ಬಾಲಿವುಡ್‌ಗೆ ಹಾರಿದ ರಶ್ಮಿಕಾ ಮಂದಣ್ಣ, ಅವರನ್ನೇ ಇಲ್ಲಿಗೆ ಕರೆಸಿದ ಯಶ್; ಟ್ರೋಲ್ ವೈರಲ್!

ವೈರಲ್ ಅಯ್ತು ಯಶ್ ಮತ್ತು ರಶ್ಮಿಕಾ ಮಂದಣ್ಣ ಟ್ರೋಲ್ ಬಿಟ್ಟು ಹೋದವರು ಮತ್ತು ಕರೆದುಕೊಂಡು ಬಂದವರು ಎನ್ನುತ್ತಿರುವುದು ಯಾಕೆ?
 

Rashmika Mandanna entered bollywood KGF Yash brought them to Karnataka vcs

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಯಾವಾಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಆಗಲೇ ಅಪಾರ ಸಂಖ್ಯೆಯಲ್ಲಿ ಕನ್ನಡರ ಪ್ರೀತಿಯನ್ನು ಕಳೆದುಕೊಂಡರು. ಇರ್ಲಿ ಒಂದೆರಡು ಸಿನಿಮಾ ಮಾಡ್ಕೊಂಡು ಮತ್ತೆ ಕನ್ನಡಕ್ಕೆ ಬರ್ತಾರೆ ಅಂತ ನೋಡಿದರೆ ಸೀದಾ ಬಾಲಿವುಡ್‌ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇನ್ನು ಬರುವ ಮಾತು ಎಲ್ಲಿ? ಬಿ-ಟೌನ್ ಸ್ಟಾರ್ ನಟ-ನಟಿಯರ ಜೊತೆ ಸೇರಿ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದಾರೆ. 

So, ಕನ್ನಡ ಸಿನಿಮಾಗಳನ್ನು ತಿರಸ್ಕರಿಸುತ್ತಿರುವ ರಶ್ಮಿಕಾ ಕನ್ನಡ ಬಿಟ್ಟು ಬಿ-ಟೌನ್‌ಗೆ ಹಾರಿದ ರಶ್ಮು ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಅಗುತ್ತಿದೆ. ಯಾಕೆ ರಶ್ಮಿಕಾ ಬಗ್ಗೆ ಹೇಳುತ್ತಿದ್ದೀವಿ ಎಂದು ತಲೆ ಕೆಡಿಸಿಕೊಳ್ಳಬೇಡಿ...ಇಲ್ಲಿ ರಾಕಿಂಗ್ ಸ್ಟಾರ್ ಯಶ್ ಪಾತ್ರ ಕೂಡ ಇದೆ.. 

