Asianet Suvarna News Asianet Suvarna News

'ಮಲೆನಾಡ ಗೊಂಬೆ'ಗೆ ಮನಸೋತ ಮನೆಹಾಳನಿಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್..!

'ಕೆರೆಬೇಟೆ' ನಿರ್ದೇಶಕ ರಾಜ್ ಗುರು ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ. ನಾಯಕ ಗೌರಿಶಂಕರ್ ಮತ್ತು ನಾಯಕಿ ಬಿಂಧು ಶಿವರಾಮ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದ ರೋಮ್ಯಾಂಟಿಕ್ ಹಾಡು ಇದಾಗಿದೆ.

Real star Upendra Launches Raj Guru direction Kerebete movie song Malenada Gombe srb
Author
First Published Feb 3, 2024, 6:29 PM IST

'ಕೆರೆಬೇಟೆ' ಸ್ಯಾಂಡಲ್‌ವುನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಿನಿಮಾ. ಈಗಾಗಲೇ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಕೆರೆಬೇಟೆ ಇದೀಗ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಅದ್ದೂರಿಯಾಗಿ ಟೀಸರ್ ರಿಲೀಸ್ ಮಾಡಿದ್ದ ಸಿನಿಮಾ ತಂಡ ಇದೀಗ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ರಿಲೀಸ್ ಮಾಡಿದ್ದಾರೆ.

'ಮಲೆನಾಡ ಬೊಂಬೆ' ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಅದ್ಭುತವಾದ ಹಾಡು ನೋಡಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಫಿದಾ ಆಗಿದ್ದಾರೆ. ಮಲೆನಾಡಿನ ಸುತ್ತಮುತ್ತವೇ ಈ ಹಾಡಿನ ಚಿತ್ರೀಕರಣ ಮಾಡಿರುವುದು ವಿಶೇಷ.

ಜಿಯೋ ಸಿನಿಮಾದಲ್ಲಿ ಸುದೀಪ್ 'ಕರ್ನಾಟಕ ಬುಲ್ಡೋಜರ್ಸ್' & ಸಲ್ಮಾನ್ ಖಾನ್ 'ಮುಂಬೈ ಹೀರೋಸ್' ಸಿಸಿಎಲ್‌ 10 ಲೈವ್!

'ಕೆರೆಬೇಟೆ' ನಿರ್ದೇಶಕ ರಾಜ್ ಗುರು ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ. ನಾಯಕ ಗೌರಿಶಂಕರ್ ಮತ್ತು ನಾಯಕಿ ಬಿಂಧು ಶಿವರಾಮ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಿನಿಮಾದ ರೋಮ್ಯಾಂಟಿಕ್ ಹಾಡು ಇದಾಗಿದೆ. ಅಂದಹಾಗೆ ಈ ಸುಂದರ ಹಾಡಿಗೆ 'ಕಾಂತಾರ' ಸಿನಿಮಾದ 'ಸಿಂಗಾರ ಸಿರಿಯೇ...' ಹಾಡಿನ ಖ್ಯಾತಿಯ ಪ್ರಮೋದ್ ಮರುವಂತೆ ಸಾಹಿತ್ಯ ರಚಿಸಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸುಂದರ ಹಾಡಿಗೆ ಸಾಯಿ ವಿಘ್ನೇಶ್ ಮತ್ತು ಐಶ್ವರ್ಯ ರಂಗರಾಜನ್ ಹಾಡಿದ್ದಾರೆ.

ಇದು ಚೀಲದ ವಿಚಾರ ಅಲ್ಲ, ಶೀಲದ ವಿಚಾರ; ಶೃತಿ ಹರಿಹರನ್ ವಿರುದ್ದ ಗುಡುಗಿದ 'ಮಠ' ಗುರುಪ್ರಸಾದ್

ಈ ಹಾಡಿನ ಚಿತ್ರೀಕರಣದ ಅನುಭವ ತೆರೆದಿಟ್ಟ ಸಿನಿಮಾ ತಂಡ. 'ಈ ಹಾಡನ್ನು ತುಂಬಾ ಕಷ್ಟಪಟ್ಟು ಚಿತ್ರೀಕರಣ ಮಾಡಿದ್ದೇವೆ. ಅತಿಯಾದ ಮಳೆಯಿಂದ ಅನೇಕ ಬಾರಿ ಚಿತ್ರಿಕರಣ ನಿಲ್ಲಿಸಲಾಗಿತ್ತು. ಮನುಷ್ಯರೇ ಓಡಾಡದೇ ಇರುವ ಜಾಗದಲ್ಲಿ ಶೂಟಿಂಗ್ ಮಾಡಿದ್ದೇವೆ. ಪ್ರಾಣಿಗಳ ಭಯ ಕೂಡ ಇತ್ತು. ಮಲೆನಾಡಿನ ತುಂಬಾ ರಿಮೋಟ್ ಏರಿಯಾದಲ್ಲಿ ನಾಲ್ಕು ದಿನಗಳ ಕಾಲ ಈ ಹಾಡನ್ನು ಸೆರೆಹಿಡಿದಿದ್ದೇವೆ. ಈ ಹಾಡಿಗಾಗಿ ಹರಸಾಹಸ ಪಟ್ಟಿದ್ದೇವೆ' ಎನ್ನುತ್ತಾರೆ.

ಹಂಪಿ ಉತ್ಸವದಲ್ಲಿ ಡಾನ್ಸ್ ಮಾಡ್ತಾರೆ 'ಶೇಕ್ ಇಟ್ ಪುಷ್ಪಾವತಿ' ನಟಿ ನಿಮಿಕಾ ರತ್ನಾಕರ್..!

ಸದ್ಯ ರಿಲೀಸ್ ಗೆ ಸಿದ್ಧವಾಗಿರುವ 'ಕೆರೆಬೇಟೆ' ಸಿನಿಮಾ ಇದೀಗ ಹಾಡಿನ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಇದಾಗಿದ್ದು ಮುಂದಿನ ತಿಂಗಳು ಅಂದರೆ ಮಾರ್ಚ್ 15ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಜನಮನ ಸಿನಿಮಾ ಸಂಸ್ಥೆಯಲ್ಲಿ ಮೂಡಿ ಬಂದಿರುವ ಕೆರಬೇಟೆ ಸಿನಿಮಾ ಹೀಗಿರಲಿದೆ, ಮಲೆನಾಡಿನ ಮೀನು ಬೇಟೆಯ ಸಂಸ್ಕೃತಿ ಹೇಗೆ ಮೂಡಿ ಬಂದಿದೆ ಎಂದು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

ಹೊಟೆಲ್ ಭಟ್ಟ ಸುಬ್ಬಣ್ಣನಾದ್ರು ರಂಗಾಯಣ ರಘು; ಮಲೆನಾಡಿನ ಹಳ್ಳಿಯಲ್ಲಿ ಸಾಗುವ 'ಶಾಖಾಹಾರಿ' ಕಥೆ !

Follow Us:
Download App:
  • android
  • ios