ರಿಷಬ್ ಶೆಟ್ಟಿ ಟ್ವೀಟ್‌ಗೆ ರಶ್ಮಿಕಾ ಮಂದಣ್ಣ ಫ್ಯಾನ್ಸ್ ಕಿಡಿಕಿಡಿ: ಜಾಲತಾಣದಲ್ಲಿ ಪರ-ವಿರೋಧಗಳ ಬಿಸಿಬಿಸಿ ಚರ್ಚೆ!
ಕಿರಿಕ್ ಪಾರ್ಟಿ ಚಿತ್ರ ಎಂಟು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮಾಡಿರುವ ಟ್ವೀಟ್ನಿಂದ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಕೋಪಗೊಂಡಿದ್ದಾರೆ. ಕಾರಣವೇನು?
ಕೊಡಗಿನ ಬೆಡಗಿ ನ್ಯಾಷನಲ್ ಕ್ರಷ್ ಎಂದೇ ಕರೆಸಿಕೊಳ್ತಿರೋ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಸದ್ಯ ನಟ ರಿಷಬ್ ಶೆಟ್ಟಿ ವಿರುದ್ಧ ಗರಂ ಆಗಿದ್ದಾರೆ. ಅದಕ್ಕೆ ಕಾರಣ ರಿಷಬ್ ಅವರು ಹಾಕಿರುವ ಟ್ವೀಟ್. ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಒಂದೆಡೆ ರಶ್ಮಿಕಾ ಮಂದಣ್ಣ ಅವರ ಫ್ಯಾನ್ಸ್ ಈ ಟ್ವೀಟ್ ವಿರುದ್ಧ ತಿರುಗಿ ಬಿದ್ದಿದ್ದರೆ, ರಿಷಬ್ ಶೆಟ್ಟಿ ಪರವಾಗಿ ಅಸಂಖ್ಯರು ಬ್ಯಾಟಿಂಗ್ ಬೀಸುತ್ತಿದ್ದಾರೆ. ರಿಷಬ್ ಅವರ ಜಾಗದಲ್ಲಿ ಯಾರೇ ಇದ್ದರೂ ಅವರೂ ಹೀಗೆಯೇ ಮಾಡುತ್ತಿದ್ದರು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಒಂದು ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಷ್ಟಕ್ಕೂ ಅದೇನದು ಟ್ವೀಟ್ ಎಂದು ನೋಡುವುದಾದರೆ, ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಕಿರಿಕ್ ಪಾರ್ಟಿ ಚಿತ್ರಕ್ಕೆ ಎಂಟು ವರ್ಷ ತುಂಬಿರುವ ಹಿನ್ನೆಲೆಯಲ್ಲಿ, ಅದರ ನಿರ್ದೇಶನ ಮಾಡಿದ್ದ ರಿಷಬ್ ಶೆಟ್ಟಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅವರು ತಮ್ಮ ಟ್ವೀಟ್ನಲ್ಲಿ, 'ಕಿರಿಕ್ ಪಾರ್ಟಿ ನಮ್ಮ ಜೀವನದ ಭಾಗವಾಗಿ 8 ವರ್ಷಗಳು ಕಳೆದಿವೆ, ಅನೇಕ ಸುಂದರ ನೆನಪುಗಳು ಮತ್ತು ನಿಮ್ಮ ಪ್ರೀತಿ ಈ ಪಯಣವನ್ನು ಅರ್ಥಪೂರ್ಣವನ್ನಾಗಿಸಿವೆ. ನಿಮ್ಮ ಬೆಂಬಲಕ್ಕೆ ಹೃತ್ಪೂರ್ವಕ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ. ಅದನ್ನು ಕೆಲವು ನಟರಿಗೆ ಟ್ಯಾಗ್ ಮಾಡಿದ್ದರೂ ರಶ್ಮಿಕಾ ಮಂದಣ್ಣ ಅವರಿಗೆ ಮಾಡಲಿಲ್ಲ. ಮಾತ್ರವಲ್ಲದೇ ಕಿರಿಕ್ ಪಾರ್ಟಿ ಸಿನಿಮಾದ ಫೋಟೋ ಶೇರ್ ಮಾಡಿರುವ ಅವರು, ರಶ್ಮಿಕಾ ಮಂದಣ್ಣ ಇಲ್ಲದಂತೆ ನೋಡಿಕೊಂಡಿದ್ದಾರೆ. ಇದು ನಟಿಯ ಅಭಿಮಾನಿಗಳಿಗೆ ನೋವು ಉಂಟು ಮಾಡಿದೆ.
ರಶ್ಮಿಕಾ ಬಣ್ಣದ ಬದುಕಿಗೆ 8 ವರ್ಷ, ರಕ್ಷಿತ್ ಶೆಟ್ಟಿ ಕೊಟ್ಟ ಚಾನ್ಸ್, ಫ್ಯಾನ್ಸ್‌ಗೆ ಥ್ಯಾಂಕ್ಸ್!
