ಫೋನ್‌ನಲ್ಲಿ ವಿಜಯ್ ದೇವರಕೊಂಡ ಮಾತು ಕೇಳ್ತಿದ್ದಂಗೇ ರಶ್ಮಿಕಾ ಹೊಟ್ಟೆಯಲ್ಲಿ ಹರಿದಾಡ್ತು ಚಿಟ್ಟೆ! ವಿಡಿಯೋ ವೈರಲ್
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಶೀಘ್ರದಲ್ಲಿ ನೆರವೇರಲಿದೆ ಎನ್ನುವ ಸುದ್ದಿಯ ನಡುವೆಯೇ, ನಟನ ಮಾತು ಕೇಳಿ ನಟಿ ರಿಯಾಕ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಬಹುಭಾಷಾ ನಟಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವೆ ನಡೆಯುತ್ತಿರುವ ಕುಚ್ ಕುಚ್ ಸಿನಿ ಇಂಡಸ್ಟ್ರಿಯಲ್ಲಿ ಹೊಸ ವಿಷಯವೇನಲ್ಲ. ಅದರಲ್ಲಿಯೂ ಇವರ ಲವ್ ಸ್ಟೋರಿ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆಗಳು ಯಾವಾಗಲೂ ನಡೆಯುತ್ತಿವೆ. ಆದರೆ ಇದುವರೆಗೂ ಇಬ್ಬರೂ ತುಟಿ ಪಿಟಿಕ್ ಎನ್ನಲಿಲ್ಲ. ಮೊನ್ನೆಯಷ್ಟೇ ಈ ಜೋಡಿ ಪುಷ್ಪ 2 ಚಿತ್ರ ವೀಕ್ಷಿಸಿ ಬಂದ ಬಳಿಕ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಡೇಟಿಂಗ್ ಮಾಡುತ್ತಿರುವ ಬಗ್ಗೆ ಇನ್ನಷ್ಟು ಸ್ಪಷ್ಟನೆ ಸಿಕ್ಕಿದೆ ಎಂದೇ ಹೇಳಲಾಗುತ್ತಿದೆ, ಮಾತ್ರವಲ್ಲದೇ, ಇವರ ಮದುವೆ ಇನ್ನಾರು ತಿಂಗಳಿನಲ್ಲಿ ನಡೆಯಲಿದೆ ಎಂದು ಗುಲ್ಲೆದ್ದಿದೆ. ಅದಕ್ಕಾಗಿ ತಯಾರಿ ನಡೆಯುತ್ತಿದ್ದು, ಸೀಕ್ರೆಟ್ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿಯೂ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. 2025ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದೆಲ್ಲಾ ಹೇಳಲಾಗುತ್ತಿದ್ದರೂ, ಈ ಬಗ್ಗೆ ಅಧಿಕೃತವಾಗಿಏನೂ ವಿಷಯ ಬಂದಿಲ್ಲವಷ್ಟೇ.
ಇದರ ನಡುವೆಯೇ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರು ಇರುವಾಗಿ ವಿಜಯ ದೇವರಕೊಂಡ ಫೋನ್‌ನಲ್ಲಿ ವಾಟ್ಸ್‌ಅಪ್ ರೇ... ಎಂದಿದ್ದಾರೆ. ಇದನ್ನು ಲೌಡ್ ಸ್ಪೀಕರ್‍ನಲ್ಲಿ ಇಡಲಾಗಿದ್ದರಿಂದ ಎಲ್ಲರಿಗೂ ಕೇಳಿಸಿದೆ. ವಿಜಯ್ ಮಾತು ಕೇಳುತ್ತಿದ್ದಂತೆಯೇ ರಶ್ಮಿಕಾ ರೊಮಾಂಚನಗೊಂಡಿದ್ದಾರೆ. ಕಿಲಕಿಲ ನಕ್ಕಿದ್ದಾರೆ. ಅವರ ಈ ನಗುವಿನಿಂದಲೇ ಇವರಿಬ್ಬರ ನಡುವಿನ ಸಂಬಂಧ ಕನ್‌ಫರ್ಮ ಆಗಿದೆ ಎಂದೇ ಹೇಳಲಾಗುತ್ತಿದೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇನ್ನು ನೀವಿಬ್ಬರೂ ಗುಟ್ಟಾಗಿದ್ದು ಏನೂಪ್ರಯೋಜನ ಇಲ್ಲ, ಸತ್ಯ ಒಪ್ಪಿಕೊಳ್ಳಿ ಎಂದೇ ಹೇಳುತ್ತಿದ್ದಾರೆ.
