Asianet Suvarna News Asianet Suvarna News

ಕಲ್ಟ್ ಬಿಟ್ಟು 'ಪೃಥ್ವಿ ಅಂಬಾರ್' ಜತೆ ಸೇರಿ ಫ್ಯಾಮಿಲಿ ಕಥೆ ಹೇಳಲು ಸಜ್ಜಾದ ಚಂದ್ರಶೇಖರ್ ಬಂಡಿಯಪ್ಪ

ಚಂದ್ರಶೇಖರ್ ಬಂಡಿಯಪ್ಪ ಪ್ರತಿ ಸಿನಿಮಾದಲ್ಲಿಯೂ ಹೊಸ ಕಥೆಯೊಂದಿಗೆ ಬರ್ತಾರೆ. ಆನೆ ಪಟಾಕಿಯಲ್ಲಿ ಕಾಮಿಡಿ, ರಥಾವರದಲ್ಲಿ ಕಲ್ಟ್, ತಾರಕಾಸುರದಲ್ಲೊಂದು ಬಗೆ, ರೆಡ್ ಕಾಲರ್ ನಲ್ಲಿ ಕ್ರೈಮ್ ಥ್ರಿಲ್ಲರ್, ಕರಾವಳಿಯಲ್ಲಿ ಕರಾವಳಿ ಸೊಡಗನ್ನು..

Rathavara fame director Chandrashekar Bandiyappa to direct family based movie soon srb
Author
First Published Apr 20, 2024, 2:23 PM IST

ರಥಾವರ (Rathavara)ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ್ದ ಸಿನಿಮಾ. 2015ರಲ್ಲಿ ತೆರೆಗೆ ಬಂದಿದ್ದ ಈ ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಸ ಅವತಾರದಲ್ಲಿ ಘರ್ಜಿಸಿದ್ದರು. ಬಾಕ್ಸಾಫೀಸ್ ನಲ್ಲಿಯೂ ಒಳ್ಳೆ ಬೆಳೆ ತೆಗೆದಿದ್ದ ರಥಾವರ ಸಿನಿಮಾ ಮೂಲಕ ವಿಶಿಷ್ಟ ಕಥೆ ಹೇಳಿ ನಿರ್ದೇಶನದಲ್ಲಿಯೂ ಗೆದ್ದವರು ಚಂದ್ರಶೇಖರ್ ಬಂಡಿಯಪ್ಪ (Chandrashekar Bandiyappa).ಆನೆ ಪಟಾಕಿ ಮೂಲಕ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಟ್ಟಿದ್ದ ಅವರು ಆ ಬಳಿಕ ರಥಾವರ, ತಾರಕಾಸುರ ಸಿನಿಮಾ ಮಾಡಿ ಗೆದ್ದರು. 

ಈ ಚಿತ್ರಗಳ ಸಕ್ಸಸ್ ಬಳಿಕ ಬಾಲಿವುಡ್ ಗೆ ಹಾರಿರುವ ಚಂದ್ರಶೇಖರ್ ಬಂಡಿಯಪ್ಪ ರೆಡ್ ಕಾಲರ್ ಎಂಬ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕನ್ನಡದ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕೆಲಸ ಮುಗಿಸಿರುವ ಅವರು ಗುರುದತ್ ಗಾಣಿಗ ನಿರ್ದೇಶನದ ಕರಾವಳಿ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಇದೀಗ ಚಂದ್ರಶೇಖರ್ ಬಂಡಿಯಪ್ಪ ಹೊಸ ಕಥೆ ಹೇಳೋದಿಕ್ಕೆ ನಿಮ್ಮ ಮುಂದೆ ಬರ್ತಿದ್ದಾರೆ.

ಈಶ್ವರಿ 'ಶಾಂತಿ ಕ್ರಾಂತಿ' ಗಾಸಿಪ್‌ಗೆ ಇತಿಶ್ರೀ ಹಾಡಿದ ರವಿಚಂದ್ರನ್; ವೀರಾಸ್ವಾಮಿ ಹಾಗೆ ಹೇಳ್ಬಿಟಿದ್ರಾ?

ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ (Pruthvi Ambar)ಜೊತೆ ಚಂದ್ರಶೇಖರ್ ಬಂಡಿಯಪ್ಪ  ಕೈ ಜೋಡಿಸಿದ್ದಾರೆ. ಕಲ್ಟ್ ಕಥೆಗಳನ್ನು ಹೇಳಿ ಸಕ್ಸಸ್ ಕಂಡಿರುವ ಅವರೀಗ ಫ್ಯಾಮಿಲಿ ಕತೆಯತ್ತ ವಾಲಿದ್ದಾರೆ. ಹೌದು ಈ ಬಾರಿ ಚಂದ್ರಶೇಖರ್ ಬಂಡಿಯಪ್ಪ ಫ್ಯಾಮಿಲಿ ಎಂಟರ್ ಟೈನರ್ ಸಿನಿಮಾ ಮಾಡುತ್ತಿದ್ದಾರೆ. ಸಹಜ ನಟನೆಯಿಂದಲೇ ಹೆಸರು ಮಾಡಿದವರು ಪೃಥ್ವಿ..ದಿಯಾ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ಕರಾವಳಿ ಕುವರ ಪರಭಾಷೆಯಲ್ಲಿಯೂ ಮಿಂಚುತ್ತಿದ್ದು, ಇದೀಗ ರಥಾವರ ಡೈರೆಕ್ಟರ್ ಜೊತೆ ಸಿನಿಮಾ ಮಾಡುತ್ತಿರುವುದು ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.

ವಿಷ್ಣುವರ್ಧನ್‌ಗೆ ಟಾಂಗ್ ಕೊಡಲು 'ದ್ರೋಹಿ' ಮಾಡಿದ್ರು ದ್ವಾರಕೀಶ್; ಯಾಕೆ ಮೂಡಿತ್ತು ವೈಮನಸ್ಯ?

ಚಂದ್ರಶೇಖರ್ ಬಂಡಿಯಪ್ಪ ಪ್ರತಿ ಸಿನಿಮಾದಲ್ಲಿಯೂ ಹೊಸ ಕಥೆಯೊಂದಿಗೆ ಬರ್ತಾರೆ. ಆನೆ ಪಟಾಕಿಯಲ್ಲಿ ಕಾಮಿಡಿ, ರಥಾವರದಲ್ಲಿ ಕಲ್ಟ್, ತಾರಕಾಸುರದಲ್ಲೊಂದು ಬಗೆ, ರೆಡ್ ಕಾಲರ್ ನಲ್ಲಿ ಕ್ರೈಮ್ ಥ್ರಿಲ್ಲರ್, ಕರಾವಳಿಯಲ್ಲಿ ಕರಾವಳಿ ಸೊಡಗನ್ನು ಕಟ್ಟಿಕೊಟ್ಟಿರುವ ಅವರು ಹೊಸ ಸಿನಿಮಾದಲ್ಲಿ ಯಾವ ರೀತಿ ಕಥೆಯನ್ನು ಹೇಳಿದ್ದಾರೆ ಎಂಬ ಕುತೂಹಲ ಕೆರಳಿಸಿದೆ. 

ಎಲ್ಲಿದೆ 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ ಬೆಟ್ಟ, ನೋಡಿದವರಿಗೆ ನೆನಪಾಗಿ ಹೇಳುವುದೇನು?

ಪೃಥ್ವಿ-ಚಂದ್ರಶೇಖರ್ ಬಂಡಿಯಪ್ಪ ಜೋಡಿಯ ಸಿನಿಮಾವನ್ನು ವಿದ್ಯಾ ಶೇಖರ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಉಳಿದ ತಾರಾಬಳಗ ಹಾಗೂ ತಾಂತ್ರಿಕ ಬಳಗವನ್ನು ಚಿತ್ರತಂಡದ ಒಂದೊಂದಾಗಿ ಮಾಹಿತಿ ನೀಡಲಿದೆ.

Follow Us:
Download App:
  • android
  • ios