Asianet Suvarna News Asianet Suvarna News

Shriya Saran: ಉಪ್ಪಿ-ಕಿಚ್ಚ ಚಿತ್ರದಲ್ಲಿ ರಾಣಿಯಾದ ಬಹುಭಾಷಾ ತಾರೆ!

ಆರ್‌.ಚಂದ್ರು ನಿರ್ದೇಶನದ, ಉಪೇಂದ್ರ ಹಾಗೂ ಸುದೀಪ್‌ ಕಾಂಬಿನೇಶನ್‌ನ 'ಕಬ್ಜ' ಚಿತ್ರದ ಇಬ್ಬರು ನಾಯಕಿಯರ ಪೈಕಿ ಒಬ್ಬರ ಆಗಮನವಾಗಿದೆ. ಮಧುಮತಿ ಪಾತ್ರದ ಮೂಲಕ ಕನ್ನಡಕ್ಕೆ ಆಗಮಿಸಿರುವುದು ಖ್ಯಾತ ನಟಿ ಶ್ರೀಯಾ ಶರಣ್‌.

Shriya Saran Selected as Heroine to Upendra and Kichcha Sudeep Starrer Kabza Film gvd
Author
Bangalore, First Published Mar 9, 2022, 11:32 AM IST

ಆರ್‌.ಚಂದ್ರು (R Chandru) ನಿರ್ದೇಶನದ, ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Kichcha Sudeep) ಕಾಂಬಿನೇಶನ್‌ನ 'ಕಬ್ಜ' (Kabza) ಚಿತ್ರದ ಇಬ್ಬರು ನಾಯಕಿಯರ ಪೈಕಿ ಒಬ್ಬರ ಆಗಮನವಾಗಿದೆ. ಮಧುಮತಿ ಪಾತ್ರದ ಮೂಲಕ ಕನ್ನಡಕ್ಕೆ ಆಗಮಿಸಿರುವುದು ಖ್ಯಾತ ನಟಿ ಶ್ರೀಯಾ ಶರಣ್‌ (Shriya Saran). ತುಂಬಾ ದಿನಗಳ ನಂತರ ಚಿತ್ರರಂಗಕ್ಕೆ ಮರಳಿರುವ ಶ್ರೀಯಾ ಅವರ ಮುಂದೆ 'ಕಬ್ಜ'. 'ಆರ್‌ಆರ್‌ಆರ್‌' (RRR) ಸೇರಿ ಅಜಯ್‌ ದೇವಗನ್‌ (Ajay Devgn) ನಟಿಸುತ್ತಿರುವ ಹಿಂದಿ ಚಿತ್ರ ಕೂಡ ಇದೆ.

'ನಮ್ಮ ಕಬ್ಜ ಚಿತ್ರದಲ್ಲಿ ಇಬ್ಬರು ನಾಯಕಿಯರು ಇದ್ದಾರೆ. ಪ್ಯಾನ್‌ ಇಂಡಿಯಾ ನಟಿಯನ್ನೇ ಕನ್ನಡಕ್ಕೆ ಕರೆದುಕೊಂಡು ಬಂದಿದ್ದೇನೆ. ಶ್ರೀಯಾ ಶರಣ್‌ ಚಿತ್ರದ ಕತೆ ಕೇಳಿ ಥ್ರಿಲ್ಲಾಗಿ ಈ ಚಿತ್ರ ಒಪ್ಪಿಕೊಂಡಿದ್ದಾರೆ. ರಾಣಿಯಾಗಿ ಸ್ಯಾಂಡಲ್‌ವುಡ್‌ಗೆ ಲ್ಯಾಂಡ್‌ ಆಗಿರುವ ಇವರ ಫಸ್ಟ್‌ಲುಕ್‌ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ದೊಡ್ಡ ಸಿನಿಮಾ. ಹೀಗಾಗಿ ತುಂಬಾ ಸಮಯ ಹಿಡಿಯುತ್ತಿದೆ. ಸತತವಾಗಿ ಎರಡು ವರ್ಷಗಳಿಂದ ಚಿತ್ರೀಕರಣ ನಡೆಯುತ್ತಿದೆ. ಈಗ ಕೊನೆಯ ಹಂತಕ್ಕೆ ಬಂದಿದ್ದೇವೆ. ಏಳು ಭಾಷೆಗಳಿಗೆ ಕನ್ನಡ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸುತ್ತಿದ್ದೇನೆಂಬ ಹೆಮ್ಮೆ ನನಗೆ ಇದೆ' ಎನ್ನುತ್ತಾರೆ ಆರ್‌ ಚಂದ್ರು. ರವಿ ಬಸ್ರೂರು ಸಂಗೀತ, ಶಿವಕುಮಾರ್‌ ಕಲಾ ನಿರ್ದೇಶನ ಇದೆ.

ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ನಟಿಸಿರುವ ಶ್ರೀಯಾ ಬಹಳ ದಿನಗಳ ಬಳಿಕ ಕನ್ನಡಕ್ಕೆ ಹಿಂತಿರುಗಿರುವ ಅವರು, ಕಬ್ಜ ಸಿನಿಮಾದ ಕಥೆ ಕೇಳಿ ಸಂತೋಷದಿಂದ ಈ ಪ್ರಾಜೆಕ್ಟ್‌ಗೆ ಸೈನ್‌ ಮಾಡಿದ್ದಾರೆ. ಅವರ ಫಸ್ಟ್‌ಲುಕ್‌ ಇದೀಗ ರಿವೀಲ್‌ ಆಗಿದ್ದು, ಉಪ್ಪಿಗೆ ಶ್ರೀಯಾ ತಕ್ಕ ಜೋಡಿ ಎಂಬುದು ಪ್ರೇಕ್ಷಕರ ಅನಿಸಿಕೆ. 'ಕೆಜಿಎಫ್‌' ಸಿನಿಮಾದ ಬಳಿಕ ಕಬ್ಜ ಬೇರೆ ಬೇರೆ ಚಿತ್ರರಂಗದಲ್ಲಿ ಸಾಕಷ್ಟು ಕ್ರೇಜ್‌ ಕ್ರಿಯೇಟ್‌ ಆಗಿದೆ. ಮುಂಬೈನಲ್ಲಿ ಬಹುಬೇಡಿಕೆಯಿರುವ ಈ ಚಿತ್ರ ಕನ್ನಡದ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಹೆಗ್ಗಳಿಕೆ. ಮತ್ತಷ್ಟು ಕನ್ನಡದ ತಂಡ ಇದೇ ರೀತಿ ಮಿಂಚಲಿ ಎಂಬುದು ಸಿನಿಪಂಡಿತರ ಅನಿಸಿಕೆ.

Kichcha Sudeep: ಕಬ್ಜ ಚಿತ್ರದ ರೆಟ್ರೋ​ ಲುಕ್‌ ರಿವೀಲ್​ ಮಾಡಿದ ಅಭಿನಯ ಚಕ್ರವರ್ತಿ

ಪ್ಯಾನ್‌ ಇಂಡಿಯಾ ಸಿನಿಮಾ ಎಂದಮೇಲೆ ಸಾಕಷ್ಟು ಸಮಯ ತೆಗೆದುಕೊಳ್ಳೋದು ಸರ್ವೇ ಸಾಮಾನ್ಯ. ಇದೀಗ ಬಿಡುಗಡೆಗೆ ಸಿದ್ಧವಿರುವ 'ಆರ್‌ಆರ್‌ಆರ್‌' ಬರೋಬ್ಬರಿ ನಾಲ್ಕು ವರ್ಷಗಳ ಕಾಲ ತೆಗೆದುಕೊಂಡಿದೆ. ಹಾಗೆಯೇ 'ಕೆಜಿಎಫ್‌' (KGF) ಮೂರು ವರ್ಷಗಳ ಸಮಯ ತೆಗೆದುಕೊಂಡಿದೆ. ಕಬ್ಜ ಕೂಡ ಸತತ ಎರಡು ವರ್ಷಗಳಿಂದ ಶೂಟಿಂಗ್‌ ನಡೆಸುತ್ತಿದ್ದು, ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಇತ್ತೀಚೆಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ (Shivarajkumar) ಸಹ ಸಿನಿಮಾ ಬೇಗ ರಿಲೀಸ್‌ ಮಾಡುವಂತೆ ಒತ್ತಾಯಿಸಿದ್ದರು.

