ಸದ್ಯದಲ್ಲೇ ತೆರೆಗೆ ಶಿವಣ್ಣ-ರವಿ ಬಸ್ರೂರ್ ಜೋಡಿಯ 'ವೀರ ಚಂದ್ರಹಾಸ' ಸಿನಿಮಾ!

ಚಿತ್ರರಂಗದ ಇತಿಹಾಸದಲ್ಲೆ ಮೊಟ್ಟ ಮೊದಲ ಸಂಪೂರ್ಣ ಯಕ್ಷಗಾನ ವೈಭವ ಬೆಳ್ಳಿತೆರೆಯ ಮೇಲೆ ರಾರಾಜಿಸಿ ವಿಜೃಂಬಿಸಲಿದೆ. ಆ ಸಿನಿಮಾದ ಹೆಸರು ವೀರ ಚಂದ್ರಹಾಸ. ಅದರಲ್ಲಿ ಮೊದಲ ಬಾರಿಗೆ ಕರುನಾಡ ಚಕ್ರವರ್ತಿ ಯಕ್ಷಗಾನ ಕಲಾವಿದನ ಪಾತ್ರದಲ್ಲಿ ನಟಿಸಿದ್ದಾರೆ. ನಿನ್ನೆ..

Ravi Basrur directional and Shivarajkumar starrer Veera Chandrahasa movie to release soon

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ (Shiva Rajkumar) ಅವರು ಸದ್ಯ ಅಮೆರಿಕಾದಲ್ಲಿ ಇರೋದು ಗೊತ್ತೇ ಇದೆ. ಕ್ಯಾನ್ಸರ್‌ಗೆ ಸರ್ಜರಿ ಆದ ಬಳಿಕ ಶಿವಣ್ಣ ಅವರು ಸದ್ಯ ಅಮೆರಿಕಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಇದೇ ತಿಂಗಳು 26ಕ್ಕೆ ಭಾರತಕ್ಕೆ ಬರಲಿದ್ದಾರೆ. ಸದ್ಯ ಅವರು ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದು, ಮತ್ತೆ ಸಿನಿಮಾ ನಟನೆ ಮುಂದುವರೆಸಲಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಹೊಸ ಸಂತೋಷದ ಸುದ್ದಿಯೊಂದು ಹರಿದಾಡುತ್ತಿದೆ. ಹಾಗಿದ್ದರೆ ಅದೇನು ಎಂಬ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.. 

ಚಿತ್ರರಂಗದ ಇತಿಹಾಸದಲ್ಲೆ ಮೊಟ್ಟ ಮೊದಲ ಸಂಪೂರ್ಣ ಯಕ್ಷಗಾನ ವೈಭವ ಬೆಳ್ಳಿತೆರೆಯ ಮೇಲೆ ರಾರಾಜಿಸಿ ವಿಜೃಂಬಿಸಲಿದೆ. ಆ ಸಿನಿಮಾದ ಹೆಸರು ವೀರ ಚಂದ್ರಹಾಸ. ಅದರಲ್ಲಿ ಮೊದಲ ಬಾರಿಗೆ ಕರುನಾಡ ಚಕ್ರವರ್ತಿ ಯಕ್ಷಗಾನ ಕಲಾವಿದನ ಪಾತ್ರದಲ್ಲಿ ನಟಿಸಿದ್ದಾರೆ. ನಿನ್ನೆ 'ಸಂಕ್ರಾಂತಿ ಹಬ್ಬದ' ಹಾರ್ದಿಕ ಶುಭಾಶಯಗಳನ್ನು ತಿಳಿಸಿರುವ ಚಿತ್ರತಂಡವು, ಇನ್ನೇನು ಕೆಲವೇ ದಿನಗಳಲ್ಲಿ ವೀರ ಚಂದ್ರಹಾಸ (Veera Chadrahasa)  ಚಿತ್ರವು ತೆರೆಗೆ ಬರಲಿದೆ ಎಂದು ಘೋಷಿಸಿದೆ. ಅಲ್ಲಿಗೆ, ಕನ್ನಡ ಸಿನಿಪ್ರೇಕ್ಷಕರು ನಟ ಶಿವಣ್ಣ ಅವರನ್ನು ಚಂದ್ರಹಾಸ ಪಾತ್ರದ ವೀರಾವೇಶದಲ್ಲಿ ನೋಡಬಹುದು. 

