Asianet Suvarna News Asianet Suvarna News

ಇದು ಚೀಲದ ವಿಚಾರ ಅಲ್ಲ, ಶೀಲದ ವಿಚಾರ; ಶೃತಿ ಹರಿಹರನ್ ವಿರುದ್ದ ಗುಡುಗಿದ 'ಮಠ' ಗುರುಪ್ರಸಾದ್

'ನಾನು ಪತೀವ್ರತೆ ಅಂತ ಫ್ರೂ ಮಾಡೊಕೆ ಆಯಮ್ಮ ಹೊರಟಿದ್ರು. ಮೀಟೂನೂ ಇಲ್ಲ ಯಾವುದೂ ಇಲ್ಲ ಸ್ವಾಮಿ ಕಿರುಕುಳ ಆದಾಗ ದೂರು ನೀಡಬೇಕಿತ್ತು. ಆರು ವರ್ಷಗಳ ನಂತ್ರ ಬಂದು ದೂರು ನೀಡಿದ್ರೆ ಏನ್ ಪ್ರಯೋಜನ' ಎಂದು ಗುರುಪ್ರಸಾದ್ ಗುಡುಗಿದ್ದಾರೆ.

Mata fame director guruprasad talks about metoo controversy and Shruthi Hariharan srb
Author
First Published Feb 3, 2024, 1:27 PM IST

ನವರಸನಾಯಕ ಜಗ್ಗೇಶ್ ಅಭಿನಯದ 'ರಂಗನಾಯಕ' ಚಿತ್ರದ ಹಾಡಲ್ಲಿ ನಟಿಯರನ್ನು ಕಾಲೆಳೆದಿದ್ದಾರೆ ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಎಂಬ ವಿವಾದವೀಗ ಭುಗಿಲೆದ್ದಿದೆ. ಜಗ್ಗೇಶ್ ಬಾಯಲ್ಲಿ ಬಿಗ್ ಬಾಸ್ ಶ್ರುತಿ  Metoo ಶ್ರುತಿ ಹೆಸರು ಬಂದಿದೆ. ಅದಕ್ಕೆ ಕಾರಣ ಮಠ ಗುರುಪ್ರಸಾದ್ ಎನ್ನಲಾಗುತ್ತಿದೆ.  ನಟಿ ಶ್ರುತಿ ಹರಿಹರನ್ ಎಲ್ಲಿಂದಲೋ ಇಲ್ಲಿ ಬಂದು ಸುಮ್ಮನೇ ಈ ಉದ್ಯಮವನ್ನು ಗಬ್ಬೆಬ್ಬಿಸಿದ್ದಾರೆ ಎಂದಿದ್ದಾರೆ ಮಠ ಗುರುಪ್ರಸಾದ್.

ಹಾಗಿದ್ರೆ ಏನಾಗಿದೆ? ಮಠ ಗುರುಪ್ರಸಾದ್ ನಟಿಯರನ್ನ ಕತ್ತೆಗಳಿಗೆ ಹೋಲಿಸಿದ್ರಾ? ಡೈರೆಕ್ಟರ್ ಗುರುಪ್ರಸಾದ್ ಯಾಕೆ ಹೀಗೆ ಮಾಡಿದ್ರು? 'ಮೀ ಟೂ' ಘಾಟಿಗೆ ಮತ್ತೆ ಪೆಟ್ರೋಲ್ ಸುರಿದರಾ ನಿರ್ದೇಶಕ ಗುರುಪ್ರಸಾದ್.ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. 'ಗಾಳಿ ತಂಗಾಳಿ..'ಹಾಡಿನ ಮೂಲಕ ಬಿರುಗಾಳಿ ಎಬ್ಬಿಸಿ ಈಗ ಅದಕ್ಕೆ ಸ್ಪಷ್ಟೀಕರಣ ಕೂಡ ಕೊಟ್ಟಿದ್ದಾರೆ ಮಠ ನಿರ್ದೇಶಕ.ಗುರುಪ್ರಸಾದ್. 

ಜೀವಂತವಾಗಿದ್ದೂ ಸುಳ್ಳು ಹೇಳಿದ ಪೂನಂ ಪಾಂಡೆಗೆ ಛೀ ಥೂ ಎಂದು ಹಿಗ್ಗಾಮುಗ್ಗಾ ಉಗಿಯುತ್ತಿರುವ ನೆಟಿಜನ್ಸ್‌