ಅಡುಗೆ ಮಾಡ್ತಿರೋ ಯುವಕನ ಪರಿಚಯಿಸಿದ ನಿವೇದಿತಾ! ಗಂಡ ಬಿಟ್ಟಿದ್ದೂ ಇದಕ್ಕೇ ತಾನೆ ಎಂದು ಫ್ಯಾನ್ಸ್ ಗರಂ...
ಅಷ್ಟಕ್ಕೂ, ಪುಷ್ಪ 2 ಪ್ರಚಾರದ ವೇಳೆ, ನಿಮ್ಮ ಮದುವೆ ಆಗಲಿರುವವರು ನಟರೇ ಎಂಬ ಪ್ರಶ್ನೆ ರಶ್ಮಿಕಾಕ್ಕೆ ಎದುರಾಗಿತ್ತು. ಆಗ ಆಕೆ, ಎಲ್ಲರಿಗೂ ಗೊತ್ತಲ್ಲವೇ ಎಂದು ನಕ್ಕಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಅವರ ತಂದೆ ಗೋವರ್ಧನ್ ಅವರು ತಮ್ಮ ಮಗನ ಮದುವೆಯ ಬಗ್ಗೆ ಮಾತನಾಡಿದ್ದರು. ಸದ್ಯ ಚಿತ್ರಗಳಲ್ಲಿ ಬ್ಯುಸಿ ಇದ್ದಾನೆ. ಸಂಕ್ರಾಂತಿಯ ನಂತರ ಮೈತ್ರಿ ಮೂವೀಸ್‌ನೊಂದಿಗೆ ಹೊಸ ಯೋಜನೆ ಮತ್ತು ಅದರ ನಂತರ ದಿಲ್ ರಾಜು ಅವರ ನಿರ್ಮಾಣದೊಂದಿಗೆ ಮತ್ತೊಂದು ಚಿತ್ರ ಇದೆ. ಮದುವೆಯನ್ನು ಸರಿಯಾದ ಸಮಯದಲ್ಲಿ ಪರಿಗಣಿಸಲಾಗುವುದು. ಆರು ತಿಂಗಳಿಂದ ಒಂದು ವರ್ಷದ ಒಳಗೆ ಮದುವೆಯಾಗಬಹುದು ಎಂದಿದ್ದಾರೆ.
ಇದರ ನಡುವೆಯೇ, ರಶ್ಮಿಕಾ ಸತತ ಹಿಟ್ ಚಿತ್ರಗಳನ್ನು ನೀಡುತ್ತಿದ್ದಾರೆ. ವಿಜಯ್ ದೇವರಕೊಂಡ ಇತ್ತೀಚೆಗೆ ಹಿನ್ನಡೆ ಅನುಭವಿಸಿದ್ದಾರೆ. ವಿಜಯ್ ದೇವರಕೊಂಡ ಗೌತಮ್ ತಿಣ್ಣನೂರಿ ಮತ್ತು ದಿಲ್ ರಾಜು ನಿರ್ಮಾಣದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 2025ರ ಮಾರ್ಚ್ ನಲ್ಲಿ ಈ ಸಿನೆಮಾ ಬಿಡುಗಡೆ ಕಾಣಲಿದೆ. ಈ ಚಿತ್ರಗಳ ನಂತರ ಮದುವೆಯಾಗುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ವಿಜಯ್ ದೇವರಕೊಂಡ ಜೊತೆ 6 ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ರಶ್ಮಿಕಾ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಸದ್ಯ ಸಲ್ಮಾನ್ ಖಾನ್ ಜೊತೆಗೆ ಸಿಕಂದರ್ ಸಿನಿಮಾದಲ್ಲಿ ನಟಿಸ್ತಾ ಇರೋ ರಶ್ಮಿಕಾ, ಅದಕ್ಕೆ ಪಡೆದಿರೋ ಸಂಭಾವನೆ ಬರೊಬ್ಬರಿ 10 ಕೋಟಿ. ಇಡೀ ಇಂಡಿಯನ್ ಸಿನಿಲೋಕದಲ್ಲಿ ಅತಿಹೆಚ್ಚು ಸಂಭಾವನೆ ಪಡೆದಿರೋ ನಟಿ ಅನ್ನೋ ಪಟ್ಟ ಗಳಿಸಿಕೊಂಡಿದ್ದಾರೆ.
ಚುಮು ಚುಮು ಚಳಿಯಲ್ಲಿ ಸ್ವಿಮ್ಮಿಂಗ್ ವಿಡಿಯೋ ಶೇರ್ ಮಾಡಿ ಬಿಸಿಯೇರಿಸಿದ ನಟಿ ಜ್ಯೋತಿ ರೈ