ಅಣ್ಣಾವ್ರ ಮೂರು ಮುತ್ತುಗಳ ನಟನೆಯ 'ಓಂ ಭಾಗ-2' ನಿಂತ ಸೀಕ್ರೆಟ್ ಹೇಳಿದ ರವಿ ಶ್ರೀವತ್ಸ!

ನಟ ಶಿವಣ್ಣ ಅವರು ಇತ್ತೀಚೆಗೆ ಕನ್ನಡ ನಟರಾಗಿ ಮಾತ್ರ ಉಳಿದಿಲ್ಲ. ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ನಟಿಸಿ, ಈಗ ಅವರು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಅಮೆರಿಕಾದಿಂದ ವಾಪಸ್ ಆದ ಬಳಿಕ ಅವರು ಜೈಲರ್ 2 ಸಿನಿಮಾಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಅದೂ ಅಲ್ಲದೇ ಟಾಲಿವುಡ್ ಸ್ಟಾರ್ ನಟ, ಗ್ಲೋಬಲ್ ಖ್ಯಾತಿಯ ರಾಮ್‌ ಚರಣ್ ಅವರೊಂದಿಗೆ ಕೂಡ ನಟ ಶಿವರಾಜ್‌ಕುಮಾರ್ ಅವರು ತೆರೆ ಹಂಚಿಕೊಳ್ಳಲಿದ್ದಾರೆ. ಇನ್ನು 'ಎ ಫಾರ್ ಆನಂದ್' ಎಂಬ ಮಕ್ಕಳ ಸಿನಿಮಾದಲ್ಲಿ ಸಹ ನಟ ಶಿವಣ್ಣ ನಟಿಸಲಿದ್ದು, ಅದನ್ನು ಸ್ವತಃ ಪತ್ನಿ ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡಲಿದ್ದಾರೆ. 

ಅಷ್ಟೇ ಅಲ್ಲ, ನಟ ಶಿವಣ್ಣ ಅಮೆರಿಕದಿಂದ ಬಂದ ಬಳಿಕ ಇನ್ನೂ ಹಲವಾರು ಪ್ರಾಜೆಕ್ಸ್‌ಗಳು ನಟ ಶಿವಣ್ಣ ಅವರಿಗಾಗಿ ಕಾಯುತ್ತಿವೆ. ಸ್ವಲ್ಪ ದಿನಗಳ ವಿಶ್ರಾಂತಿ ಬಳಿಕ ಶಿವಣ್ಣ ಅವರು ಒಂದಾದ ಬಳಿಕ ಮತ್ತೊಂದರಂತೆ ಶೂಟಿಂಗ್ ಮಗಿಸಿಕೊಡಲಿದ್ದಾರೆ ಎನ್ನಲಾಗಿದೆ. ವೀರ ಚಂದ್ರಹಾಸ ಚಿತ್ರವು ನಟ ಶಿವಣ್ಣರ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎನ್ನಲಾಗುತ್ತಿದೆ. ಅಂದಹಾಗೆ, ವೀರ ಚಂದ್ರಹಾಸ ಚಿತ್ರವನ್ನು ಸದ್ಯ ಸಕತ್ ಮಿಂಚುತ್ತಿರುವ ಕನ್ನಡ ಚಿತ್ರರಂಗದ ಸಂಗೀತ ಮಾಂತ್ರಿಕ ರವಿ ಬಸ್ರೂರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ|| ಶಿವರಾಜ್ ಕುಮಾರ್ ರವರು 'ನಾಡ ಪ್ರಭು ಶಿವಪುಟ್ಟ ಸ್ವಾಮಿ'ಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. 

ಸ್ಯಾಂಡಲ್‌ವುಡ್‌ನ ಹಿರಿಯ ನಟ ಸರಿಗಮ ವಿಜಿ ಇನ್ನಿಲ್ಲ

Latest Videos
Follow Us:
Download App:
  • android
  • ios