ಇಪ್ಪತ್ತೈದು ವರ್ಷಗಳ ಬಳಿಕ ಮತ್ತೆ ಬಂದ 'ನಾನು'..; ಉಪೇಂದ್ರ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ?
ಉಪೇಂದ್ರ ಚಿತ್ರ ಮತ್ತೆ ಬಿಡುಗಡೆಯಾಗಿದೆ. 'ನಾನು' ಜೊತೆ ಮೂರು ಸ್ತ್ರೀಯರು ಆಟ ಆಡುತ್ತಾರೆ. ಅಥವಾ, ನಾನು ಈ ಮೂವರು ಸ್ತ್ರೀಯರ ಜೊತೆ ಆಟ ಆಡುತ್ತಾರೆ. ಸ್ವಾತಿ, ರತಿ ಮತ್ತು ಕೀರ್ತಿ ಈ ಮೂವರು ನಾನು ಎಂಬ ವ್ಯಕ್ತಿಯೊಬ್ಬನ ಜೀವನದಲ್ಲಿ ಬರುತ್ತಾರೆ, ನಾನು ಜೀವನದಲ್ಲಿ ಹೇಗೆ ಆಟ ಆಡುತ್ತಾರೆ?
ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ನಿರ್ದೇಶಿಸಿ ನಟಿಸಿರುವ 'ಉಪೇಂದ್ರ' ಸಿನಿಮಾ 1999ರಲ್ಲಿ (22 October 1999) ಬಿಡುಗಡೆ ಕಂಡಿತ್ತು. ಹೆಚ್ಚೇನೂ ಬಜೆಟ್ ಖಾಲಿ ಮಾಡದ ಈ ಚಿತ್ರವು ಬರೋಬ್ಬರಿ 10 ಕೋಟಿ ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ. ಈ ಚಿತ್ರದಲ್ಲಿ ಉಪೇಂದ್ರ ಜೊತೆ ನಟಿಯರಾದ ಪ್ರೇಮಾ, ರವೀನಾ ಟಂಡನ್ ಹಾಗೂ ದಾಮಿನಿ ನಟಿಸಿದ್ದರು. ಇದೀಗ ಈ ಚಿತ್ರವು 25 ವರ್ಷಗಳ ಬಳಿಕ ಮತ್ತೆ ಬಿಡುಗಡೆ ಕಂಡಿದೆ.
ಹೌದು, ಇಪ್ಪತೈದು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಉಪೇಂದ್ರ ಅವರ 'ಉಪೇಂದ್ರ' ಚಿತ್ರವು ರೀ-ರಿಲೀಸ್ ಆಗಿದ್ದು ಮತ್ತೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರವು ಅಂದು ಸೂಪರ್ ಹಿಟ್ ದಾಖಲಿಸಿದ್ದೂ ಅಲ್ಲದೇ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿತ್ತು. 'ನಾನು' ಎಂಬ ಪಾತ್ರವನ್ನು ಸೃಷ್ಟಿಸಿ ಅದು 'ನಮ್ಮ ಅಹಂ' ಎಂದಿರುವ ಉಪೇಂದ್ರ ಅವರು, ಅದು ಪ್ರತಿಯೊಬ್ಬರಲ್ಲೂ ಇರುತ್ತದೆ ಎಂಬುದನ್ನು ವಿಭಿನ್ನವಾಗಿ ನಿರೂಪಿಸಿದ್ದರು. ಅಂದು ಈ ಚಿತ್ರವು ತೀರಾ ವಿಶೇಷ ಹಾಗೂ ವಿಭಿನ್ನ ಚಿತ್ರ ಎಂದು ಖ್ಯಾತಿ ಪಡೆದಿತ್ತು.
ಬಿಡುಗಡೆಯಾಯ್ತು 'ಕರ್ಕಿ' ಹಾಡು, ಮತ್ತೊಂದು ಮಣ್ಣಿನ ಸೊಗಡಿನ ಚಿತ್ರಕ್ಕೆ ಕೌಂಟ್ ಡೌನ್!
