ಉಪೇಂದ್ರ ನಿರ್ದೇಶನದ 'UI' ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದು ಮೊದಲ ದಿನ 10 ಕೋಟಿ ಗಳಿಸಿದೆ. ಆದರೆ, ಚಿತ್ರ Movierulez, Tamilrockers ಮತ್ತು ಇತರ ಪೈರಸಿ ವೆಬ್‌ಸೈಟ್‌ಗಳಲ್ಲಿ ಲೀಕ್ ಆಗಿ, ಚಿತ್ರತಂಡಕ್ಕೆ ಆತಂಕ ತಂದಿದೆ. ಚಿತ್ರದ ವಿಶಿಷ್ಟ ಶೀರ್ಷಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಡಿಸೆಂಬರ್ 20 ರಂದು ಬಿಡುಗಡೆಯಾದ ರಿಯಲ್‌ ಸ್ಟಾರ್‌ ಉಪೇಂದ್ರ ಅವರ UI ಚಿತ್ರ ಹಿಟ್‌ ಆಗಿದೆ. ಮೊದಲ ದಿನ ಕನ್ನಡದಲ್ಲಿ 6.70 ಕೋಟಿ ಗಳಿಕೆ ಮಾಡಿದೆ. ಬೇರೆ ಭಾಷೆಗಳು ಸೇರಿದ್ರೆ 10 ಕೋಟಿ ಎಂದು ಹೇಳಲಾಗುತ್ತಿದೆ. ಒಳ್ಳೆಯ ಗಳಿಕೆ ಬರುತ್ತಿರುವಾಗಲೇ ಈಗ ಚಿತ್ರತಂಡಕ್ಕೆ ಸಂಕಟ ಎದುರಾಗಿದೆ.

ಭಾರೀ ನಿರೀಕ್ಷೆಗಳ ನಡುವೆ ತೆರೆಕಂಡಿರುವ ಯುಐ ಸಿನೆಮಾ ಈಗ ಆನ್‌ಲೈನ್‌ ನಲ್ಲಿ ಲೀಕ್ ಆಗಿದೆ. UI ಪೈರಸಿ ವೆಬ್‌ಸೈಟ್‌ಗಳಾದ Movierulez, Tamilrockerz, Filmyzilla, ಮೂವೀಸ್ಡಾ, ತಮಿಳ್‌ಬ್ಲಾಸ್ಟರ್ಸ್, ತಮಿಳ್‌ಯೋಗಿ, ಐಬೊಮ್ಮ ಮತ್ತು ಕೆಲವು ಇತರ ಟೆಲಿಗ್ರಾಮ್ ಚಾನಲ್‌ಗಳು ಸೇರಿದಂತೆ ಅನೇಕ ವೆಬ್‌ಸೈಟ್‌ಗಳಲ್ಲಿ ವಿಶೇಷವಾಗಿ 1080p, 720p, 480p ನಲ್ಲಿ ಲೀಕ್‌ ಆಗಿದೆ ಎಂದು ವರದಿ ತಿಳಿಸಿದೆ.

ಮದುವೆಯಾದ ಬೆನ್ನಲ್ಲೇ ಭಾರಿ ಪ್ರಮಾಣದಲ್ಲಿ ಸಂಭಾವನೆ ಏರಿಸಿದ ಕೀರ್ತಿ ಸುರೇಶ್

ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿರುವುದರಿಂದ ಚಿತ್ರದ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. UI ಅದರ ವಿಶಿಷ್ಟ ಕಥಾವಸ್ತುವಿನ ಕಾರಣದಿಂದಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಧನಾತ್ಮಕ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಆದರೆ ಈಗ ಪೈರೆಸಿ ವೈರಸ್‌ ಒಕ್ಕರಿಸಿರುವುದರಿಂದ ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಚಿತ್ರದ ಇಂಟ್ರೊ ಟೈಟಲ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೊದಲನೆಯದು, "ನೀವು ಬುದ್ಧಿವಂತರಾಗಿದ್ದರೆ, ಈಗಲೇ ಥಿಯೇಟರ್‌ನಿಂದ ಹೊರಬನ್ನಿ" ಎಂಬುದು ಕಾಣಿಸುತ್ತಿದೆ. ಇತರರು "ನೀವು ಮೂರ್ಖರಾಗಿದ್ದರೆ, ಇಡೀ ಚಲನಚಿತ್ರವನ್ನು ನೋಡಿ," ಮತ್ತು "ಬುದ್ಧಿವಂತರು ಮೂರ್ಖರಂತೆ ಕಾಣುತ್ತಾರೆ; ಮೂರ್ಖರು ಬುದ್ಧಿವಂತ ಜನರಂತೆ ನಟಿಸುತ್ತಾರೆ" ಎಂಬುದು ಕಾಣಿಸುತ್ತಿದೆ. 

ಈ ದಿನಾಂಕಗಳಲ್ಲಿ ಹುಟ್ಟಿದ ಹುಡುಗಿಯರು ಬಹಳ ಬುದ್ಧಿವಂತರಾಗಿರುತ್ತಾರೆ

ಕನ್ನಡದಲ್ಲಿ ಮಾತ್ರವೇ ಅಲ್ಲದೆ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿಯೂ ಸಹ ‘ಯುಐ’ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ವಿಶೇಷವೆಂದರೆ 'ಯುಐ' ಸಿನಿಮಾ ಉಪೇಂದ್ರ ನಟಿಸಿ, 10ವರ್ಷಗಳ ಬಳಿಕ ನಿರ್ದೇಶನ ಸಹ ಮಾಡಿದ್ದಾರೆ. ಈ ಸಿನಿಮಾ ಕೇವಲ ದಡ್ಡರಿಗೆ ಮಾತ್ರ ಎಂಬ ಅಡಿಪಟ್ಟಿಯನ್ನೂ ಸಹ ಉಪೇಂದ್ರ ನೀಡಿದ್ದಾರೆ. ಸಿನಿಮಾಕ್ಕೆ ಲಹರಿ ವೇಲು ಮತ್ತು ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದು, ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.