ಬಹುಕೋಟಿ ವೆಚ್ಚದ ಹೊಸ ಚಿತ್ರದಲ್ಲಿ ನಟ ಕಂ ನಿರ್ದೇಶಕ ರಿಷಬ್‌ ಶೆಟ್ಟಿನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ರಘು ಕೋವಿ. ಈಗಾಗಲೇ ಸಾಕಷ್ಟುಚಿತ್ರಗಳಿಗೆ ಬರವಣಿಗೆ ಮಾಡಿರುವ ರಘು ಕೋವಿ, ರಿಷಬ್‌ ಶೆಟ್ಟಿ ನಟನೆಯ ಈ ಚಿತ್ರವನ್ನು ನಾಲ್ಕು ಭಾಷೆಗಳಲ್ಲಿ ನಿರ್ದೇಶನ ಮಾಡಲು ಹೊರಟಿದ್ದಾರೆ.

ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ದೊಡ್ಡ ನಿರ್ಮಾಣ ಕಂಪನಿಗಳ ಜತೆ ಮಾತುಕತೆ ಕೂಡ ಮಾಡಿದ್ದಾರೆ. ರಾಮ್‌ ಗೋಪಾಲ್‌ ವರ್ಮಾ ಅವರ ಕಂಪನಿ ಜತೆಗೂ ಮಾತುಕತೆ ಮಾಡಿದ್ದು, ಲಾಕ್‌ಡೌನ್‌ ಮುಗಿದ ಮೇಲೆ ನಿರ್ಮಾಣದ ವಿಚಾರಗಳು ಅಂತಿಮಗೊಳ್ಳಲಿವೆ. ಹಾಗಾದರೆ ಈ ಚಿತ್ರದ ಕತೆ ಏನು?

ಸೈಫ್ರ ಮದುವೆ ಪ್ರಪೋಸಲ್‌ 2 ಬಾರಿ ರಿಜೆಕ್ಟ್‌ ಮಾಡಿದ್ರಂತೆ ಕರೀನಾ!

ಇಂದಿರಾ ಗಾಂಧಿ ವರ್ಸಸ್‌ ಕಾಮನ್‌ ಮ್ಯಾನ್‌

ಭಾರತವನ್ನು ಆಳಿದ ಇಂದಿರಾಗಾಂಧಿ ಅವರ ಸುತ್ತ ಸಾಗುವ ಕತೆ ಇದು. ಸಾಕಷ್ಟುನೈಜ ಘಟನೆಗಳನ್ನು ಆಧರಿಸಿ ಸಿನಿಮ್ಯಾಟಿಕ್‌ ಆಗಿ ರೂಪಗೊಳ್ಳುವ ಈ ಚಿತ್ರದಲ್ಲಿ ವ್ಯಕ್ತಿಯೊಬ್ಬ ಇಂದಿರಾ ಗಾಂಧಿ ಅವರನ್ನು ಸಾಯಿಸುವ ನಿರ್ಧಾರ ಮಾಡಿ, ಆ ನಿಟ್ಟಿನಲ್ಲಿ ಸಂಚು ರೂಪಿಸುತ್ತಾನೆ. ತನ್ನ ದ್ವೇಷದ ಗುರಿಯನ್ನು ಸಾಧಿಸಲು ದೆಹಲಿಗೆ ಹೊರಟು ನಿಂತಾಗ, ತಾನಿದ್ದಲ್ಲಿಗೇ ಇಂದಿರಾಗಾಂಧಿ ಬರುತ್ತಾರೆ. ಅದೇ ಚಿಕ್ಕಮಗಳೂರಿನ ಚುನಾವಣೆ.

ದೇವರಾಜು ಅರಸು ಕಾಲದ ಈ ಚುನಾವಣೆಯ ಸಂಭ್ರಮ ಒಂದು ಕಡೆಯಾದರೆ, ತಾನು ಬೇಟೆಯಾಡಲಿರುವ ವ್ಯಕ್ತಿ, ತನ್ನೂರಿಗೆ ಬಂದ ಅಚ್ಚರಿ ಸಂಚುಗಾರನದ್ದು. ಆದರೆ, ಒಬ್ಬ ಸಾಮಾನ್ಯ ವ್ಯಕ್ತಿ ಇಂದಿರಾ ಗಾಂಧಿ ಅವರನ್ನು ಕೊಲ್ಲುವ ನಿರ್ಧಾರಕ್ಕೆ ಯಾಕೆ ಬರುತ್ತಾನೆ, ಅವನ ದ್ವೇಷಕ್ಕೆ ಕಾರಣ ಏನು, ಇಡೀ ದೇಶವೇ ಹೊಗಳುತ್ತಿರುವ ಮಹಿಳಾ ನಾಯಕಿಯ ಸಾವು ಬಯಸುವ ಆ ವ್ಯಕ್ತಿ ಯಾರೆಂಬುದೇ ಚಿತ್ರದ ಕತೆ.