ಅಷ್ಟಕ್ಕೂ, ರಿಷಬ್ ಅವರು ಹೀಗೆ ಮಾಡಲು ಕಾರಣ ಏನು ಎನ್ನುವುದು ಸ್ಯಾಂಡಲ್ವುಡ್ ಪ್ರಿಯರಿಗೆ ತಿಳಿಯದೇ ಇರುವ ವಿಷಯವೇನಲ್ಲ. ರಶ್ಮಿಕಾ ಮಂದಣ್ಣ 2016 ರಲ್ಲಿ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಟ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರಿಗೆ ಕಿರಿಕ್ ಪಾರ್ಟಿಯಲ್ಲಿ ಚಾನ್ಸ್ ನೀಡಿದ್ದರು. ಈ ಚಿತ್ರ ಕೇವಲ 4 ಕೋಟಿ ರೂಪಾಯಿಗೆ ತಯಾರಾಗಿತ್ತು. ಆದರೆ ಇದು ವಿಶ್ವದಾದ್ಯಂತ 50 ಕೋಟಿ ರೂಪಾಯಿ ಗಳಿಸಿ ಸೂಪರ್ ಹಿಟ್ ಆಯಿತು. ಬಳಿಕ ರಶ್ಮಿಕಾ ಅವರಿಗೆ ಬಾಲಿವುಡ್ನಲ್ಲಿಯೂ ಎಂಟ್ರಿ ಸಿಕ್ಕಿತು. ಮಾತ್ರವಲ್ಲದೇ ಈ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ರಶ್ಮಿಕಾ ನ್ಯಾಷನಲ್ ಕ್ರಷ್ ಎನ್ನುವ ಬಿರುದನ್ನೂ ಪಡೆದರು. ಆದರೆ ಬಳಿಕ ರಶ್ಮಿಕಾ ಇದನ್ನೇ ಮರೆತು ಬಿಟ್ಟಿದ್ದರು. ಕನ್ನಡ ಎಂದರೆ ತಾತ್ಸಾರ ಮಾಡಿದರು. ಮಾತ್ರವಲ್ಲದೇ, ಸಂದರ್ಶನವೊಂದರಲ್ಲಿ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಬಗ್ಗೆ ಸಂದರ್ಶನವೊಂದರಲ್ಲಿ ಲಘುವಾಗಿ ಮಾತನಾಡಿದ್ದರು. ಆ ನಂತರ ರಿಷಬ್ ಕೂಡ ರಶ್ಮಿಕಾಗೆ ತಿರುಗೇಟನ್ನು ನೀಡಲು ಮರೆತಿರಲಿಲ್ಲ. ಕೊನೆಗೆ ಮಾಡಿದ ತಪ್ಪಿಗೆ ತೇಪೆ ಹಚ್ಚಲು ಪ್ರಯತ್ನಿಸಿದ ರಶ್ಮಿಕಾ ನನಗೆ ಚಿತ್ರರಂಗದಲ್ಲಿ ದಾರಿ ತೋರಿಸಿದ್ದು ರಿಷಬ್ ಮತ್ತು ರಕ್ಷಿತ್ ಎಂದು ಹೇಳಿದರೂ ಅದೇನೂ ಮನಸಾರೆ ಹೇಳಿರಲಿಲ್ಲ.
ಇದೇ ಸಿಟ್ಟು ಇಂದಿಗೂ ರಿಷಬ್ ಶೆಟ್ಟಿ ಅವರನ್ನು ಬಿಟ್ಟಿಲ್ಲ ಎನ್ನುವುದು ಈ ಟ್ವೀಟ್ನಿಂದ ಇದೀಗ ಗೊತ್ತಾಗುತ್ತಿದೆ. ರಶ್ಮಿಕಾ ಮಾಡಿರುವ ಕೃತ್ಯಕ್ಕೆ ಇದೇ ಸರಿಯಾದದ್ದು, ರಿಷಬ್ ಅವರು ಏನೂ ತಪ್ಪು ಮಾಡಿಲ್ಲ. ಯಾರೇ ಆದರೂ ಹೀಗೆಯೇ ಮಾಡುತ್ತಿದ್ದರು ಎಂದು ರಿಷಬ್ ಶೆಟ್ಟಿ ಅಭಿಮಾನಿಗಳು ಹೇಳುತ್ತಿದ್ದರೆ, ರಶ್ಮಿಕಾ ಮಂದಣ್ಣ ಫ್ಯಾನ್ಸ್ ಮಾತ್ರ ಕೋಪಗೊಂಡಿದ್ದಾರೆ. ರಿಷಬ್ ಶೆಟ್ಟಿ ಅವರು ರಶ್ಮಿಕಾ ಅವರನ್ನು ಮರೆತಿರುವುದು ಸರಿಯಲ್ಲ. ಈ ಚಿತ್ರದ ಯಶಸ್ಸಿಗೆ ಅವರ ಪಾಲೂ ಬಹುದೊಡ್ಡದಿದೆ ಎನ್ನುತ್ತಿದ್ದಾರೆ. ಅದೇ ಇನ್ನೊಂದೆಡೆ, ರಶ್ಮಿಕಾ ಅವರು, ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದು, ಎಂಟು ವರ್ಷಗಳ ಜರ್ನಿ ನೆನಪಿಸಿಕೊಂಡಿದ್ದಾರೆ. ಉದ್ಯಮದಲ್ಲಿ ಎಂಟು ವರ್ಷಗಳನ್ನು ಕಳೆದಿದ್ದೇನೆ. ನಾನು ಇಲ್ಲಿಯವರೆಗೆ ಏನು ಮಾಡಿದ್ದೇನೋ ಅದು ಸಾಧ್ಯವಾದದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಧನ್ಯವಾದ ಎಂದು ಬರೆದಿದ್ದಾರೆ.
ಫೋನ್‌ನಲ್ಲಿ ವಿಜಯ್ ದೇವರಕೊಂಡ ಮಾತು ಕೇಳ್ತಿದ್ದಂಗೇ ರಶ್ಮಿಕಾ ಹೊಟ್ಟೆಯಲ್ಲಿ ಹರಿದಾಡ್ತು ಚಿಟ್ಟೆ! ವಿಡಿಯೋ ವೈರಲ್