೋರ್ಡ್ ಮಸ್ಟ್ಯಾಂಗ್. ನಿನ್ನೆ ಸಂಜೆ ದರ್ಶನ್ ಸರ್ ತಮ್ಮ ಕಾರಿನಲ್ಲಿ ಒಂದು ಡ್ರೈವ್ ಕರೆದುಕೊಂಡು ಹೋದಾಗ ಆದ ಖುಷಿ ಅಷ್ಟಿಷ್ಷಲ್ಲ. ಥ್ಯಾಂಕ್ಸ್‌ ದರ್ಶನ್ ಸರ್,' ಎಂದು ಬರೆದುಕೊಂಡಿದ್ದಾರೆ.

 

ರಿಷಬ್ ಶೆಟ್ಟಿ ಬಹು ನಿರೀಕ್ಷಿತ ಸಿನಿಮಾ 'ಹರಿಕತೆ ಅಲ್ಲ ಗಿರಿಕಥೆ' ಸಿನಿಮಾ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಅಲ್ಲಿನ ಸಂದೇಶ್ ಹೋಟೆಲ್‌ನಲ್ಲಿ ದರ್ಶನ್‌, ರಿಷಬ್ ಹಾಗೂ ಪ್ರಮೋದ್ ಶೆಟ್ಟಿ ಭೇಟಿಯಾಗಿದ್ದಾರೆ. ಸಾಮಾನ್ಯವಾಗಿ ಮೈಸೂರಿನಲ್ಲಿ ಯಾವುದೇ ಸಿನಿಮಾ ಚಿತ್ರೀಕರಣವಾದರೂ ದರ್ಶನ್‌ ಸ್ಥಳಕ್ಕೆ ಭೇಟಿ ನೀಡಿ, ತಂಡದ ಜೊತೆ ಮಾತನಾಡಿ, ಸಮಯ ಕಳೆಯುತ್ತಾರೆ. ಇದು ಅವರ ದೊಡ್ಡ ಗುಣ ಎಂದು ಅಭಿಮಾನಿಗಳು ಹೇಳುತ್ತಾರೆ.

ಡಿಬಾಸ್ ದರ್ಶನ್ ಖರೀದಿಸಿದ ಫೋರ್ಡ್ ಮಸ್ತಾಂಗ್ ಕಾರಿನ ಬೆಲೆ ಹಾಗೂ ವಿಶೇಷತೆ ಏನು?

ನೆಟ್ಟಿಗರ ಕಾಮೆಂಟ್:
ಸ್ಯಾಂಡಲ್‌ವುಡ್ ಇಬ್ಬರು ದಿಗ್ಗಜರನ್ನು ಒಟ್ಟಾಗಿ ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. 'ಸರ್ ನಿಮ್ಮದು, ಬಾಸ್‌ದು ಯಾವುದಾದ್ರೂ ಫಿಲ್ಮ್‌ ಬರುತ್ತಾ?' ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು 'ದರ್ಶನ್ ಪ್ರೀತಿ ಹಂಚುವ ಯಜಮಾನ' ಎಂದಿದ್ದಾರೆ.