ಅಣ್ಣಾವ್ರ ಮೂರು ಮುತ್ತುಗಳ ನಟನೆಯ 'ಓಂ ಭಾಗ-2' ನಿಂತ ಸೀಕ್ರೆಟ್ ಹೇಳಿದ ರವಿ ಶ್ರೀವತ್ಸ!
ನಾನು ಶಿವಣ್ಣ ಅವರಿಗೆ ನಿರ್ದೇಶನ ಮಾಡಿದ್ದು ಒಂದು ಸಿನಿಮಾ, ಮಾಡಬೇಕಾಗಿದ್ದು 4 ಸಿನಿಮಾ. ಆದ್ರೆ ಆ ನಾಲ್ಕೂ ನಿಂತೇ ಹೊಯ್ತು.. ಅದ್ರಲ್ಲಿ ಈ ಓಂ ಭಾಗ-2 ಕೂಡ ಒಂದು ಎಂದಿದ್ದಾರೆ' ನಿರ್ದೇಶಕ ರವಿ ಶ್ರೀವತ್ಸ. ಈ ಸಿನಿಮಾ ನಿಂತುಹೋದ ಬಗ್ಗೆ ಓಪನ್ ಆಗಿ..
ಕನ್ನಡದ ಖ್ಯಾತ ನಿರ್ದೇಶಕ ರವಿ ಶ್ರೀವತ್ಸ (Ravi Srivatsa) ಅವರು ಸಂದರ್ಶನವೊಂದರಲ್ಲಿ ಮಾತನ್ನಾಡಿದ್ದಾರೆ. ತಮ್ಮ ಸಿನಿಮಾಗಳ ಬಗ್ಗೆ ಮತನ್ನಾಡುತ್ತ ನಟ ಶಿವಣ್ಣ ಅವರ ಅನಾರೋಗ್ಯ, ಅವರ ಜೊತೆಗಿನ ಬಾಂಧವ್ಯ ಹಾಗೂ ಆಗಬೇಕಿದ್ದ ಸಿನಿಮಾಗಳ ಬಗ್ಗೆ ಹೇಳಿದ್ದಾರೆ. ಡೆಡ್ಲಿ ಸೋಮ ಸಿನಿಮಾ ಖ್ಯಾತಿಯ ರವಿ ಶ್ರೀವತ್ಸ ಅವರು ಹತ್ತು ಹಲವು ಸಂಗತಿಗಳ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರು ಅದೇನು ಹೇಳಿದ್ದಾರೆ ಎಂಬುವುದು ಮುಂದಿದೆ ನೋಡಿ.. 'ನನಗೆ ದರ್ಶನ್, ಸುದೀಪ್, ಯಶ್, ಶಿವಣ್ಣ ಇವರೆಲ್ಲರ ಜೊತೆ ಸಿನಿಮಾ ಮಾಡಲೇಬೇಕು ಎಂದೇನಿಲ್ಲ. ಆದರೆ, ಎಲ್ಲರೂ ಆರೋಗ್ಯವಾಗಿ ಚೆನ್ನಾಗಿರಲಿ ಎಂಬುದು ನನ್ನಾಸೆ' ಎಂದಿದ್ದಾರೆ ರವಿ ಶ್ರೀವತ್ಸ.
'ಆ ಜೀವದ ಜೊತೆ ನಾನುಮಾಡಿದ್ದು ಒಓದು ಸಿನಿಮಾ ಆದ್ರೆ, ಆ ಜೀವ ನಿಂತೊದ್ರೆ ನಾನು ಮಾಡಬೇಕಾದ ನಾಲ್ಕು ಸಿನಿಮಾ ಆಗೋದೇ ಇಲ್ಲ.. ಮುತ್ತು ನಮ್ಮಪ್ಪ, ವರದ, ಓಂ 2, ಈ ಓಂ ಭಾಗ ಎರಡರಲ್ಲಿ ಶಿವರಾಜ್‌ಕುಮಾರ್, ರಾಗವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಈ ಮೂರು ಅಣ್ಣತಮ್ಮಂದಿರು-ನಟರೂ ಸೇರಿ ಮಾಡ್ಬೇಕಿತ್ತು.. ಅದಕ್ಕೆ ಈ ಮೂರೂ ನಟರಿಗೆ ಅಡ್ವಾನ್ಸ್ ಆಗಿತ್ತು, ಪಿರಾಮಿಡ್ ಕಂಪನಿ ನಿರ್ಮಾಣಕ್ಕೆಡ ಕೈ ಜೋಡಿಸಿತ್ತು, ಅದು ರಾಜಕೀಯ ಕಾರಣಕ್ಕೆ ನಿಂತೇ ಹೋಯ್ತು.. ನನ್ನ ಮಾದಪ್ಪ ಸಿನಿಮಾದ ಗೋವರ್ಧನ್ ಮಾಡಬೇಕಿದ್ದ ಒಂದು ಸಿನಿಮಾ ಕೂಡ ನಿಂತೋಯ್ತು..
