ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಜನರು ಬರದೇ ಇರುವುದಕ್ಕೆ ಚಿತ್ರರಂಗದವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರವಿಚಂದ್ರನ್ ಅವರು, ಸಿನಿಮಾ ಚೆನ್ನಾಗಿದ್ದರೆ ಜನರು ಖಂಡಿತ ಬರುತ್ತಾರೆ ಎಂದಿದ್ದಾರೆ. ವಾರಕ್ಕೆ 40 ಸಿನಿಮಾಗಳು ಬಿಡುಗಡೆಯಾದರೆ ಜನರಿಗೆ ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ. ಚಿತ್ರರಂಗದವರೇ ದುಡ್ಡು ಕೊಟ್ಟು ಕನ್ನಡ ಸಿನಿಮಾ ನೋಡದಿದ್ದರೆ, ಜನರನ್ನು ದೂಷಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂದು ಚಿತ್ರಮಂದಿರಗಳಿಗೆ ಜನರು ಬರುತ್ತಿಲ್ಲ, ಅದರಲ್ಲಿಯೂ ಕನ್ನಡ ಸಿನಿಮಾಗಳು ಓಡುತ್ತಿಲ್ಲ, ಜನರು ಸಿನಿಮಾಗಳನ್ನೇ ನೋಡುತ್ತಿಲ್ಲ ಎಂದು ಇತ್ತೀಚಿನ ದಿನಗಳಲ್ಲಿ ಬಹುತೇಕ ನಟ-ನಟಿಯರು ಸೇರಿದಂತೆ ಚಿತ್ರರಂಗದಿಂದ ಕೇಳಿಬರುತ್ತಿರುವ ಮಾತೇ ಆಗಿದೆ. ಈಗೀಗ ಮನೆಯಲ್ಲಿ ಕುಳಿತೇ ಎಲ್ಲಾ ನೋಡುವ ಸೌಲಭ್ಯಗಳಿವೆ. ಟೆಕ್ನಾಲಜಿ ಹೆಚ್ಚಿದಂತೆ ಸಿನಿಮಾಗಳಿಗೆ ಹೋಗುವ ಪ್ರಮೇಯವೇ ಇಲ್ಲವಾಗಿದೆ. ಮನೆಯ ಬಾಗಿಲಿಗೇ ಸಿನಿಮಾ ಬರುತ್ತಿದೆ. ಇದು ಒಂದೆಡೆಯಾದರ ಹೊಸ ಹೊಸ ಸಿನಿಮಾಗಳು ಲೀಕ್​ ಆಗುವುದು, ಥಿಯೇಟರ್​ ಪ್ರಿಂಟ್​ನಲ್ಲಿಯೇ ವಿಡಿಯೋ ಮಾಡಿ ವೈರಲ್​ ಮಾಡುವುದು... ಹೀಗೆ ಏನೇನೋ ಸಮಸ್ಯೆಗಳನ್ನು ಇಡೀ ಚಿತ್ರರಂಗ ಎದುರಿಸುತ್ತಿರುವುದು ಸುಳ್ಳಲ್ಲ. ಇದೇ ಕಾರಣಕ್ಕೆ ಸಿನಿಮಾಗಳಿಗೆ ದುಡ್ಡು ಕೊಟ್ಟು ಹೋಗಿ ಗಂಟೆಗಟ್ಟಲೆ ಕ್ಯೂ ನಿಲ್ಲುವಷ್ಟು ಪೇಷೆನ್ಸ್ ಜನರಿಗೆ ಇಲ್ಲ, ಆದ್ದರಿಂದ ಚಿತ್ರಗಳು ಓಡುತ್ತಿಲ್ಲ ಎಂದು ಚಿತ್ರರಂಗದವರು ನೋವು ತೋಡಿಕೊಳ್ಳುತ್ತಲೇ ಇದ್ದಾರೆ. 

ಆದರೆ, ಕ್ರೇಜಿಸ್ಟಾರ್​ ರವಿಚಂದ್ರನ್​ ಹೇಳ್ತಿರೋದೇ ಬೇರೆ. ಹೀಗೆಲ್ಲಾ ಗೋಳೋ ಎನ್ನುವವರಿಗೆ ಚಾಟಿ ಬೀಸಿರುವ ನಟ, ಕನ್ನಡ ಸಿನಿಮಾ ಸೋಲ್ತಾ ಇರುವುದು ಯಾಕೆ? ಜನರು ಥಿಯೇಟರ್​ ಕಡೆ ಮುಖ ಮಾಡದೇ ಇರುವುದು ಏಕೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಭುವನಂ ಜಗನಂ ಚಿತ್ರದ ಲಾಂಚಿಂಗ್​ ವೇಳೆ ಮಾತನಾಡಿದ್ದಾರೆ ನಟ. ಈ ವಿಡಿಯೋ ಅನ್ನು ಎಫ್​ಡಿಎಫ್​ಎಸ್​ ಕನ್ನಡ ಯೂಟ್ಯೂಬ್​ ಚಾನೆಲ್​ನಲ್ಲಿ ಶೇರ್​ ಮಾಡಲಾಗಿದೆ. ಇದರಲ್ಲಿ ರವಿಚಂದ್ರನ್​ ಅವರು, ಸಿನಿಮಾ ಚೆನ್ನಾಗಿದ್ದರೆ ಜನರು ಬರುತ್ತಾರೆ. ಸಿನಿಮಾ ಚೆನ್ನಾಗಿದ್ದರೆ ನೂಕು ನುಗ್ಗಲು ಈಗಲೂ ಆಗುತ್ತೆ. ಅದಕ್ಕೆ ಸಾಕ್ಷಿನೇ ಪ್ರೇಮಲೋಕ. 100 ದಿನ ತಳ್ಳಿಕೊಂಡು ತಳ್ಳಿಕೊಂಡು 100ನೇ ದಿನ ಅದು ಸೂಪರ್​ಹಿಟ್​ ಆಯಿತು. ಸಿನಿಮಾ ಚೆನ್ನಾಗಿದ್ದಾಗ ಜನರು ಹುಡುಕಿಕೊಂಡು ಬಂದು ಸಿನಿಮಾ ನೋಡುತ್ತಾರೆ. ಅಂಥ ಸಿನಿಮಾಗಳನ್ನು ನಾವು ಕೊಡಬೇಕಷ್ಟೇ. ದಾಖಲೆ ಮಾಡಿರುವ ಎಷ್ಟೋ ಕನ್ನಡ ಸಿನಿಮಾಗಳು ಇವೆಯಲ್ಲ ಎಂದಿದ್ದಾರೆ.