Shriya Saran Selected as Heroine to Upendra and Kichcha Sudeep Starrer Kabza Film gvd

ಇದೇ ಮೊದಲ ಬಾರಿಗೆ ಏಳು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ 'ಕಬ್ಜ' ಎಂಬುದು ಒಂದೆಡೆಯಾದರೆ, ಅದ್ದೂರಿ ತಾರಾಬಳಗ ಹಾಗೂ ಬೃಹತ್‌ ಸೆಟ್‌ಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗುತ್ತಿದೆ. ರವಿ ಬಸ್ರೂರು ಸಂಗೀತ, ಶಿವಕುಮಾರ್‌ ಕಲಾ ನಿರ್ದೇಶನ ಸೇರಿದಂತೆ ಬಹುತೇಕ 'ಕೆಜಿಎಫ್‌' ತಾಂತ್ರಿಕ ಬಳಗವೇ ಈ ಚಿತ್ರದಲ್ಲೂ ಮುಂದುವರೆದಿದೆ ಎಂಬುದು 'ಕಬ್ಜ' ಹೆಚ್ವುಗಾರಿಕೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ 'ಕಬ್ಜ' ಕೊನೆಯ ಹಂತದ ಚಿತ್ರೀಕರಣ ನಡೆಸುತ್ತಿದೆ. 

ಎಂ.ಟಿ.ಬಿ ನಾಗರಾಜ್ (M.T.B.Nagaraj) ಅರ್ಪಿಸುವ ಈ ಚಿತ್ರವು ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. 'ಕಬ್ಜ' ಚಿತ್ರಕ್ಕೆ 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರು (Ravi  Basrur) ಸಂಗೀತ ಸಂಯೋಜನೆಯಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಕ್ಯಾಮೆರಾ ಕೈಚಳಕ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್, ಪೀಟರ್ ಹೆನ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. 

Upendra: 'ಕಬ್ಜ' ಚಿತ್ರದ ಟೀಸರ್ ಲಾಂಚ್ ಮುಂದೂಡಿದ ನಿರ್ದೇಶಕ ಆರ್.ಚಂದ್ರು

'ಕಬ್ಜ' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ಬಾಲಿವುಡ್‌ನ ಖ್ಯಾತ ನಟ ನವಾಬ್‌ ಶಾ (Nawab Shah) ಇತ್ತೀಚೆಗೆ ಸಿನಿಮಾ ಸೆಟ್‌ಗೆ ಎಂಟ್ರಿ ಕೊಟ್ಟಿದ್ದರು. ತಮಿಳಿನ 'ಐ' (I) ಚಿತ್ರದ ಖ್ಯಾತಿಯ ಕಾಮರಾಜನ್‌ (Kamarajan), ಟಾಲಿವುಡ್‌ ವಿಲನ್ ಜಗಪತಿ ಬಾಬು (Jagapati Babu), ರಾಹುಲ್‌ ದೇವ್‌, ಸುನಿಲ್‌ ಪುರಾಣಿಕ್‌, ಲಕ್ಷ್ಮೀಶ ಲಕ್ಷ್ಮಣ್‌ (ಲಕ್ಕಿ ಲಕ್ಷ್ಮಣ್‌),  ಪ್ರಮೋದ್‌ ಶೆಟ್ಟಿ, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 1947-1986 ನಡುವಿನ ಕಾಲಘಟ್ಟದ ಭೂಗತಲೋಕದ ಅಧ್ಯಾಯವನ್ನು 'ಕಬ್ಜ' ಚಿತ್ರ ತೆರೆದಿಡಲಿದೆ.
 

Follow Us:
Download App:
  • android
  • ios