ಅಮೆರಿಕಾ ಆಸ್ಪತ್ರೆಯಿಂದ ಶಿವಣ್ಣ ಡಿಸ್ಚಾರ್ಜ್, ಭಾರತಕ್ಕೆ ಬರೋದು ಯಾವಾಗ?
ನಾನು ನಿರ್ದೇಶನ ಮಾಡಿದ್ದು ಒಂದು ಸಿನಿಮಾ, ಮಾಡಬೇಕಾಗಿದ್ದು 4 ಸಿನಿಮಾ. ಆದ್ರೆ ಆ ನಾಲ್ಕೂ ನಿಂತೇ ಹೊಗುತ್ತೆ.. ಅದ್ರಲ್ಲಿ ಈ ಓಂ ಭಾಗ-2 ಕೂಡ ಎಂದಿದ್ದಾರೆ' ನಿರ್ದೇಶಕ ರವಿ ಶ್ರೀವತ್ಸ ಅವರು. ಈ ಸಿನಿಮಾ ನಿಂತುಹೋದ ಬಗ್ಗೆ ಓಪನ್ ಆಗಿ ಹೇಳದೇ ಸೂಕ್ಷ್ಮವಾಗಿ ಹೇಳಿದ ರವಿ ಶ್ರೀವತ್ಸ ಅವರು 'ಓಂ ಭಾಗ-2'ಗೆ ಎಲ್ಲವೂ ಸಿದ್ಧವಾಗಿತ್ತು. ನಿರ್ಮಾಣ ಸಂಸ್ಥೆ ಕೈಜೋಡಿಸಿತ್ತು. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರಿಗೆ ಅಡ್ವಾನ್ಸ್ ಕೂಡ ಕೊಟ್ಟಾಗಿತ್ತು. ಆದರೆ, ಅವರ ಹಿಂದಿರುವ ಜನರಿಂದ ಆ ಪ್ರಾಜೆಕ್ಟ್ ನಿಂತುಹೋಯ್ತು ಎಂದಿದ್ದಾರೆ.
ಡೆಡ್ಲಿ ಸೋಮ ಸಿನಿಮಾ ಖ್ಯಾತಿಯ ನಿರ್ದೇಶಕ ಶ್ರೀವತ್ಸ ಅವರು 30ಕ್ಕೂ ಹೆಚ್ಚು ಸಿನಿಮಾಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ, ಏಳು ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. ಸದ್ಯ ಇನ್ನೊಂದು ಸಿನಿಮಾ 'ಗ್ಯಾಂಗ್ಸ್ ಆಫ್ ಯುಕೆ' ತೆರೆಗೆ ಬರಲು ಸಿದ್ಧವಾಗುತ್ತಿದೆ. ಈ ಮೊದಲು ರವಿ ಶ್ರೀವತ್ಸ ಅವರು ಡೆಡ್ಲಿ ಸೋಮ, ಗಂಡ ಹೆಂಡತಿ, ಈ ರಾಜೀವ್ ಗಾಂಧಿ ಅಲ್ಲ, ಮಾದೇಶ, ಡೆಡ್ಲಿ ಸೋಮ-2, ದಶಮುಖ ಹಾಗೂ ಟೈಗರ್ ಗಲ್ಲಿ ಎಂಬ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇದೀಗ ಮತ್ತೊಂದು ಹೊಸ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ದೊಡ್ಮನೆಯ ದೊಡ್ಮಗನಿಗೆ ಕಿಚ್ಚ ಸುದೀಪ್ ಕಾಲ್? ಶಿವಣ್ಣ ಬಿಟ್ಟು ಕೊಟ್ಟಿದ್ದು ನಿಜವೇ?