ಪುಟಾಣಿ ಸಿಹಿ ಮುದ್ದಾಡಿ ತಮ್ಮ ಅಪ್ಪ-ಅಮ್ಮನನ್ನು ಸ್ಮರಿಸಿದ ರವಿಚಂದ್ರನ್​: ಪ್ರಶಸ್ತಿ ವೇದಿಕೆಯಲ್ಲಿ ಭಾವುಕ ಸನ್ನಿವೇಶ

ಸಿನಿಮಾ ಸೋಲುವುದಕ್ಕೆ ಇನ್ನೊಂದು ಕಾರಣ ಕೊಟ್ಟಿರುವ ರವಿಚಂದ್ರನ್​ ಅವರು, ವಾರಕ್ಕೆ ಏನಿಲ್ಲ ಎಂದರೂ 40 ಸಿನಿಮಾ ರಿಲೀಸ್​ ಆಗುತ್ತದೆ. ಟ್ರಾಫಿಕ್​ ಜ್ಯಾಂ ಸಿನಿಮಾದವರೇ ಮಾಡುತ್ತಿದ್ದೇವೆ. ವಾರದಲ್ಲಿ 40 ಸಿನಿಮಾ ಮಾಡಿ ಜನರಿಗೆ ಆರಿಸಿಕೋ ಎಂದ್ರೆ ಏನು ಆರಿಸಿಕೊಳ್ತಾರೆ ಎಂದು ನಟ ಪ್ರಶ್ನಿಸಿದ್ದಾರೆ. ಬೇರೆ ಭಾಷೆ ಓಡುತ್ತೆ ಅಂತೀರಾ, ಆ ಭಾಷೆಗಳ ಎಲ್ಲಾ ಸಿನಿಮಾಗಳು ಇಲ್ಲಿ ಬರಲ್ಲ, ಸೆಲೆಕ್ಟೆಡ್​ ಮಾತ್ರ ಆಗತ್ತೆ. ಎಲ್ಲಾ ಸಿನಿಮಾ ಇಲ್ಲಿ ರಿಲೀಸ್​ ಆದ್ರೆ ಜನ ಅದಕ್ಕೂ ಹೋಗಲ್ಲ ಎಂದಿದ್ದಾರೆ. ಅಂದಿನ ಚಿತ್ರಗಳನ್ನು, ಹಾಡುಗಳನ್ನು ಜನರು ಇಂದಿಗೂ ನೆನಪಿಸಿಕೊಳ್ತಾರೆ ಎಂದರೆ ಚಿತ್ರಗಳು ಹಾಗೆ ಇರುತ್ತಿದ್ದವು, ಇಂದೂ ಅಂಥದ್ದೇ ಚಿತ್ರ ರಿಲೀಸ್​ ಮಾಡಿ, ಜನ ನೋಡಿಯೇ ನೋಡುತ್ತಾರೆ ಎಂದಿದ್ದಾರೆ.

ಇದೇ ವೇಳೆ ಕಾರ್ಯಕ್ರಮಕ್ಕೆ ಬಂದ ಚಿತ್ರರಂಗದವರಿಗೆ ನೀವು ಎಷ್ಟು ಕನ್ನಡ ಸಿನಿಮಾ ದುಡ್ಡು ಕೊಟ್ಟು ಚಿತ್ರಮಂದಿರಗಳಿಗೆ ಹೋಗಿ ನೋಡಿದ್ದೀರಾ ಎಂದು ಪ್ರಶ್ನಿಸಿದಾಗ ಅಲ್ಲಿದ್ದವರು ಏನೂ ಉತ್ತರಿಸದೇ ನಕ್ಕರು. ನೀವೇ ಯಾವ ಚಿತ್ರಗಳನ್ನೂ ನೋಡಲ್ಲ, ಇನ್ನು ಜನ ನೋಡಬೇಕು ಎಂದರೆ ಹೇಗೆ? ಅಂಥ ಚಿತ್ರಗಳನ್ನು ಮೊದಲು ರಿಲೀಸ್​ ಮಾಡಿ, ಬಳಿಕ ಜನರನ್ನು ದೂಷಿಸಿ ಎಂದು ಚಾಟಿ ಏಟು ನೀಡಿದ್ದಾರೆ ರವಿಚಂದ್ರನ್​. 

ಆ ನಟ ನನ್ನ ಕ್ರಷ್​, ಅವ್ರ ಮದ್ವೆಯಾದಾಗ ಹಾರ್ಟ್​ ಬ್ರೇಕ್​ ಆಗೋಯ್ತು- ಬಿಕ್ಕಿ ಬಿಕ್ಕಿ ಅತ್ತೆ ಎಂದ ಸಾನ್ವಿ ಸುದೀಪ್

YouTube video player