ಸ್ಯಾಂಡಲ್‌ವುಡ್‌ ಮಾಸ್ಟರ್ ಮೈಂಡ್‌ ಡೈರೆಕ್ಟರ್ ಕಮ್ ನಟ ರಿಷಬ್ ಶೆಟ್ಟಿ ಬಹು ನಿರೀಕ್ಷಿತ ಚಿತ್ರ 'ಹೀರೋ' ಇದೇ ಮಾರ್ಚ್‌ 5ರಂದು ಬಿಡುಗಡೆಯಾಗುತ್ತಿದೆ. ಚಿತ್ರೀಕರಣದ ವೇಳೆ ನಡೆದ ಅವಗಢದ ಬಗ್ಗೆ ಈಗ ಮಾಹಿತಿಯೊಂದು ಬಹಿರಂಗಗೊಂಡಿದೆ. 

"

ಹೀರೋ ಟ್ರೈಲರ್‌ನಲ್ಲಿ ಏನಿಷ್ಟೊಂದು ರಕ್ತ; ರಿಷಬ್‌ ಕಲ್ಪನೆ ಗೆಸ್‌ ಮಾಡೋಕೆ ಆಗಲ್ಲ! 

ರಿಷಬ್ ಶೆಟ್ಟಿ ಹಾಗೂ ನಟಿ ಗಾನವಿ ಸಾಹಸ ದೃಶ್ಯ ಚಿತ್ರೀಕರಣವೊಂದಕ್ಕೆ ಪೆಟ್ರೋಲ್ ಬಾಂಬ್ ಬಳಸಲಾಗಿತ್ತು.  ಮೊದಲ ಬಾಂಬ್ ಸಿಡಿದರೂ ಯಾವ ಸಮಸ್ಯೆಯಬ ಇರಲಿಲ್ಲ. ಆದರೆ, ಎರಡನೇ ಬಾಂಬ್ ಸ್ಪೋಟಗೊಂಡಾಗ ರಿಷಬ್‌ ಕೊಂಚ ಯಾಮಾರಿದ್ರೆ ಪ್ರಾಣಕ್ಕಿತ್ತು, ದೊಡ್ಡ ಅಪಾಯ. ಇದರಿಂದ ರಿಷಬ್‌ ಕೂದಲು ಸುಟ್ಟಿದೆ ಹಾಗೂ ಬೆನ್ನ ಮೇಲೆ ಗಾಯವಾಗಿದೆ. ಸಾಕಷ್ಟು ಮುಂಜಾಗ್ರತ ಕ್ರಮ ತೆಗದುಕೊಂಡಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಲಿಲ್ಲ ಎನ್ನಲಾಗಿದೆ. 

ಲಾಕ್‌ಡೌನ್‌ ವೇಳೆ ರಿಷಬ್ ಆಂಡ್ ಟೀಂ ಏನಾದರೂ ಮಾಡಲೇ ಬೇಕೆಂದು ಅತಿ ಕಡಿಮೆ ಅವಧಿಯಲ್ಲಿ ಸೀಮಿತ ಲೊಕೇಶನ್‌ನಲ್ಲಿ ಡಿಫರೆಂಟ್‌ ಆಗಿ 'ಹೀರೋ' ಸಿನಿಮಾ ರೆಡಿ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಚಿತ್ರದ ಟೈಲರ್‌ ರಿಲೀಸ್‌ ಆಗಿದ್ದು ವೀಕ್ಷಕರು ಶಾಕ್ ಆಗಿದ್ದಾರೆ. 

ರೆಟ್ರೋ ಹಾಡಿಗೆ ಹೆಜ್ಜೆ ಹಾಕಿದ ರಿಷಬ್ ಶೆಟ್ಟಿ- ಗಾನವಿ; ಟೈಟಲ್‌, ಫರ್ಸ್ಟ್‌ ಲುಕ್‌ ಬಿಡುಗಡೆ! 

ಪೆಟ್ರೋಲ್ ಬಾಂಬ್ ಬಳಸಿ ಮಾಡಲಾಗಿರುವ ದೃಶ್ಯವನ್ನು ಟ್ರೈಲರ್‌ನಲ್ಲಿ ಬಳಸಲಾಗಿದೆ. ದೃಶ್ಯ ನೋಡಲು ವಾವ್! ಎನ್ನುವಂತಿದ್ದರೂ ಇದರ ಹಿಂದಿರುವ ಶ್ರಮ ಈಗ ಬೆಳಕಿಗೆ ಬಂದಿದೆ. ಏನೇ ಮಾಡಿದರೂ ಡಿಫರೆಂಟ್ ಆಗಿ ಮಾಡಬೇಕು ಎನ್ನುವ ಯೋಚನೆಯಲ್ಲಿರುವ ರಿಷಬ್, ಇಷ್ಟೊಂದು ರಿಸ್ಕ್‌ ತೆಗೆದುಕೊಂಡಿರುವುದನ್ನು ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ ಹಾಗೂ ಯಾವುದೇ ದೊಡ್ಡ ತೊಂದರೆ ಆಗಲಿಲ್ಲ ಎಂದು ಸಮಾಧಾನ ಪಟ್ಡಿದ್ದಾರೆ.