'ಜೊತೆ ಜೊತೆಯಲಿ' ಮಿಸ್‌ ಮಾಡಿಕೊಂಡವರಿಗೆ ಗುಡ್‌ ನ್ಯೂಸ್..!

10 ಕೋಟಿ, ನಾಲ್ಕು ಭಾಷೆ

ಆರಂಭದಲ್ಲಿ ಈ ಚಿತ್ರವನ್ನು ಕೇವಲ ಕನ್ನಡದಲ್ಲಿ ಮಾತ್ರ ಮಾಡುವ ಯೋಜನೆ ನಿರ್ದೇಶಕ ರಘು ಕೋವಿ ಅವರದ್ದಾಗಿತ್ತು. ಆದರೆ, ಚಿತ್ರಕಥೆ ಮಾಡುತ್ತ ಹೋದಂತೆ ಇದು ಬಹುಭಾಷೆಗೆ ಸಲ್ಲುವ ಕತೆ ಎನಿಸಿ ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಈ ಚಿತ್ರವನ್ನು ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಬೇರೆ ನಿರ್ಮಾಣ ಕಂಪನಿಗಳ ಜತೆ ಮಾತುಕತೆ ಮಾಡುತ್ತಿದ್ದು, 10 ಕೋಟಿ ವೆಚ್ಚದ ಸಿನಿಮಾ ಇದಾಗಲಿದೆ.

ಇಂದಿರಾಗಾಂಧಿ ಪಾತ್ರದಲ್ಲಿ ಬಾಲಿವುಡ್‌ ಬೆಡಗಿ ರವಿನಾ ಟಂಡನ್‌ ಹಾಗೂ ಇಂದಿರಾ ಗಾಂಧಿಯನ್ನು ಸಾಯಿಸಲು ಹೊರಡುವ ಪಾತ್ರದಲ್ಲಿ ರಿಷಬ್‌ ಶೆಟ್ಟಿಕಾಣಿಸಿಕೊಳ್ಳಲಿದ್ದಾರೆ. ‘ಇಲ್ಲಿ ಚಿತ್ರದ ನಾಯಕನದ್ದು ನೆಗೆಟಿವ್‌ ಪಾತ್ರ ಆಗಿರುತ್ತದೆ. ಆದರೆ, ಯಾಕೆ ಆತ ಹಾಗೆ ಆಗುತ್ತಾನೆ. ಕೊನೆಗೂ ಅವನು ಸಾಯಿಸಬೇಕು ಎಂದುಕೊಂಡ ವ್ಯಕ್ತಿಯನ್ನು ಬೇರೊಬ್ಬರು ಸಾಯಿಸಿದಾಗ ಆತ ಏನಾಗುತ್ತಾನೆ ಎಂಬುದು ಚಿತ್ರದ ಕತೆ.

ಇಂದಿರಾ ಗಾಂಧಿ, ಚಿಕ್ಕಮಗಳೂರು, ಚುನಾವಣೆ ಹಾಗೂ ದ್ವೇಷದ ವ್ಯಕ್ತಿ ಹಾಗೂ ಚಿತ್ರದ ಕ್ಲೈಮ್ಯಾಕ್ಸ್‌ ಅಂಶಗಳು ರಿಯಲ್‌. ಉಳಿದಂತೆ ಕಾಲ್ಪನಿಕಾ ಅಂಶಗಳ ಜತೆಗೆ ಇಡೀ ಚಿತ್ರವನ್ನು ಕಮರ್ಷಿಯಲ್‌ ಆಗಿರುತ್ತದೆ’ ಎನ್ನುತ್ತಾರೆ ನಿರ್ದೇಶಕ ರಘು ಕೋವಿ.

 

ಸದ್ಯಕ್ಕೆ ನಾನು ಚಿತ್ರಕಥೆ ಬರೆಯುತ್ತಿದ್ದೇನೆ. ಕತೆಯನ್ನು ಈಗಾಗಲೇ ರಿಷಬ್‌ ಶೆಟ್ಟಿಅವರಿಗೆ ಹೇಳಿದ್ದು, ಅವರು ಒಪ್ಪಿದ್ದಾರೆ. ಹಾಗೆ ರಾಮ್‌ಗೋಪಾಲ್‌ ವರ್ಮಾ ಅವರ ಕಂಪನಿಗೂ ನನ್ನ ಕತೆ ಇಷ್ಟವಾಗಿದೆ. ಲಾಕ್‌ಡೌನ್‌ ಮುಗಿದ ಮೇಲೆ ನಿರ್ಮಾಣದ ವಿಚಾರಗಳು ಅಂತಿಮಗೊಳ್ಳಲಿವೆ. ರಾಜಕೀಯ, ರಿವೇಂಜ್‌ ಮತ್ತು ಪಶ್ಚಾತ್ತಾಪ ಈ ನೆರಳಿನಲ್ಲಿ ಸಿನಿಮಾ ಸಾಗುತ್ತದೆ.

-ರಘು ಕೋವಿ, ನಿರ್ದೇಶಕ