ನಾನು ಜೊತೆ ಮೂರು ಸ್ತ್ರೀಯರು ಆಟ ಆಡುತ್ತಾರೆ. ಅಥವಾ, ನಾನು ಈ ಮೂವರು ಸ್ತ್ರೀಯರ ಜೊತೆ ಆಟ ಆಡುತ್ತಾರೆ. ಸ್ವಾತಿ, ರತಿ ಮತ್ತು ಕೀರ್ತಿ ಈ ಮೂವರು ನಾನು ಎಂಬ ವ್ಯಕ್ತಿಯೊಬ್ಬನ ಜೀವನದಲ್ಲಿ ಬರುತ್ತಾರೆ. ಅವರು ನಾನು ಜೀವನದಲ್ಲಿ ಹೇಗೆ ಆಟ ಆಡುತ್ತಾರೆ? ಅಥವಾ ನಾನು ಜೀವನ ಅವರ ಎಂಟ್ರಿಯಿಂದ ಹೇಗೆಲ್ಲಾ ಬದಲಾವಣೆಗೆ ಒಳಗಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ನಟ-ನಿರ್ದೇಶಕ ಉಪೇಂದ್ರ ಅವರು ಮನಮುಟ್ಟುವಂತೆ ನಿರ್ದೇಶಿಸಿದ್ದಾರೆ. ನಾನು ಎನ್ನುವುದು ಸತ್ಯವನ್ನು ಹೇಳುವ ಪಾತ್ರವೆಂದು ಈ ಚಿತ್ರದಲ್ಲಿ ಉಪ್ಪಿಯವರು ಬಿಂಬಿಸಿದ್ದಾರೆ.
ಒಟ್ಟಿನಲ್ಲಿ, ರಿಯಲ್ ಸ್ಟಾರ್ ಉಪೇಂದ್ರ ಅವರು 25 ವರ್ಷಗಳ ಹಿಂದೆ ನಟಿಸಿ-ನಿರ್ದೇಶಿಸಿದ್ದ ಉಪೇಂದ್ರ ಚಿತ್ರವು ಅಂದು ಯುವ ಸಮೂಹವನ್ನು ಹುಚ್ಚೆಬ್ಬಿಸಿತ್ತು. ಟ್ರೆಂಡ್ ಸೆಟ್ಟರ್ ಎನಿಸಿಕೊಂಡಿದ್ದ ಉಪೇಂದ್ರ ಚಿತ್ರವು ಮತ್ತೆ ರೀ-ರಿಲೀಸ್ ಮೂಲಕ ಇಂದಿನ ಯುವ ಸಮೂಹವನ್ನು ರೀಚ್ ಆಗಲಿದೆ. ಈಗ ಈ ಚಿತ್ರದ ಬಗ್ಗೆ, ನಾನು ಪಾತ್ರ ಹಾಗೂ ಅಲ್ಲಿ ಹೇಳಿರುವ ಸಂಭಾಷಣೆ ಬಗ್ಗೆ ಇಂದಿನ ಯುವ ಸಮೂಹದ ಅಭಿಪ್ರಾಯ ಏನಿದೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.
ಕಾಲಾಪತ್ಥರ್ ಚಿತ್ರ ವಿಮರ್ಶೆ: ಅಹಂಕಾರದ ಅಂತರ್ಯದ್ಧದಲ್ಲಿ ದಡ ಸೇರಲು ಅಣ್ಣಾವ್ರೇ ದೇವ್ರು..!
ಅಂದಹಾಗೆ, ಈ ಚಿತ್ರದ ಬಿಡುಗಡೆ ವೇಳೆ ಉಪೇಂದ್ರ ಚಿತ್ರದ ನಟ-ನಿರ್ದೇಶಕ ಉಪೇಂದ್ರ ಅವರು ಹೀಗೆ ಬರೆದು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ಗಳಲ್ಲಿ ಪೋಸ್ಟ್ ಮಾಡಿದ್ದಾರೆ- ನಾನು 'ನಾನು' ಬಿಡಕ್ ಟ್ರೈ ಮಾಡ್ತಿದೀನಿ ….। ಆದ್ರೆ ನೀನು… 'ನಾನು'ನ ಬಿಡ್ತಿಲ್ಲ.. ನಿಮ್ಮ 'ನಾನು' ರೀ ರಿಲೀಸ್ …ಇದೇ ಸೆಪ್ಟೆಂಬರ್ 20 ಕ್ಕೆ …25 ವರ್ಷ ಆದರೂ ಇನ್ನೂ ಈ ಚಿತ್ರದ ಹಾಡು, ಸಂಭಾಷಣೆ ಜೀವಂತವಾಗಿ ಇಟ್ಟಿರುವ ನಿಮಗೆ 🙏❤️🙏.