ರಂಗನಾಯಕ ಜಗ್ಗೇಶ್ ಹಾಗು ಗುರುಪ್ರಸಾದ್ ಜೋಡಿಯ ಮುಂಬರುವ ಚಿತ್ರ. ಈ ಚಿತ್ರದ ಪ್ರಮೋಶನ್ ಕಾರ್ಯ ನಡೆಯುತ್ತಿದ್ದು, ನಿರ್ದೇಶಕ ಗುರುಪ್ರಸಾದ್ ಮಾಧ್ಯಮಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ. ಈ ವೇಳೆ 'ಶೃತಿ ಅನ್ನೋದು ಸಂಗೀತ ಭಾಷೆ ಅದ್ರು ನಾನು ಬೇಕಂತಲೇ ಆ ಸಾಹಿತ್ಯ ಬರೆದಿದ್ದೀನಿ' ಎಂದು ನಟಿ ಶೃತಿ ಹರಿಹರನ್ ವಿರುದ್ದ ಗುಡುಗಿದ್ದಾರೆ. ಈ ಬಗ್ಗೆ ಗುರುಪ್ರಸಾದ್ 'ನಟಿ ಶೃತಿ ಹರಿಹರನ್ ಕನ್ನಡದವರಲ್ಲ. ಎಲ್ಲಿಂದಲೋ ಬಂದು ಇಲ್ಲಿ ಗಬ್ಬೆಬ್ಬಿಸಿದ್ರು. 

ನಾನು ಪತೀವ್ರತೆ ಅಂತ ಫ್ರೂ ಮಾಡೊಕೆ ಆಯಮ್ಮ ಹೊರಟಿದ್ರು. ಮೀಟೂನೂ ಇಲ್ಲ ಯಾವುದೂ ಇಲ್ಲ ಸ್ವಾಮಿ ಕಿರುಕುಳ ಆದಾಗ ದೂರು ನೀಡಬೇಕಿತ್ತು. ಆರು ವರ್ಷಗಳ ನಂತ್ರ ಬಂದು ದೂರು ನೀಡಿದ್ರೆ ಏನ್ ಪ್ರಯೋಜನ?' ಎಂದು ಗುರುಪ್ರಸಾದ್ ಕೇಳಿದ್ದಾರೆ. ಒಟ್ಟಿನಲ್ಲಿ ಇದೀಗ ಸಿನಿಮಾ ಹಾಡಿನ ಮೂಲಕವೇ ಮೀಟೂ ನಟಿ ಶ್ರುತಿ ಹರಿಹರನ್ ವಿರುದ್ಧ ಗುಡುಗಿರುವ ಗುರುಪ್ರಸಾದ್ ತಮ್ಮ ಸಿನಿಮಾದಲ್ಲಿ ಏನೆಲ್ಲಾ ಹೇಳಿರಬಹುದು ಎಂಬ ಬಗ್ಗೆ ಚರ್ಚೆ ನಡೆಯತೊಡಗಿದೆ. ಏಕೆಂದರೆ, ಈ ಮೊದಲು ಬಂದಿದ್ದ ಮಠ ಚಿತ್ರದಲ್ಲಿ ನಿರ್ದೇಶಕ ಗುರುಪ್ರಸಾದ್ ಯಾವೆಲ್ಲಾ ವಿಷಯಗಳ ಬಗ್ಗೆ ಬೆಲಕು ಚೆಲ್ಲಿದ್ದರು ಎಂಬುದನ್ನು ಸ್ಯಾಂಡಲ್‌ವುಡ್ ಪ್ರೇಕ್ಷಕರು ನೋಡಿದ್ದಾರಲ್ಲಾ!

ಹೊಟೆಲ್ ಭಟ್ಟ ಸುಬ್ಬಣ್ಣನಾದ್ರು ರಂಗಾಯಣ ರಘು; ಮಲೆನಾಡಿನ ಹಳ್ಳಿಯಲ್ಲಿ ಸಾಗುವ 'ಶಾಖಾಹಾರಿ' ಕಥೆ !

'ಕೈಚೀಲ ಕಳ್ಕೊಂಡಾಗ ಕಂಪ್ಲೈಟ್  ಕೊಡದ ತಡವಾಗಿ ಕೊಟ್ರೆ ಏನ್ ಯೂಸ್? ಇದು ಚೀಲದ ವಿಚಾರ ಅಲ್ಲಾ ಶೀಲದ ವಿಚಾರ' ಅಂತ ಶೃತಿ ಹರಿಹರನ್ ವಿರುದ್ದ ಗುಡುಗಿದ ಗುರುಪ್ರಸಾದ್.ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರಾಕೇಶ್ ಬಿರಾದಾರ್ 'ಧೀರ ಸಾಮ್ರಾಟ್‌'ಗೆ ಡೈನಾಮಿಕ್ ಪ್ರಿನ್ಸ್‌ ಪ್ರಜ್ವಲ್ ದೇವರಾಜ್ ಸಾಥ್!

Follow Us:
Download App:
  • android
  • ios