ಬಿದಿರು ಬೊಂಬೆ ತರ ಕಾಣ್ತಿದ್ದೀರಿ; ರಶ್ಮಿಕಾ ಮಂದಣ್ಣ ಏನ್ ಮಾಡಿದ್ರೂ ಸಮಸ್ಯೆ ಗುರು

ಹೌದು! ರಾಕಿಂಗ್ ಸ್ಟಾರ್ ಯಶ್ ಸ್ಟಾರ್ ನಟನಾಗಿ ಹೆಸರು ಮಾಡುವ ಮೊದಲು ರಂಗಭೂಮಿ ಹಾಗೂ ಸಣ್ಣ ಪುಟ್ಟ ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದರು. ಸಿನಿಮಾ ಮಾಡಲೇ ಬೇಕು ಎಂದು ಹಠ ಮಾಡಿ ಮೈಸೂರು ಬಿಟ್ಟು ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ರಾತ್ರಿ ಮಲಗಿ ಊಟ ಮಾಡಲು ಹಣವಿಲ್ಲ ಕಷ್ಟ ಪಟ್ಟ ದಿನಗಳಿದೆ. ಇದಾದ ಮೇಲೆ ಕಿರಾತಕ, ಲಕ್ಕಿ, ಗೂಗ್ಲಿ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಕೂಲ್ ಸಿನಿಮಾಗಳನ್ನು ಮಾಡಿ ಆನಂತರ ಹೊಂಬಾಳೆ ಫಿಲ್ಮ್‌ ಜೊತೆ ಕೈ ಜೋಡಿಸಿ ಕೆಜಿಎಫ್ ಸಿನಿಮಾ ಮಾಡಿದರು. ಸೂಪರ್ ಹಿಟ್ ಆಗಿರುವ ಕೆಜಿಎಫ್ ಸಿನಿಮಾವನ್ನು ಇಡೀ ದೇಶವೇ ಮೆಚ್ಚಿಕೊಂಡಿತ್ತು, ಎರಡನೇ ಭಾಗ ತಯಾರಿಯಲ್ಲಿದೆ ಚಿತ್ರೀಕರಣ ಶುರುವಾಗಲಿದೆ ಎನ್ನುವ ಮಾತುಗಳು ಬರುತ್ತಿದ್ದಂತೆ ಬಾಲಿವುಡ್ ಮಂದಿ ಆಸಕ್ತಿ ತೋರಿಸಿದರು. ಹೀಗಾಗಿ ಕೆಜಿಎಫ್ ಎರಡನೇ ಭಾಗದಲ್ಲಿ ರವೀಣಾ ಟೆಂಡನ್ ಮತ್ತು ಸಂಜಯ್ ದತ್ ನಟಿಸಿದ್ದಾರೆ. ಭಾಗ 1 ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ ಪ್ರಚಾರ ಹೆಚ್ಚು ಮಾಡಿದ್ದು ಕರ್ನಾಟಕದಲ್ಲಿ ಆದರೆ ಈ ಸಲ ಪ್ರಚಾರಕ್ಕೆ ಬಿ-ಟೌನ್ ಸಾಥ್ ಕೊಟ್ಟಿದೆ. ಸಂಜಯ್ ದತ್ ಮತ್ತು ರವೀಣಾ ಟೆಂಡನ್‌ ಸಣ್ಣ ಪುಟ್ಟ ಎಂದು ಲೆಕ್ಕ ಮಾಡದೆ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದು. 

ನಾನು ಪೊಸೆಸಿವ್‌ ಅಮ್ಮ; ಸಮಂತಾಳ ಆರೋಗ್ಯದ ಬಗ್ಗೆ ರಶ್ಮಿಕಾ ಮಂದಣ್ಣ ಫಸ್ಟ್‌ ರಿಯಾಕ್ಷನ್ ವೈರಲ್

ಅವಕಾಶ ಹುಡುಕಿಕೊಂಡು ಬಾಲಿವುಡ್‌ಗೆ ಹೋಗಿ ಅಲ್ಲೇ ಮನೆ ಮಾಡಿಕೊಂಡು ಯಾವ ಕನ್ನಡಿಗನ ಸಹಾಯವಿಲ್ಲ ಪ್ರಚಾರ ಮಾಡುತ್ತಿರುವ ರಶ್ಮಿಕಾ. ಇಡೀ ಬಾಲಿವುಡ್‌ ಮಂದಿನೇ ಮೆಚ್ಚಿಸಿ ಅವರನ್ನೂ ಕರ್ನಾಟಕಕ್ಕೆ ಕರೆಸಿ ಸಿನಿಮಾ ಪ್ರಚಾರ ಮಾಡಿಸಿ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಿಕೊಂಡಿರುವ ಯಶ್‌ಗೂ ದೊಡ್ಡ ವ್ಯತ್ಯಾಸವಿದೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನಾನು ಬಾಲಿವುಡ್ ಹೋಗುತ್ತೇನೆ ಎಂದು ಬೀಗಿ ಹೋಗಿದ್ದು ರಶ್ಮಿಕಾ , ನಾನು ಬಾಲಿವುಡ್‌ನೇ ಕರೆಸುತ್ತೀನಿ ಎಂದು ಸಾಧಿಸಿದ ಯಶ್‌ ಎಂದು ಮೀಮ್ ವೈರಲ್ ಆಗುತ್ತಿದೆ.

Latest Videos
Follow Us:
Download App:
  • android
  • ios