Asianet Suvarna News Asianet Suvarna News

ಕಣ್ಮರೆಯಾದ ಕನ್ನಡದ ಕಣ್ಮಣಿ ಲೀಲಾವತಿ ಕೃಷಿ ಕಾಯಕಕ್ಕೆ ಪ್ರಶಸ್ತಿಯೇ ಸಿಗಲಿಲ್ಲ!

ನೆಲಮಂಗಲದಲ್ಲಿ ಲೀಲಾವತಿ ತೆಗೆದುಕೊಂಡಿರುವ ಜಮೀನಿನಲ್ಲಿ ಬಹಳಷ್ಟು ಕಲ್ಲುಮುಳ್ಳುಗಳೇ ತುಂಬಿಕೊಂಡಿದ್ದವಂತೆ. ಆದರೆ ಇಂದು, ಆ ಜಮೀನಿನಲ್ಲಿ ಹಣ್ಣು-ತರಕಾರಿ ಮರಗಿಡಗಳು ತಲೆ ಎತ್ತಿ ನಿಂತಿವೆ. ತೆಂಗಿನ ಮರಗಳು ಹಾಗೂ ಹಲವು ವಿಧದ ಮರಗಳು ಅಲ್ಲಿದ್ದು ಅವು ಹಚ್ಚಹಸಿರಿನಿಂದ ಕಂಗೊಳಿಸುತ್ತಿವೆ. 

Remembering Kannada actress Leelavathi her love about agriculture and farming srb
Author
First Published Dec 9, 2023, 5:28 PM IST

ಕನ್ನಡದ ಕಣ್ಮಣಿ, ಬಹುಭಾಷಾ ನಟಿ ಲೀಲಾವತಿ ಅವರು ನಿನ್ನೆ (8 ಡಿಸೆಂಬರ್ 2023) ರಂದು ನಮ್ಮನ್ನೆಲ್ಲ ಅಗಲಿದ್ದಾರೆ. 85 ವರ್ಷಗಳ ತುಂಬು ಜೀವನ ನಡೆಸಿದ್ದ ನಟಿ ಲೀಲಾವತಿಯವರು ಬರೋಬ್ಬರಿ 5 ಭಾಷೆಗಳಲ್ಲಿ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು. ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ ಅವರೊಂದಿಗೆ ನಟಿ 46 ಚಿತ್ರಗಳಲ್ಲಿ ನಟಿಸಿದ್ದವರು. ಅಷ್ಟೇ ಅಲ್ಲ, ಡಾ ರಾಜ್-ಲೀಲಾವತಿ ಚಿತ್ರಗಳೆಲ್ಲವೂ ಸೂಪರ್ ಹಿಟ್ ದಾಖಲಿಸಿದ್ದವು. ಆ ಕಾಲದಲ್ಲಿ ಡಾ ರಾಜ್ ಕುಮಾರ್ ಮತ್ತು ಲೀಲಾವತಿ ಜೋಡಿ ಎಂದರೆ ಪ್ರೇಕ್ಷಕರ ಅಚ್ಚುಮೆಚ್ಚಿನ ಜೋಡಿಯಾಗಿತ್ತು. 

ನಟಿ ಲೀಲಾವತಿಯವರು ಕೇವಲ ನಟಿಯಾಗಿ ಮಾತ್ರ ಗುರುತಿಸಿಕೊಂಡಿರಲಿಲ್ಲ. ಅವರ ವ್ಯಕ್ತಿತ್ವಕ್ಕೆ ಇನ್ನೊಂದು ಮುಖವಿತ್ತು. ಆದರೆ, ಹಲವು ಜನರಿಗೆ ಲೀಲಾವತಿಯವರ ಇನ್ನೊಂದು ಮುಖದ ಪರಿಚಯವೇ ಇಲ್ಲ. ನಟಿ ಲೀಲಾವತಿಯವರು ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಹಾಗೂ ತುಳು ಭಾಷೆಗಳಲ್ಲಿ ಕೂಡ ನಟಿಸಿ ಅಂದಿನ ಕಾಲಕ್ಕೆ ಸಾಕಷ್ಟು ಹಣ ಸಂಪಾದನೆ ಮಾಡಿದವರು. ಬಹುಭಾಷಾ ನಟಿಯಾಗಿದ್ದ ಲೀಲಾವತಿಯವರು ತಾವು ಸಿನಿಮಾದಿಂದ ಗಳಿಸಿದ ಹಣದಲ್ಲಿ ಚೆನ್ನೈನಲ್ಲಿ ಜಮೀನು ಖರೀದಿಸಿ ಹಣ್ಣು-ತರಕಾರಿ ತೋಟ ಮಾಡಿಕೊಂಡಿದ್ದರು. 

1980 ರಲ್ಲಿ ಲೀಲಾವತಿಯವರು ತಮ್ಮ ಚೆನ್ನೈನ ತೋಟದಲ್ಲಿ ಬೆಳೆದ ತರಕಾರಿ-ಹಣ್ಣುಗಳ ಮಾರಾಟದಿಂದ ದಿನಕ್ಕೆ 12,000 ರೂ. ಗಳಿಸುತ್ತಿದ್ದರಂತೆ. 1980ರಲ್ಲಿ 12 ಸಾವಿರ ರೂಪಾಯಿ ಎಂದರೆ ಇಂದು ಅದು 25 ಲಕ್ಷಕ್ಕೂ ಮೀರಿದ್ದು. ಲೀಲಾವತಿಯವರು ತಾವು ಬೆಳೆದ ಹಣ್ಣು-ತರಕಾರಿಗಳಲ್ಲಿ ಸ್ವಲ್ಪ ಭಾಗ ಮಾತ್ರ ಮಾರಾಟ ಮಾಡಿ ಮಿಕ್ಕಿದ್ದನ್ನು ತಾವು ಹೋಗುತ್ತಿದ್ದ ಶೂಟಿಂಗ್ ಜಾಗಕ್ಕೆ ತೆಗೆದುಕೊಂಡು ಹೋಗಿ ಅಲ್ಲಿದ್ದವರಿಗೆ ಹಂಚುತ್ತಿದ್ದರಂತೆ. ಅಷ್ಟೇ ಅಲ್ಲ, ತಮ್ಮ ಅಕ್ಕಪಕ್ಕದ ಮನೆಗಳಲ್ಲಿ ಅಗತ್ಯ ಇರುವವರಿಗೆ ಹಂಚಿಬಿಡುತ್ತಿದ್ದರಂತೆ. ನಟಿ ಲೀಲಾವತಿಯವರದ್ದು ಚಿಕ್ಕಂದಿನಿಂದಲೂ ತುಂಬಾ ಮಾನವೀಯತೆ ತುಂಬಿದ್ದ ಮನಸ್ಸು ಎನ್ನಲಾಗುತ್ತದೆ. 

ಮನೆಯ ಕಾರಿಡಾರ್‌ನಲ್ಲಿ ವಾಕ್ ಮಾಡುವಾಗ ಅಮ್ಮ ನನ್ನ ಸುತ್ತಲೂ ಇದ್ದಾರೆ ಅನ್ನಿಸುತ್ತೆ; ಜಾನ್ವಿ ಕಪೂರ್

ಚೆನ್ನೈನಲ್ಲಿ ತಾವು ಮಾಡುತ್ತಿದ್ದ ತೋಟವನ್ನು ಮಾರಿ ಆ ಹಣದಲ್ಲಿ ಬೆಂಗಳೂರು ಸಮೀಪದ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಜಮೀನು ಖರೀದಿಸಿ ಅಲ್ಲಿ ತೋಟ ಮಾಡಿದ್ದಾರೆ. ನೆಲಮಂಗಲದಲ್ಲಿ ಲೀಲಾವತಿ ತೆಗೆದುಕೊಂಡಿರುವ ಜಮೀನಿನಲ್ಲಿ ಬಹಳಷ್ಟು ಕಲ್ಲುಮುಳ್ಳುಗಳೇ ತುಂಬಿಕೊಂಡಿದ್ದವಂತೆ. ಆದರೆ ಇಂದು, ಆ ಜಮೀನಿನಲ್ಲಿ ಹಣ್ಣು-ತರಕಾರಿ ಮರಗಿಡಗಳು ತಲೆ ಎತ್ತಿ ನಿಂತಿವೆ. ತೆಂಗಿನ ಮರಗಳು ಹಾಗೂ ಹಲವು ವಿಧದ ಮರಗಳು ಅಲ್ಲಿದ್ದು ಅವು ಹಚ್ಚಹಸಿರಿನಿಂದ ಕಂಗೊಳಿಸುತ್ತಿವೆ. 

ಸ್ನಾನದ ಮನೆಯಲ್ಲಿ ಆಕಾಶ್ ಬೆನ್ನು ಉಜ್ಜಿದ ಪುಷ್ಪಾ; ಅಮ್ಮ ಎಂದೇ ನಂಬಿದ್ದ ಆಕಾಶ್ ಕಕ್ಕಾಬಿಕ್ಕಿ!

ನಟಿಯಾಗಿ ಲೀಲಾವತಿಯವರು ಎರಡು ರಾಷ್ಟ್ರೀಯ ಪ್ರಶಸ್ತಿ, 6 ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಲವಾರು ಸಂಘ-ಸಂಸ್ಥೆಗಳಿಂದ ಅವರಿಗೆ ನೂರಾರು ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಆದರೆ, ಸ್ಟಾರ್ ನಟಿಯಾಗಿದ್ದ ಕಾಲದಲ್ಲೇ ಅವರು ಸ್ವತಃ ಮೈಕೈಗೆ ಮಣ್ಣು ತಾಗಿಸಿಕೊಂಡು ಕೃಷಿ ಮಾಡುತ್ತಿದ್ದರೂ ಅವರು ಮಾಡುತ್ತಿರುವ ಕೃಷಿ ವೃತ್ತಿಗೆ, ನಿನ್ನೆ ನಟಿ ಲೀಲಾವತಿಯವರು ಸಾಯುವವರೆಗೂ ಯಾವ ಪ್ರಶಸ್ತಿಯೂ ಸಿಗಲೇ ಇಲ್ಲ. ರೈತರೇ ಇಂದು ಕೃಷಿಯನ್ನು ಮಾಡಲು ಹಿಂದೆಮುಂದೆ ಯೋಚಿಸುತ್ತಿರುವ ಕಾಲದಲ್ಲಿ ನಟಿಯಾಗಿ ಲೀಲಾವತಿ ಕೃಷಿ ಮಾಡಿ ಸಮಾಜಕ್ಕೇ ಮಾದರಿಯಾಗಿದ್ದಾರೆ. 

Follow Us:
Download App:
  • android
  • ios